Tirupati Travel: ಡಿಸೆಂಬರ್ ನಲ್ಲಿ ತಿರುಪತಿಗೆ ಹೋಗ್ತೀರಾ? ಹಾಗಾದ್ರೆ ಈ ಡೇಟ್ ಬಗ್ಗೆ ಗಮನ ಕೊಡಿ, ಪ್ಲಾನ್ ಮಾಡಿ

Written by Soma Shekar

Published on:

---Join Our Channel---

Tirupati Travel : ಡಿಸೆಂಬರ್ ತಿಂಗಳಲ್ಲಿ ತಿರುಮಲ ತಿರುಪತಿ (Tirupati Travel) ಕ್ಷೇತ್ರಕ್ಕೆ ಹೋಗಿ ಕಲಿಯುಗ ಪ್ರತ್ಯಕ್ಷ ದೈವ ಶ್ರೀವೆಂಕಟೇಶ್ವರ ಸ್ವಾಮಿಯ ದರ್ಶನಕ್ಕೆ ಹೋಗುವ ಪ್ಲಾನ್ ನಿಮ್ಮದಾಗಿದ್ದಲ್ಲಿ ಈ ವಿಷಯವನ್ನು ನೀವು ತಪ್ಪದೇ ತಿಳಿಯಲೇಬೇಕಾಗಿದೆ. ಡಿಸೆಂಬರ್ ನಲ್ಲಿ ತಿರುಪತಿಗೆ ಹೋಗುವವರು ವಿಶೇಷ ದರ್ಶನದ ಟಿಕೆಟ್ ಬುಕ್ಕಿಂಗ್ ಗೆ ಸಿದ್ಧರಾಗಿ.

ಹೌದು, ಡಿಸೆಂಬರ್ ತಿಂಗಳಲ್ಲಿ ತಿರುಪತಿ ಗಿರಿ ವಾಸ ಶ್ರೀವೆಂಕಟೇಶ್ಚರನ ಸನ್ನಿಧಾನಕ್ಕೆ ಹೋಗಲು ಬಯಸುವವರಿಗಾಗಿ ವಿಶೇಷ ದರ್ಶನದ ಟಿಕೆಟ್ ಗಳನ್ನ ಮುಂಗಡವಾಗಿ ಬುಕ್ಕಿಂಗ್ (Special Darshan Ticket Booking) ಮಾಡಿಕೊಳ್ಳಲು ಇದೇ ಸೆಪ್ಟೆಂಬರ್ 19 ರಂದು ಟಿಕೆಟ್ ಗಳು ಬಿಡುಗಡೆ ಆಗಲಿದ್ದು, ನೀವು ಶೀಘ್ರ ದರ್ಶನಕ್ಕೆ ಟಿಕೆಟ್ ಬುಕ್ ಮಾಡಿಕೊಳ್ಳುವುದು ಉತ್ತಮ.

ಟಿಟಿಡಿ ಯ (TTD) ಅಧಿಕೃತ ವೆಬ್‌ಸೈಟ್‌ನಲ್ಲಿ ಲಾಗಿನ್ ಆಗುವ ಮೂಲಕ ಆನ್ಲೈನ್ ನಲ್ಲಿ ವಿಶೇಷ ದರ್ಶನದ ಟಿಕೆಟ್ ಗಳನ್ನು ಡಿಸೆಂಬರ್ ನಲ್ಲಿ ನಿಮಗೆ ಬೇಕಾದ ದಿನಕ್ಕೆ ಬುಕ್ ಮಾಡಿಕೊಳ್ಳಬಹುದಾಗಿದೆ. ಆದರೆ ಆನ್ಲೈನ್ ನಲ್ಲಿ ಬಹಳ ಬೇಗ ಬುಕ್ಕಿಂಗ್ ಕ್ಲೋಸ್ ಆಗುವ ಕಾರಣ ಸರಿಯಾದ ಸಮಯದಲ್ಲಿ ಪ್ರಯತ್ನ ಮಾಡಿ.

ಪವಿತ್ರೋತ್ಸವದ ಹಿನ್ನೆಲೆಯಲ್ಲಿ ತಿರುಮಲದಲ್ಲಿ ಇಂದು, ನಾಳೆ ಮತ್ತು ನಾಡಿದ್ದು ಕಲ್ಯಾಣೋತ್ಸವ, ವಿರಾಮ ದರ್ಶನ, ವೇದಾಶೀರ್ವಾದ, ಕುಂಕುಮಾರ್ಚನೆ ಮತ್ತು ಊಂಜಲ ಸೇವೆಯನ್ನು ಟಿಟಿಡಿ ರದ್ದುಗೊಳಿಸಿದೆ. ನಾಳೆ ಅದ್ದೂರಿಯಾಗಿ ಅನಂತ ಪದ್ಮನಾಭ ವ್ರತವನ್ನು ಆಯೋಜನೆ ಮಾಡಲಾಗಿದೆ.

Bigg Boss Kannada 11: ಈ ಸಲ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡೋದು ಇವರೇ? ವೈರಲ್ ಆಯ್ತು ಸಂಭಾವ್ಯ ಸ್ಪರ್ಧಿಗಳ ಪಟ್ಟಿ

Leave a Comment