Lakshmi Nivasa Serial: ಇದು ಜಸ್ಟ್ ಲಕ್ಷ್ಮೀ ನಿವಾಸ ಅಲ್ಲ ಇದೊಂದು ನಿಗೂಢ ನಿವಾಸ, ಇಷ್ಟೆಲ್ಲಾ ಗುಟ್ಟುಗಳು ರಟ್ಟಾಗೋದು ಯಾವಾಗ ?

Written by Soma Shekar

Updated on:

---Join Our Channel---

Lakshmi Nivasa Serial : ಲಕ್ಷ್ಮಿ ನಿವಾಸ ಸೀರಿಯಲ್ (Lakshmi Nivasa Serial) ಸದ್ಯಕ್ಕೆ ನಂಬರ್ ಒನ್ ಸೀರಿಯಲ್ ಪಟ್ಟವನ್ನು ಪಡೆದಿರುವ ಜನಪ್ರಿಯ ಸೀರಿಯಲ್, ಬಹುತಾರಾಗಣದ ಈ ಸೀರಿಯಲ್ ಬಹಳ ಬೇಗ ಜನಮೆಚ್ಚುಗೆಯನ್ನು ಪಡೆದಿದೆ. ಇತರೆ ಧಾರಾವಾಹಿಗಳಂತೆ ಅರ್ಧ ಗಂಟೆಯಲ್ಲ ಪ್ರತಿದಿನ ಒಂದು ಗಂಟೆಯ ಅವಧಿಗೆ ಪ್ರಸಾರವಾಗುವ ಈ ಸೀರಿಯಲ್ ಗೆ ಅಪಾರ ಪ್ರೇಕ್ಷಕರು ಅಭಿಮಾನಿಗಳಾಗಿದ್ದಾರೆ.

ಹೀಗೆ ಜನಪ್ರಿಯತೆ ಪಡೆದಿರುವ ಲಕ್ಷ್ಮೀ ನಿವಾಸ ಸೀರಿಯಲ್ ನಲ್ಲಿ ರಹಸ್ಯಗಳಿಗೇನೂ ಕಡಿಮೆ ಇಲ್ಲ ಎಂದೇ ಹೇಳಬಹುದು. ಒಂದರ್ಥದಲ್ಲಿ ಇದು ನಿಗೂಢ ನಿವಾಸವು ಹೌದು. ಯಾಕೆ ಅನ್ನೋದಾದ್ರೆ ಇಲ್ಲಿ ಬಯಲಾಗದೇ ಇರೋ ರಹಸ್ಯಗಳು ಒಂದಲ್ಲಾ ಎರಡಲ್ಲಾ ಬಹಳಷ್ಟಿದೆ ಅಂತಾನೇ ಹೇಳಬಹುದು.

ಲಕ್ಷ್ಮೀ, ಶ್ರೀನಿವಾಸ್ ಗೆ ಅಳಿಯ ಮತ್ತು ಜಾನು ಗೆ ಗಂಡ ಜಯಂತ್ ನ ಇನ್ನೊಂದು ಮುಖದ ಪರಿಚಯ ಇಲ್ಲ. ವಿಶ್ವನಿಗೆ ಲಕ್ಷ್ಮಿ ತನ್ನ ಅತ್ತೆ, ಜಾನು ಅತ್ತೆ ಮಗಳು ಅನ್ನೋದು ಗೊತ್ತಿಲ್ಲ. ಭಾವನಾಗೆ (Bhavana) ತನಗೆ ತಾಳಿ ಕಟ್ಟಿದವನು ಯಾರಂತ ಗೊತ್ತಿಲ್ಲ, ಫೋನ್ ನಲ್ಲಿ ಮಾತಾಡೋ ಗೌಡ್ರು ಸಿದ್ಧು ಅಂತ ಗೊತ್ತಿಲ್ಲ. ಸಂತೋಷನಿಗೆ ಕಳೆದು ಹೋದ ಐದು ಲಕ್ಷ ರೂಪಾಯಿ ಏನಾಯ್ತೋ ಇದುವರೆಗೂ ಗೊತ್ತಾಗಿಲ್ಲ.

ಇನ್ನು ಹರೀಶ ಬ್ಯುಸಿನೆಸ್ ಲಾಸ್ ಮಾಡ್ಕೊಂಡಿರೋರು ಮನೇಲಿ ಯಾರಿಗೂ ಗೊತ್ತಿಲ್ಲ. ಸಿದ್ಧುನ (Siddu) ಮದ್ವೆ ಆಗೋಕೆ ಹೊರಟಿರೋ ಪೂರ್ವಿಗೆ ಸಿದ್ಧುಗೆ ಈಗಾಗಲೇ ಮದುವೆ ಆಗಿದೆ ಅನ್ನೋ ವಿಚಾರ ಗೊತ್ತಿಲ್ಲ. ಭಾವನಾ ಮದುವೆ ನಿಂತಿದ್ದು ಆ್ಯಕ್ಸಿಡೆಂಟ್ ನಿಂದ ಆ ಆ್ಯಕ್ಸಿಡೆಂಟ್ ಹೇಗಾಯ್ತು ಅನ್ನೋದು ಇನ್ನೂ ಯಾರಿಗೂ ಗೊತ್ತಿಲ್ಲ.

ಹೀಗೆ ಲಕ್ಷ್ಮೀ ನಿವಾಸದಲ್ಲಿ ಸಾಕಷ್ಟು ಗುಟ್ಟುಗಳು ರಟ್ಟಾಗಬೇಕಿದೆ. ಇದೆಲ್ಲವನ್ನು ನೋಡಿದಾಗ ಅನಿಸೋದು ಲಕ್ಷ್ಮೀ ನಿವಾಸ ಒಂದು ನಿಗೂಢ ನಿವಾಸ ಸಹಾ ಆಗಿದೆ ಅಂತ‌. ಈ ಎಲ್ಲಾ ರಹಸ್ಯಗಳು ಹೊರಗೆ ಬರೋದಕ್ಕೆ ಖಂಡಿತ ಸಾಕಷ್ಟು ಸಮಯ ಬೇಕು ಅನ್ನೋದಂತೂ ಸತ್ಯ.

Naga Chaitanya: ಈಗ ಆ ವಿಷ್ಯ ಬೇಡ, ಮಾದ್ಯಮಗಳ ಮುಂದೆ ಆ ವಿಷಯ ಮಾತಾಡೋಕೆ ನಾಗಚೈತನ್ಯ ಹಿಂದೇಟು

Leave a Comment