Sarabjot Singh : ಒಲಂಪಿಕ್ಸ್ ನಲ್ಲಿ ಭಾರತಕ್ಕೆ ಪದಕ ತಂದವರಲ್ಲಿ ಸರಬ್ಜೋತ್ ಸಿಂಗ್ (Sarbjot Singh) ಸಹಾ ಒಬ್ಬರು. ಒಲಂಪಿಕ್ಸ್ ನಲ್ಲಿ 10 ಮೀ ಏರ್ ಪಿಸ್ತೂಲ್ ಮಿಶ್ರ ತಂಡ ವಿಭಾಗದಲ್ಲಿ ಇವರು ಮನು ಭಾಕರ್ ಜೊತೆಗೂಡಿ ಕಂಚಿನ ಪದಕವನ್ನು ಗೆದ್ದಿದ್ದಾರೆ. ಈಗ ಸರಬ್ಜೋತ್ ತನ್ನ ಗೆಲುವಿಗೆ ಪ್ರತಿಫಲವಾಗಿ ತಮ್ಮನ್ನು ಅರಸಿ ಬಂದಂತಹ ಸರ್ಕಾರಿ ಕೆಲಸದ ಆಫರ್ ಅನ್ನು ತಿರಸ್ಕರಿಸಿದ್ದಾರೆ.
ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ (Paris Olympics) ಮನು ಭಾಕರ್ (Manu Bhaker) ಮತ್ತು ಸರಬ್ಜೋರ್ ಜೋಡಿ ಕಂಚು ಗೆಲ್ಲುವ ಮೂಲಕ ಮೆಚ್ಚುಗೆ ಪಡೆದಿದ್ದರು. ಪದಕ ಗೆದ್ದು ಭಾರತಕ್ಕೆ ಮರಳಿದ ಸರಬ್ಜೋತ್ ಸಿಂಗ್ ಅವರಿಗೆ ಹರಿಯಾಣ ಸರ್ಕಾರವು ಉದ್ಯೋಗವನ್ನು ನೀಡಿದೆ. ಆದರೆ ಸರಬ್ಜೋತ್ ತಮಗೆ ದಕ್ಕಿದ ಉದ್ಯೋಗವನ್ನು ನಯವಾಗಿಯೇ ತಿರಸ್ಕರಿಸಿ ಕಾರಣ ತಿಳಿಸಿದ್ದಾರೆ.
ಸರಬ್ಜೋತ್ ತಾನು ಉದ್ಯೋಗ ಏಕೆ ನಿರಾಕರಿಸುತ್ತಿರುವುದಾಗಿ ಹೇಳಿದ್ದು, ಇದು ಸರ್ಕಾರಿ ಉದ್ಯೋಗವನ್ನು ಪಡೆದುಕೊಳ್ಳುವುದಕ್ಕೆ ಸೂಕ್ತ ಸಮಯವಲ್ಲ ಎಂದಿದ್ದಾರೆ. ಶೂಟಿಂಗ್ ನಲ್ಲಿ ನಾನು ಇನ್ನೂ ನನ್ನ ಗುರಿಯನ್ನು ಸಾಧಿಸಿಲ್ಲ. ಆದ್ದರಿಂದ ಈ ಸಮಯದಲ್ಲಿ ನನ್ನ ಪ್ರಮುಖ ಆದ್ಯತೆ ಶೂಟಿಂಗ್ ಮಾತ್ರ ಎಂದು ಹೇಳಿದ್ದಾರೆ.
ಉದ್ಯೋಗ ಚೆನ್ನಾಗಿಯೇ ಇದೆ. ಆದರೆ ನಾನು ನನ್ನ ಗಮನವನ್ನು ಶೂಟಿಂಗ್ ಕಡೆಗೆ ಕೇಂದ್ರೀಕರಿಸಬೇಕಾಗಿದೆ. ನನ್ನ ಕುಟುಂಬದವರೂ ನನಗೆ ಯೋಗ್ಯವಾದ ಕೆಲಸ ಕೊಡಿ ಎಂದಿದ್ದಾರೆ ಆದರೆ ನಾನೀಗ ಶೂಟಿಂಗ್ ಮುಂದುವರಿಸಲು ಬಯಸುತ್ತೇನೆ ಮತ್ತು ನಾನು ನನ್ನ ನಿರ್ಧಾರಗಳಿಗೆ ವಿರುದ್ಧವಾಗಿ ಹೋಗುವುದಿಲ್ಲ ಎಂದು ಹೇಳುತ್ತಾ ಈಗ ಸರ್ಕಾರಿ ಕೆಲಸಕ್ಕೆ ಹೋಗುವುದಿಲ್ಲ ಎಂದಿದ್ದಾರೆ.
Samsung Galaxy Z Fold6 : ಈ ಫೋನ್ ಬೆಲೆಗೆ ಒಂದು ಸೆಕೆಂಡ್ ಹ್ಯಾಂಡ್ ಕಾರು ಖರೀದಿ ಮಾಡಬಹುದು, ಬೆಲೆ ಗೊತ್ತಾದ್ರೆ