Jyothi Rai: ಕನ್ನಡ ಬಿಗ್ ಬಾಸ್ ಗೆ ಹಾಟ್ ಬೆಡಗಿ ಜ್ಯೋತಿ ರೈ, ಸ್ವತಃ ನಟಿಯೇ ಕೊಟ್ಟ ಮಾಹಿತಿಗೆ ಫ್ಯಾನ್ಸ್ ಥ್ರಿಲ್

Written by Soma Shekar

Published on:

---Join Our Channel---

Jyothi Rai: ಖಾಸಗಿ ಜೀವನದಲ್ಲಿ ಏನಾದರೂ ಎಡವಟ್ಟು ಮಾಡಿಕೊಂಡು ಸುದ್ದಿಯಾದವರು, ವಿವಾದಗಳಿಂದ ಸದ್ದು ಮಾಡಿದವರು ಮತ್ತು ಟ್ರೋಲ್ ಗೆ ಒಳಗಾದವರು ಖಂಡಿತ ಬಿಗ್ ಬಾಸ್ ಗೆ ಸ್ಪರ್ಧಿಯಾಗಿ ಎಂಟ್ರಿ ಕೊಡ್ತಾರೆ ಅನ್ನೋದು ಎಲ್ಲರಿಗೂ ಗೊತ್ತೇ ಇದೆ. ಕನ್ನಡದಲ್ಲಿ ಈಗ ಬಿಗ್ ಬಾಸ್ ನ 11 ನೇ ಸೀಸನ್ ಗೆ (Bigg Boss Kannada 11) ಸಿದ್ಧತೆಗಳು ಆರಂಭವಾಗಿದ್ದು ಅದರ ನಡುವೆಯೇ ಹೊಸದೊಂದು ಆಸಕ್ತಿಕರ ಸುದ್ದಿ ಗಮನ ಸೆಳೆಯುತ್ತಿದೆ.

ತಮ್ಮ ಹಾಟ್ ಫೋಟೋಗಳಿಂದಲೇ ಸೋಶಿಯಲ್ ಮೀಡಿಯಾಗಳಲ್ಲಿ ಕಿಚ್ಚನ್ನು ಹೊತ್ತಿಸಿರುವ ನಟಿ ಜ್ಯೋತಿ ರೈ (Jyothi Rai) ಅವರಿಗೆ ಬಿಗ್ ಬಾಸ್ ನ ಆಫರ್ ಅನ್ನು ನೀಡಲಾಗಿದ್ದು, ನಟಿ ಅದನ್ನು ನಿರಾಕರಿಸಿರುವುದಾಗಿ ಮಾಹಿತಿಯನ್ನು ನೀಡುವ ಮೂಲಕ ಈಗ ಸುದ್ದಿಯಾಗಿದ್ದಾರೆ. ನಟಿ ಸೋಶಿಯಲ್ ಮೀಡಿಯಾದಲ್ಲಿ ಅದನ್ನು ಎಲ್ಲರಿಗೂ ತಿಳಿಸಿದ್ದಾರೆ.

ಕನ್ನಡ ಕಿರುತೆರೆಯ ಹಾಗೂ ಕೆಲವು ಸಿನಿಮಾಗಳಲ್ಲಿ ಹೋಮ್ಲಿ ಪಾತ್ರಗಳಲ್ಲಿ ನಟಿಸಿರುವ ಜ್ಯೋತಿ ರೈ ಅವರು ಈಗ ತೆಲುಗಿನ ಸೀರಿಯಲ್ ಮತ್ತು ವೆಬ್ ಸೀರೀಸ್ ಗಳಲ್ಲಿ ಬ್ಯುಸಿಯಾಗಿದ್ದಾರೆ. ತಮ್ಮ ಹಾಟ್ ಮತ್ತು ಬೋಲ್ಡ್ ಫೋಟೋಗಳಿಂದ ಅಭಿಮಾನಿಗಳ ನಿದ್ದೆಗೆಡಿಸಿದ್ದಾರೆ ಜ್ಯೋತಿ ರೈ.

ನಟಿ ತಮ್ಮ ಪೋಸ್ಟ್ ನಲ್ಲಿ, ನಾನು ಕನ್ನಡ ಬಿಗ್​ ಬಾಸ್​ ಶೋನಲ್ಲಿ ಸ್ಪರ್ಧಿಸುವ ಸಾಧ್ಯತೆಗಳ ಬಗ್ಗೆ ಅನೇಕರು ವಿಚಾರಿಸುತ್ತಿದ್ದಾರೆ. ನನಗೆ ಬಿಗ್​ ಬಾಸ್​ ತಂಡದಿಂದ ಆಫರ್​ ಬಂದಾಗ ನಾನು ಅದನ್ನು ಗೌರವದಿಂದ ತಿರಸ್ಕರಿಸಿದ್ದೇನೆ. ಈ ಮೊದಲೇ ಒಪ್ಪಿಕೊಂಡ ಕೆಲಸಗಳ ಕಾರಣಗಳಿಂದ ಈ ನಿರ್ಧಾರ ತೆಗೆದುಕೊಂಡೆ. ಅವಕಾಶಕ್ಕಾಗಿ ಹಾಗೂ ನನ್ನ ಅಭಿಮಾನಿಗಳ ಬೆಂಬಲಕ್ಕೆ ನಾನು ಚಿರ ಋಣಿ ಎಂದಿದ್ದಾರೆ ನಟಿ.

ಜ್ಯೋತಿ ರೈ ಅವರು ನಿರ್ದೇಶಕ ಸುಕು ಪೂರ್ವಜ್ ಜೊತೆಗೆ ಮದುವೆಯಾಗಲು ಸಿದ್ಧತೆಗಳನ್ನು ನಡೆಸಿದ್ದಾರೆ. ಕೆಲವೇ ದಿನಗಳ ಹಿಂದೆಯಷ್ಟೇ ನಟಿಯದ್ದು ಎನ್ನಲಾದ ವೀಡಿಯೋಗಳು ವೈರಲ್ ಆಗಿ ಸಿಕ್ಕಾಪಟ್ಟೆ ಸಂಚಲನವನ್ನು ಸೃಷ್ಟಿಸಿತ್ತು. ಅನಂತರ ನಟಿ ಅದು ತನ್ನದಲ್ಲ ಎಂದು ಮಾನಹಾನಿ ಮಾಡಲು ಪ್ರಯತ್ನಿಸುವವರ ಮೇಲೆ ಪ್ರಕರಣ ದಾಖಲು ಮಾಡುವುದಾಗಿ ಹೇಳಿದ್ದರು.

NagaChaitanya: ಸಮಂತಾ ಮೇಲೆ ಹೀಗೆ ಸೇಡು ತೀರಿಸಿಕೊಂಡ್ರಾ ನಾಗಚೈತನ್ಯ; ನಿಶ್ಚಿತಾರ್ಥಕ್ಕೆ ಆಗಸ್ಟ್ 8 ಯಾಕೆ?

Leave a Comment