Sudheer Babu: ಪ್ರಭಾಸ್ ನ ಜೋಕರ್ ಅಂದ ಬಾಲಿವುಡ್ ನಟನ ಗ್ರಹಚಾರ‌ ಬಿಡಿಸಿದ ತೆಲುಗು ನಟ‌ ಸುಧೀರ್ ಬಾಬು

Written by Soma Shekar

Published on:

---Join Our Channel---

Sudheer Babu : ನಾಗ್ ಅಶ್ವಿನ್ (Nag Aswin) ನಿರ್ದೇಶನದಲ್ಲಿ ಮೂಡಿ ಬಂದ ಪ್ರಭಾಸ್ ನಾಯಕನಾಗಿ, ಅಮಿತಾಬ್ ಬಚ್ಚನ್ ಪ್ರಮುಖ ಪಾತ್ರದಲ್ಲಿರುವ ಕಲ್ಕಿ 2898 AD (Kalki 2898 AD) ಸಿನಿಮಾ ಬಿಡುಗಡೆ ನಂತರ ಬ್ಲಾಕ್ ಬಸ್ಟರ್ ಸಿನಿಮಾ ಆಗಿ ಸದ್ದು ಮಾಡಿದ್ದು,‌ ಕಲೆಕ್ಷನ್ ವಿಚಾರದಲ್ಲಿ ಸಾವಿರ ಕೋಟಿಯ ಗಡಿಯನ್ನು ದಾಟಿದೆ. ಆದರೆ ಈ ಸಿನಿಮಾದಲ್ಲಿ ಪ್ರಭಾಸ್ (Prabhas) ಪಾತ್ರದ ಕುರಿತಾಗಿ ಬಾಲಿವುಡ್ ನಟ ಅರ್ಷದ್ ವಾರ್ಸಿ (Arshad Warsi) ಸಂದರ್ಶನವೊಂದರಲ್ಲಿ ಮಾತನಾಡಿ ಟೀಕೆಯನ್ನು ಮಾಡಿದ್ದರು.

ಸಿನಿಮಾದಲ್ಲಿ ಅಮಿತಾಬ್ ಅಭಿನಯ ಅದ್ಭುತವಾಗಿದೆ. ಆದರೆ ಪ್ರಭಾಸ್ ಅವರು ಜೋಕರ್ ಅಂತೆ ಕಂಡಿದ್ದಾರೆ ಎಂದು, ನನಗೆ ಸಿನಿಮಾ ಇಷ್ಟವಾಗಲಿಲ್ಲ ಎಂದೂ ಅರ್ಷದ್ ವಾರ್ಸಿ ಮಾಡಿದ ಕಾಮೆಂಟ್ ಎಲ್ಲೆಡೆ ವೈರಲ್ ಆದ ಮೇಲೆ ಪ್ರಭಾಸ್ ಅಭಿಮಾನಿಗಳು ಆಕ್ರೋಶಗೊಂಡು, ಅರ್ಷದ್ ವಾರ್ಸಿ ಕ್ಷಮೆ ಕೇಳಬೇಕೆಂದು ಆಗ್ರಹಿಸಿದ್ದರು.

ನಟನ ಹೇಳಿಕೆ ಹೊರ ಬಂದ ಮೇಲೆ ನಿರ್ಮಾಪಕ ಅಭಿಷೇಕ್ ಅಗರ್ವಾಲ್, ನಿರ್ದೇಶಕ ಅಜಯ್ ಭೂಪತಿ ಸೇರಿದಂತೆ ಹಲವು ಟಾಲಿವುಡ್ ಸೆಲೆಬ್ರಿಟಿಗಳು ಅರ್ಷದ್ ವಾರ್ಸಿ ಅವರ ಹೇಳಿಕೆಯನ್ನು ಖಂಡಿಸಿದ್ದಾರೆ. ಇದೇ ವೇಳೆ ಟಾಲಿವುಡ್ ನಟ ಸುಧೀರ್ ಬಾಬು ಅವರು ಟ್ವೀಟ್ ಮಾಡಿ ಅರ್ಷದ್ ಅವರ ಬಗ್ಗೆ ಅಸಮಾಧಾನ ಹೊರ ಹಾಕಿದ್ದಾರೆ.

ಸುಧೀರ್ ಬಾಬು (Sudheer Babu) ತಮ್ಮ ಟ್ವೀಟ್ ನಲ್ಲಿ, ರಚನಾತ್ಮಕವಾಗಿ ಟೀಕಿಸುವುದು ಸರಿಯೇ, ಆದರೆ ಕೆಟ್ಟದಾಗಿ ಮಾತನಾಡುವುದು ಎಂದಿಗೂ ಸರಿಯಲ್ಲ. ಅರ್ಷದ್ ವಾರ್ಸಿಯಿಂದ ವೃತ್ತಿಪರತೆಯ ಕೊರತೆಯನ್ನು ನಾನು ಎಂದಿಗೂ ನಿರೀಕ್ಷಿಸಿರಲಿಲ್ಲ. ಸಣ್ಣ ಮನಸ್ಸಿನಿಂದ ಬರುವ ಕಾಮೆಂಟ್‌ಗಳಿಗಿಂತ ಪ್ರಭಾಸ್‌ ನಿಲುವು ತುಂಬಾ ದೊಡ್ಡದಾಗಿದೆ ಎಂದು ಹೇಳಿದ್ದಾರೆ.

SeethaRama Serial : ಸಿಹಿಯ ನಿಜವಾದ ಅಪ್ಪನ ಎಂಟ್ರಿ, ಮೇಘಶ್ಯಾಮ್ ಸಿಹಿಗೆ ಏನಾಗಬೇಕು ?

Leave a Comment