Bigg Boss Kannnada: ಬಿಗ್ ಬಾಸ್ ಫಸ್ಟ್ ಪ್ರೊಮೊ ಬಿಡುಗಡೆ ಮುಹೂರ್ತ ಫಿಕ್ಸ್, ಹೈದ್ರಾಬಾದ್ ನಲ್ಲಿ ನಡೆದ ಶೂಟಿಂಗ್

Written by Soma Shekar

Published on:

---Join Our Channel---

Bigg Boss Kannada: ಕನ್ನಡ ಕಿರುತೆರೆಯ ಬಹು ಜನಪ್ರಿಯ ಹಾಗೂ ಅತಿದೊಡ್ಡ ರಿಯಾಲಿಟಿ ಶೋ ಎನ್ನುವ ಹೆಗ್ಗಳಿಕೆಯನ್ನು ಪಡೆದಿರುವ ಬಿಗ್‌ ಬಾಸ್‌ 10ನೇ ಸೀಸನ್‌ ಮುಗಿದು ವರ್ಷವಾಗುತ್ತಾ ಬರುತ್ತಿದೆ. ಇನ್ನು ಕೆಲವೇ ತಿಂಗಳುಗಳಲ್ಲಿ ವರ್ಷವನ್ನು ಪೂರೈಸಲಿದೆ. ಅದರಲ್ಲೂ ಹತ್ತನೇ ಸೀಸನ್ ಹಿಂದಿನ ಎಲ್ಲಾ ಸೀಸನ್ ಗಳನ್ನು ಮೀರಿ ಸುದ್ದಿಯಾಗಿತ್ತು ಎನ್ನುವುದು ಸತ್ಯ.

ಈಗ ಬಿಗ್ ಬಾಸ್ ನ (Bigg Boss Kannada) ಹೊಸ ಸೀಸನ್ ಅಂದ್ರೆ ಸೀಸನ್ ಹನ್ನೊಂದಕ್ಕಾಗಿ ಈಗಾಗಲೇ ಭರ್ಜರಿ ಸಿದ್ಧತೆಗಳು ಆರಂಭವಾಗಿದೆ ಎನ್ನುವುದಾಗಿ ಮಾದ್ಯಮಗಳಲ್ಲಿ ಒಂದಷ್ಟು ಅಪ್ಡೇಟ್ ಗಳು ಹರಿದಾಡುವ ಮೂಲಕ ಬಿಗ್ ಬಾಸ್ ಶೋ ಅಭಿಮಾನಿಗಳ ಗಮನವನ್ನು ಸೆಳೆಯುತ್ತಿದೆ. ‌

ಬಿಗ್ ಬಾಸ್ ನ ಹೊಸ ಸೀಸನ್ ಯಾವಾಗ ? ಎನ್ನುವ ನಿರೀಕ್ಷೆಯಲ್ಲಿದ್ದ ಪ್ರೇಕ್ಷಕರಿಗೆ ಈಗ ಹೊಸದೊಂದು ಅಪ್ಡೇಟ್ ಹೊರ ಬಂದಿದ್ದು, ಈ ವಿಷಯ ಕೇಳಿ ಅಭಿಮಾನಿಗಳಂತೂ ಸಿಕ್ಕಾಪಟ್ಟೆ ಖುಷಿ ಪಡುತ್ತಿದ್ದಾರೆ.

ಹೊಸ ಅಪ್ಡೇಟ್ ನ ಪ್ರಕಾರ ಕನ್ನಡ ಬಿಗ್‌ ಬಾಸ್‌ ಸೀಸನ್ 11ರ ಮೊದಲ ಪ್ರೋಮೋ ಶೂಟಿಂಗ್ ಮುಕ್ತಾಯವಾಗಿದೆ ಎನ್ನಲಾಗಿದ್ದು, ಶೀಘ್ರದಲ್ಲೇ ಅದು ಬಿಡುಗಡೆ ಆಗಲಿದ್ದು, ಪ್ರಸ್ತುತ ಎಡಿಟಿಂಗ್ ಹಂತದಲ್ಲಿದೆ ಎನ್ನುವುದು ಸುದ್ದಿಯಾಗಿದೆ.

ಈ ಬಾರಿ ಬಿಗ್ ಬಾಸ್ ನ ಹೊಸ ಪ್ರೊಮೋ ವನ್ನು ಹೈದರಾಬಾದ್ ನಲ್ಲಿ (Hyderabad) ಚಿತ್ರೀಕರಣ ಮಾಡಲಾಗಿದೆ ಎನ್ನುವುದು ವಿಶೇಷವಾಗಿದ್ದು, ಪ್ರೊಮೊ‌ ಶೂಟಿಂಗ್ ನಲ್ಲಿ ಸ್ಟಾರ್ ನಟ, ಶೋ ನಿರೂಪಕ ಕಿಚ್ಚ ಸುದೀಪ್ (Kichcha Sudeep) ಭಾಗಿಯಾಗಿದ್ದರೆನ್ನಲಾಗಿದೆ.

ಎಡಿಟಿಂಗ್ ಹಂತದಲ್ಲಿರುವ ಬಿಗ್ ಬಾಸ್ ನ ಹೊಸ ಸೀಸನ್ ನ ಮೊದಲ ಪ್ರೊಮೊ‌ ಆಗಸ್ಟ್ ತಿಂಗಳ ಕೊನೆಯ ಭಾಗದಲ್ಲಿ ಅಥವಾ ಸೆಪ್ಟೆಂಬರ್ ತಿಂಗಳ ಎರಡನೇ ವಾರದಲ್ಲಿ ಪ್ರೇಕ್ಷಕರ ಮುಂದೆ ಬರುತ್ತದೆ ಎನ್ನಲಾಗಿದೆ.

ಈಗಾಗಲೇ ಹೊಸ ಸೀಸನ್ ಗೆ ಸ್ಪರ್ಧಿಗಳ‌ ಹುಡುಕಾಟದ ಪ್ರಕ್ರಿಯೆ ಆರಂಭವಾಗಿದ್ದು, ಸಂಭಾವ್ಯ ಸ್ಪರ್ಧಿಗಳೆಂದು ಕೆಲವು ಸೆಲೆಬ್ರಿಟಿಗಳ ಹೆಸರುಗಳು ಸಹಾ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

Health: ಶ್ವಾಸಕೋಶ ಕ್ಯಾನ್ಸರ್ ಫಸ್ಟ್ ಸ್ಟೇಜ್ ನ ಲಕ್ಷಣಗಳಿವು, ಆರೋಗ್ಯ ಮೊದಲು, ಈ ವಿಷಯ ತಿಳಿದು ಜಾಗೂರಕರಾಗಿರಿ

Leave a Comment