John Abraham : ಬಾಲಿವುಡ್ ನಲ್ಲಿ ಫಿಟ್ನೆಸ್ ನಿಂದಲೇ ಗಮನ ಸೆಳೆದಿರುವ ನಟ ಜಾನ್ ಅಬ್ರಹಾಂ (John Abraham). ಜಿಸ್ಮ್ ಸಿನಿಮಾ ಮೂಲಕ ತಮ್ಮ ಸಿನಿ ಕೆರಿಯರ್ ಆರಂಭಿಸಿದ ಈ ನಟ ಅರವತ್ತಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಈಗ ಈ ನಟನ ವಯಸ್ಸು 51 ಆದರೂ ಇಂದಿಗೂ ಯುವ ನಟನಂತೆ ಕಾಣುವ ನಟ ಫಿಟ್ನೆಸ್ ಗೆ ಹೆಚ್ಚು ಆದ್ಯತೆಯನ್ನು ನೀಡುತ್ತಾ ಬಂದಿದ್ದಾರೆ.
ಈ ನಟ ಮದ್ಯಪಾನ, ಧೂಮಪಾನ, ಗುಟ್ಕಾ, ಪಾನ್ ಮಸಾಲಾ ಗಳಂತಹ ಜಾಹೀರಾತುಗಳಿಂದ ದೂರವೇ ಉಳಿದಿರುವ ಜಾನ್ ಜೀವನದಲ್ಲಿ ಕೆಲವೊಂದು ನಿಯಮಗಳನ್ನು ಅಳವಡಿಸಿಕೊಂಡಿದ್ದಾರೆ. ಇದೀಗ ನಟ ಜಾನ್ ಗುಟ್ಕಾ, ಪಾನ್ ಮಸಾಲ ಜಾಹೀರಾತುಗಳಲ್ಲಿ ನಟಿಸುವ ಬೇರೆ ಸ್ಟಾರ್ ಗಳ ಕುರಿತಾಗಿ ಮಾತನಾಡಿ ಗಮನ ಸೆಳೆದಿದ್ದಾರೆ.
ಜಾನ್ ಮಾತನಾಡುತ್ತಾ, “ನಾನು ಪ್ರಾಮಾಣಿಕನಾಗಿದ್ದರೆ, ನಾನೇನು ಉಪದೇಶ ನೀಡುತ್ತೀನೋ ಹಾಗೆ ನಾನು ಬದುಕಬೇಕು. ಹಾಗಿದ್ದಾಗ ಮಾತ್ರ ನನ್ನನ್ನ ರೋಲ್ ಮಾಡೆಲ್ ಎನ್ನಬಹುದು. ಆದರೆ ನಾನು ಸಾರ್ವಜನಿಕವಾಗಿ ಒಂದು ತರ, ಖಾಸಗಿಯಾಗಿ ಇನ್ನೊಂದು ತರ ಇದ್ರೆ ಅದು ಗೊತ್ತಾಗಿಬಿಡುತ್ತೆ. ಫಿಟೈಸ್ ಬಗ್ಗೆ ಮಾತನಾಡೋರೆ ಪಾನ್ ಮಸಾಲಾ ಉತ್ಪನ್ನಗಳನ್ನು ಪ್ರಚಾರ ಮಾಡುತ್ತಾರೆ.
ನಾನು ನನ್ನ ಚಿತ್ರರಂಗದ ಗೆಳೆಯರುನ್ನು ಪ್ರೀತಿಸುತ್ತೇನೆ. ಅವರಿಗೆ ಅಗೌರವ ತೋರಿಸುತ್ತಿಲ್ಲ. ಪಾನ್ ಮಸಾಲಾ ಉತ್ಪನ್ನಗಳು ಭಾರತದಲ್ಲಿ ವಾರ್ಷಿಕ 45 ಸಾವಿರ ಕೋಟಿ ವಹಿವಾಟು ನಡೆಸುತ್ತವೆ. ಸರ್ಕಾರವೂ ಅದನ್ನು ಅಕ್ರಮ ಅಂತ
ಘೋಷಿಸಿಲ್ಲ. ಹೀಗಾಗಿ ಸಾವನ್ನು ಮಾರುತ್ತಿದ್ದಾರೆ’ ಎಂದು ಜಾನ್ ಬೇಸರವನ್ನು ವ್ಯಕ್ತಪಡಿಸಿದ್ದಾರೆ.
Sathya Serial : ಮುಖ್ಯವಾದ ಪ್ರಶ್ನೆಗಳಿಗೆ ಉತ್ತರ ಕೊಡದೇ ಕಿರುತೆರೆಗೆ ಟಾ ಟಾ ಹೇಳಿದ ಸತ್ಯ, ಪ್ರೇಕ್ಷಕರ ಅಸಮಾಧಾನ