Beetroot face Packs: ಅನೇಕರು ತಮ್ಮ ತ್ವಚೆ ಅದರಲ್ಲೂ ವಿಶೇಷವಾಗಿ ಮುಖದ ಚರ್ಮದ ಆರೈಕೆಗಾಗಿ ಸಾಕಷ್ಟು ಗಮನವನ್ನು ನೀಡುತ್ತಾರೆ. ಅಂತಹವರು ತಮ್ಮ ಮುಖದ ಚರ್ಮ ಕಾಂತಿಯುತವಾಗಿರಲು ಮತ್ತು ಮುಖದ ಮೇಲೆ ಮೂಡುವ ಅಕಾಲಿಕ ಸುಕ್ಕನ್ನ ಒಂದು ಬೀಟ್ರೂಟ್ ನಿಂದ (Beetroot Face Pack) ತಡೆಯಬಹುದು. ಬೀಟ್ರೂಟ್ ನಲ್ಲಿರುವ ವಿಟಮಿನ್ ಸಿ ತ್ವಚೆಯು ಉತ್ತಮವಾಗಿರುವಂತೆ ನೆರವನ್ನು ನೀಡುತ್ತದೆ.
ಇದು ಕೊಲಜನ್ ಉತ್ಪಾದನೆ ಹೆಚ್ಚಿಸಿ ಚರ್ಮದ ಆರೋಗ್ಯಕ್ಕೆ ಪರಿಣಾಮಕಾರಿಯಾಗಿದೆ. ಬೀಟ್ರೂಟ್ ಅನ್ನು ತುರಿದು, ಮೊಸರು ಹಾಗೂ ಬಾದಾಮಿ ಜೊತೆ ಮಿಶ್ರಣ ಮಾಡಿ, ಇದನ್ನು ಮುಖದ ಮೇಲೆ ಹಾಕಿ ಇಪ್ಪತ್ತು ನಿಮಿಷಗಳ ಕಾಲ ಬಿಡಿ, ಅನಂತರ ಅದನ್ನು ತೊಳೆಯಿರಿ. ಇದರಿಂದ ಮೊಡವೆಗಳು ಹೋಗುತ್ತವೆ.
ಬೀಟ್ರೂಟ್ ಅನ್ನು ನುಣ್ಣಗೆ ರುಬ್ಬಿ, ಜೇನು ತುಪ್ಪದ ಜೊತೆಗೆ ಮಿಕ್ಸ್ ಮಾಡಿ ಅದನ್ನು ಮುಖದ ಮೇಲೆ ಅನ್ವಯಿಸಿ ಸುಮಾರು ಹದಿನೈದು ನಿಮಿಷಗಳ ಕಾಲ ಬಿಟ್ಟು ಅನಂತರ ಬೆಚ್ಚಗಿರುವ ನೀರಿನಿಂದ ಮುಖವನ್ನು ತೊಳೆಯಿರಿ. ಹೀಗೆ ಮಾಡುವುದರಿಂದ ಚರ್ಮದ ಸುಕ್ಕು ಮಾಯವಾಗುವುದು.
ಬೀಟ್ರೂಟ್ ರಸವನ್ನು (Beetroot Juice) ಮುಲ್ತಾನಿ ಮಿಟ್ಟಿಯೊಂದಿಗೆ ಸೇರಿಸಿ ಗಟ್ಟಿ ಪೇಸ್ಟ್ ಮಾಡಿ ಮುಖಕ್ಕೆ ಹಾಕಿ, ಒಣಗಿದ ನಂತರ ಬೆಚ್ಚಗಿನ ನೀರಿನಿಂದ ತೊಳೆಯಿರಿ. ಇದರಿಂದ ಮುಖದ ಮೇಲೆ ಮೂಡುವ ತೈಲ ಅಂಶ ಕಡಿಮೆಯಾಗುತ್ತದೆ. ಎಣ್ಣೆ ಚರ್ಮದ ಸಮಸ್ಯೆಗೆ ಇದು ಪರಿಹಾರವಾಗಿದೆ.
Jyothi Rai: ನೆಟ್ಟಿಗರಿಗೆ ಶಾಕ್ ಕೊಟ್ಟ ಜ್ಯೋತಿ ರೈ, ಕಾಮೆಂಟ್ ಮಾಡೋರಂತೂ ಸುಸ್ತು, ಇಷ್ಟಕ್ಕೂ ನಟಿ ಮಾಡಿದ್ದೇನು ?