Kichcha Sudeep: ಸ್ಯಾಂಡಲ್‌ವುಡ್ ಸ್ಟಾರ್ ನಟ ಕಿಚ್ಚ ಸುದೀಪ್ (Kichcha Sudeep) ಅವರು ಕನ್ನಡ ನಾಡು, ನುಡಿಯ ಕುರಿತಾಗಿ ಸಾಕಷ್ಟು ಅಭಿಮಾನ ಮತ್ತು ಅಪಾರ ಗೌರವವನ್ನು ಹೊಂದಿರುವ ವ್ಯಕ್ತಿ ಎನ್ನುವುದು ಈಗಾಗಲೇ ಹಲವು ಸಂದರ್ಭಗಳಲ್ಲಿ ಗೊತ್ತಾಗಿದೆ. ಅವರು ಕನ್ನಡಕ್ಕೆ ಅವಮಾನವಾಗುವ ರೀತಿ ಘಟನೆಗಳು ನಡೆದರೆ ಅಲ್ಲಿ ಕಿಚ್ಚು ಖಂಡಿತ ತಮ್ಮ ಧ್ವನಿಯನ್ನು ಎತ್ತುತ್ತಾರೆ ಅನ್ನೋದ್ರಲ್ಲಿ ಎರಡು ಮಾತಿಲ್ಲ.
ಇಂಥದ್ದೇ ಒಂದು ಸನ್ನಿವೇಶ ಇತ್ತೀಚಿಗೆ ಸೈಮಾ (SIIMA) ಪ್ರಶಸ್ತಿ ಸಮಾರಂಭದಲ್ಲಿ ಸಹಾ ನಡೆದಿದೆ. ಹೌದು, ಈ ಬಾರಿಯ ಸೈಮಾ ಅವಾರ್ಡ್ ಸಮಾರಂಭವು ದುಬೈನಲ್ಲಿ ಎರಡು ದಿನಗಳ ಕಾಲ ಬಹಳ ಅದ್ದೂರಿಯಾಗಿ ನಡೆದಿದ್ದು ದಕ್ಷಿಣದ ತಾರೆಯರು ಸಮಾರಂಭದಲ್ಲಿ ಹಾಜರಾಗಿದ್ದರು.
ಈ ವೇಳೆ ಕಾರ್ಯಕ್ರಮ ನಿರೂಪಣೆ (Anchor) ಮಾಡುತ್ತಿದ್ದ ವ್ಯಕ್ತಿ ಈ ʼಕನ್ನಡʼ ಎನ್ನುವ ಪದವನ್ನು ʼಕನ್ನಡ್ʼ ಎಂದು ತಪ್ಪಾಗಿ ಉಚ್ಚಾರಣೆ ಮಾಡಿದ್ದು, ಈ ವೇಳೆ ನಟ ಕಿಚ್ಚ ಸುದೀಪ್ ಅವರು ಕೊಟ್ಟ ಪ್ರತಿಕ್ರಿಯೆಗೆ ಸಾಕಷ್ಟು ಮೆಚ್ಚುಗೆಗಳು ಹರಿದು ಬರುತ್ತಿದೆ.
ಮುಂಬೈ ಜನರುʼ ಕನ್ನಡ್ʼ ಎಂದು ಹೇಳಿದಾಗ ನನಗೆ ಅರ್ಥವಾಗುತ್ತೆ ಆದರೆ ನೀವು ಹೈದರಾಬಾದ್ ಮೂಲದವರಾಗಿ ʼಕನ್ನಡ್ʼ ಅಂತ ಹೇಳೋದು ಸರಿ ಕಾಣಲ್ಲ ಎಂದಿದ್ದಾರೆ ಕಿಚ್ಚ. ತಕ್ಷಣ ನಿರೂಪಕ ಕ್ಷಮಿಸಿ ಎಂದು ಕನ್ನಡ ಎಂದಿದ್ದು, ಕಿಚ್ಚ ಎಸ್ ಕನ್ನಡ ಥ್ಯಾಂಕ್ಯೂ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
Tirupati Travel: ಡಿಸೆಂಬರ್ ನಲ್ಲಿ ತಿರುಪತಿಗೆ ಹೋಗ್ತೀರಾ? ಹಾಗಾದ್ರೆ ಈ ಡೇಟ್ ಬಗ್ಗೆ ಗಮನ ಕೊಡಿ, ಪ್ಲಾನ್ ಮಾಡಿ