Puttakkana Makkalu Serial: ಸಿಂಗಾರಮ್ಮನ ಅಸಲಿಯತ್ತು ಬಯಲಾಯ್ತು, ಪೋಲಿಸಪ್ಪ ಕೊಟ್ಟ ಸುಳಿವು

Written by Soma Shekar

Published on:

---Join Our Channel---

Puttakkana Makkalu: ಪುಟ್ಟಕ್ಕನ ಮಕ್ಕಳು (Puttakkana Makkalu) ಸೀರಿಯಲ್ ನಲ್ಲಿ ಹೊಸ ಟ್ವಿಸ್ಟ್ ಎನ್ನುವಂತೆ ಕೆಲವು ವಾರಗಳ ಹಿಂದೆಯಷ್ಟೇ ಸಿಂಗಾರಮ್ಮನ ಪಾತ್ರವನ್ನು ಪರಿಚಯ ಮಾಡಲಾಗಿತ್ತು. ಬಂಗಾರಮ್ಮನ ಮೇಲೆ ಸೇಡು ತೀರಿಸಿಕೊಳ್ಳಲು ಬಂದ ಸಿಂಗಾರಮ್ಮ ಬಂಗಾರಮ್ಮನ ಆಸ್ತಿಯನ್ನು ಉಡಾಯಿಸಲು ತನ್ನೆಲ್ಲಾ ಪ್ರಯತ್ನಗಳನ್ನು ಮಾಡುತ್ತಿದ್ದಾಳೆ.

ಸ್ನೇಹಾನ (Sneha) ಐಎಎಸ್ ಅಧಿಕಾರಿ ಆಗೋಕೂ ಬಿಡಬಾರದು ಅನ್ನೋ ಪ್ರಯತ್ನ ಮಾಡ್ತಿದ್ದಾಳೆ. ಆದರೆ ಇವೆಲ್ಲವುಗಳ ನಡುವೆ‌ ಸಹನಾಗೆ ಮಾತ್ರ ಬಂಗಾರಮ್ಮನ (Bangaramma) ನಡವಳಿಕೆ ಮೇಲೆ ಅನುಮಾನ ಇತ್ತು. ಆ ಅನುಮಾನ ಈಗ ನಿಜವಾಗಿದೆ.‌ ಬಂಗಾರಮ್ಮನ ವೇಷದಲ್ಲಿ ಇರೋದು ಯಾರು ಅಂತ ಗೊತ್ತಾಗಿದೆ.

ಸಹನಾ ಹೊಟೇಲ್ ಹತ್ತಿರಕ್ಕೆ ಬರುವ ಪೋಲಿಸಪ್ಪನ ಬಳಿ ಈ ವಿಷಯ ಮಾತನಾಡಿದ್ದಾಳೆ ಸಹನಾ. ಈ ವೇಳೆ ಕಾಳಿ ಬಂಗಾರಮ್ಮನ ಫೋಟೋ ತೋರಿಸಿದ್ಧು, ಪೋಲಿಸಪ್ಪ ಅದು ಸಿಂಗಾರಮ್ಮ ಅನ್ನೋ ಖತರ್ನಾಕ್ ಖೈದಿ ಅಂತ ಆಕೆಯ ಅಸಲಿಯತ್ತನ್ನ ತಿಳಿಸಿದ್ದಾನೆ.

ಬಂಗಾರಮ್ಮನ ಜಾಗದಲ್ಲಿ ಇರೋದು ಸಿಂಗಾರಮ್ಮ ಅಂತ ಈಗ ಕಾಳಿ ಮತ್ತು ಸಹನಾ ಇಬ್ಬರಿಗೂ ಗೊತ್ತಾಗಿದೆ. ಈಗ ಇವರಿಬ್ಬರು ಸಿಂಗಾರಮ್ಮನ ಬಣ್ಣ ಬಯಲು ಮಾಡ್ತಾರಾ? ಅಸಲಿ ಬಂಗಾರಮ್ಮನ್ನ ಪತ್ತೆ ಹಚ್ತಾರಾ? ಅನ್ನೋದನ್ನ ಕಾದು ನೋಡಬೇಕಾಗಿದೆ.‌

Manisha Koirala: 12 ಜನರ ಜೊತೆ ಡೇಟಿಂಗ್, ಮದುವೆ ಸಂಬಂಧ ಕೂಡಾ ಉಳೀಲಿಲ್ಲ, ಸ್ಟಾರ್ ನಟಿಯ ಗೋಳಿನ ಕಥೆ

Leave a Comment