Lakshmi Nivasa: ಕನ್ನಡ ಕಿರುತೆರೆಯಲ್ಲಿ ಜನಪ್ರಿಯತೆ ಪಡೆದು, ಅಪಾರ ಜನ ಮನ್ನಣೆಯನ್ನು ಪಡೆದು ಲಕ್ಷ್ಮೀ ನಿವಾಸ (Lakshmi Nivasa) ಸೀರಿಯಲ್ ಟಾಪ್ ಸೀರಿಯಲ್ ಗಳಲ್ಲಿ ಒಂದಾಗಿದೆ. ಸೀರಿಯಲ್ ನ ಪ್ರತಿಯೊಂದು ಪಾತ್ರವು ಸಹಾ ಪ್ರೇಕ್ಷಕರ ವಿಶೇಷ ಗಮನವನ್ನು ಸೆಳೆದಿದೆ. ಲಕ್ಷ್ಮೀ ನಿವಾಸ ಕಲಾವಿದರು ತೆರೆ ಹಿಂದೆ ಹೇಗೆ ಇರ್ತಾರೆ ಅನ್ನೋದನ್ನ ಫೋಟೋಗಳಲ್ಲಿ ನೋಡೋಣ.
ಲಕ್ಷ್ಮೀ ನಿವಾಸ ಸೀರಿಯಲ್ ನಲ್ಲಿ ವೆಂಕಿ ಪಾತ್ರವನ್ನು ಮಾಡಿರುವ ನಟ ಶಾಸ್ತ್ರಿ ಶಿವಮೊಗ್ಗ ಅವರು ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಒಂದಷ್ಟು BTS ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ.
ಟಿಆರ್ಪಿ ವಿಚಾರದಲ್ಲಿ ಸದಾ ಎರಡನೇಯ ಸ್ಥಾನದಲ್ಲಿ ಮಿಂಚುತ್ತಿರುವ ಲಕ್ಷ್ಮೀ ನಿವಾಸ ಒಂದೆರಡು ವಾರಗಳಲ್ಲಿ ಮೊದಲ ಸ್ಥಾನವನ್ನು ಪಡೆದು ಪುಟ್ಟಕ್ಕನ ಮಕ್ಕಳಿಗೆ ಗಟ್ಟಿ ಪೈಪೋಟಿಯನ್ನು ನೀಡಿತ್ತು.
ಮೇಕಪ್ ಇಲ್ಲದೇ ಮುಖ್ಯ ಕಲಾವಿದರೆಲ್ಲಾ ಕಂಡಿದ್ದು, ಶೂಟಿಂಗ್ ನಡುವೆ ಬಿಡುವಿನ ವೇಳೆಯಲ್ಲಿ ಖುಷಿಯ ಕ್ಷಣಗಳನ್ನು ಕ್ಯಾಮರಾ ಕಣ್ಣಿನಲ್ಲಿ ಸೆರೆ ಹಿಡಿದಿದ್ದು, ಇದು ಅವರ ಅಭಿಮಾನಿಗಳಿಗೆ ಖುಷಿಯನ್ನು ನೀಡಿದೆ.
ಶಾಸ್ತ್ರಿ ಶಿವಮೊಗ್ಗ ಅವರು ಶೇರ್ ಮಾಡಿಕೊಂಡ ಫೋಟೋಗಳನ್ನು ನೋಡಿದ ನೆಟ್ಟಿಗರು ಮತ್ತು ಅಭಿಮಾನಿಗಳು ಕಾಮೆಂಟ್ ಗಳ ಮೂಲಕ ಸಾಕಷ್ಟು ಮೆಚ್ಚುಗೆಗಳನ್ನು ನೀಡಿದ್ದಾರೆ.
ಲಕ್ಷ್ಮೀ ನಿವಾಸ ಸದ್ಯಕ್ಕೆ ಪ್ರತಿದಿನ ರಾತ್ರಿ ಒಂದು ಗಂಟೆಯ ಅವಧಿಯಲ್ಲಿ ಪ್ರಸಾರ ಆಗುತ್ತಿರುವ ಸೀರಿಯಲ್ ಆಗಿದೆ. ಅಲ್ಲದೇ ಈ ಸೀರಿಯಲ್ ಮುಂದಿನ ದಿನಗಳಲ್ಲಿ ನಂಬರ್ ಒನ್ ಸ್ಥಾನಕ್ಕೆ ಬಂದರೂ ಅನುಮಾನವೇ ಇಲ್ಲ.
Arshad Nadeem: ಚಿನ್ನದ ಪದಕ ಗೆದ್ದ ನದೀಮ್ ಪಾಕ್ ಸರ್ಕಾರದ ಮುಂದಿಟ್ಟ ಬೇಡಿಕೆ ಕೇಳಿ ಭಾವುಕರಾದ ಜನ