Sreeleela: ಎಷ್ಟು ಕೋಟಿ ಕೊಟ್ರು ಆಗಲ್ಲ, ಒಂದಲ್ಲಾ ಎರಡು ಬಿಗ್ ಆಫರ್ ಗಳಿಗೆ NO ಹೇಳಿ ಸಂಚಲನ ಸೃಷ್ಟಿಸಿದ ಶ್ರೀಲೀಲಾ

Written by Soma Shekar

Published on:

---Join Our Channel---

Sreeleela: ಕನ್ನಡದಿಂದ ಟಾಲಿವುಡ್ ಗೆ ಎಂಟ್ರಿ ನೀಡಿದ ನಟಿಯರು ಬಹಳ ಬೇಗ ಅಲ್ಲಿ ಸ್ಟಾರ್ ನಟಿಯರಾಗುತ್ತಿದ್ದಾರೆ ಅನ್ನೋದಕ್ಕೆ ಸಾಕಷ್ಟು ಜನ ನಟಿಯರು ಉದಾಹರಣೆಯಾಗಿದ್ದಾರೆ. ಅಂತಹ ನಟಿಯರಲ್ಲಿ ಶ್ರೀಲೀಲಾ (Sreeleela) ಸಹಾ ಒಬ್ಬರು. ತೆಲುಗು ಸಿನಿಮಾ ರಂಗದಲ್ಲಿ ಬಹಳ ಕಡಿಮೆ ಸಮಯದಲ್ಲಿ ಬಹುಬೇಡಿಕೆಯ ನಟಿಯಾಗಿ ಹಾಗೂ ಸ್ಟಾರ್ ನಟಿಯಾಗಿ ಗುರುತಿಸಿಕೊಂಡಿದ್ದಾರೆ ನಟಿ ಶ್ರೀಲೀಲಾ.

ಆದರೆ ಇತ್ತೀಚಿಗೆ ನಟಿಯ ಸಿನಿಮಾಗಳು ಅಷ್ಟೇನೂ ಯಶಸ್ಸು ಪಡೆಯದ ಕಾರಣ ಸದ್ಯಕ್ಕೆ ಪವನ್ ಕಲ್ಯಾಣ್ (Pawan Kalyan) ಸಿನಿಮಾವೊಂದರಲ್ಲಿ ಮತ್ತು ನಿತಿನ್ ಜೊತೆಗಿನ ಒಂದು ಸಿನಿಮಾ ಬಿಟ್ಟರೆ ನಟಿ ಬೇರೆ ಯಾವುದೇ ಸಿನಿಮಾಗಳನ್ನು ಒಪ್ಪಿಕೊಂಡಿಲ್ಲ ಎನ್ನುವುದು ಸತ್ಯ. ಆದರೆ ಇವೆಲ್ಲವುಗಳ ನಡುವೆಯೇ ನಟಿಗೆ ಐಟಂ ಸಾಂಗ್ ಗಳ ಅವಕಾಶಗಳು ಬರುತ್ತಿವೆ.

ಕೆಲವೇ ದಿನಗಳ ಹಿಂದೆಯಷ್ಟೇ ಶ್ರೀಲೀಲಾ ಮೆಗಾಸ್ಟಾರ್ ಚಿರಂಜೀವಿ (Chiranjeevi) ಅವರ ಸಿನಿಮಾದ ವಿಶೇಷ ಹಾಡಿಗೆ ಹೆಜ್ಜೆ ಹಾಕುವ ಅವಕಾಶ ತಿರಸ್ಕರಿಸಿದ ವಿಚಾರ ದೊಡ್ಡ ಸುದ್ದಿಯಾಗಿರುವಾಗಲೇ ಈಗ ಮತ್ತೊಂದು ಸುದ್ದಿ ಗಮನ ಸೆಳೆದಿದೆ. ಬಾಲಿವುಡ್ ಮತ್ತು ತಮಿಳಿನ ಪ್ರತಿಷ್ಠಿತ ನಿರ್ಮಾಣ ಸಂಸ್ಥೆಯೊಂದು ಶ್ರೀಲೀಲಾಗೆ ಐಟಂ ಸಾಂಗ್ ಗೆ ಆಫರ್ ಕೊಟ್ಟಿದ್ದಾರೆ ಎನ್ನಲಾಗಿದೆ.

ದುಬಾರಿ ಸಂಭಾವನೆಯ ಆಫರ್ ಕೊಟ್ಟರೂ ನಟಿ ಕೆರಿಯರ್ ದೃಷ್ಟಿಯಿಂದ ಈಗಲೇ ಅಂತಹ ಹಾಡುಗಳಲ್ಲಿ ನಟಿಸುವುದು ಸೂಕ್ತವಲ್ಲ ಎನ್ನುವ ಕಾರಣಕ್ಕೆ ಎಷ್ಟೇ ಹಣ ಕೊಟ್ಟರೂ ತಾನು ಐಟಂ ಸಾಂಗ್ ಗಳಲ್ಲಿ ಮಾಡೋದಿಲ್ಲ ಎನ್ನುವ ಉತ್ತರವನ್ನು ನೀಡಿದ್ದಾರೆ ಎನ್ನಲಾಗಿದೆ. ತಮ್ಮ ಡ್ಯಾನ್ಸ್ ನಿಂದಲೇ ಸಖತ್ ಸದ್ದು ಮಾಡಿರುವ ನಟಿಗೆ ಒಂದು ಡ್ಯಾನ್ಸ್ ಗಾಗಿ ದೊಡ್ಡ ಮೊತ್ತ ನೀಡಲು ನಿರ್ಮಾಣ ಸಂಸ್ಥೆಗಳು ಕಾದಿವೆ.

Manu Bhaker: ಈ ಸೌತ್ ನಟ ನನ್ನ ಫೇವರಿಟ್ ಎಂದ ಒಲಂಪಿಕ್ಸ್ ಪದಕ ವಿಜೇತೆ ಮನು ಭಾಕರ್; ಯಾರು ಆ ಹೀರೋ?

Leave a Comment