Lakshmi Baramma: ಕೀರ್ತಿ ಪಾತ್ರ ದಿ ಎಂಡ್ ? ಲಕ್ಷ್ಮೀ ಬಾರಮ್ಮ ಸೀರಿಯಲ್ ನ ರೋಚಕ ಶಾಕಿಂಗ್ ತಿರುವು

Written by Soma Shekar

Published on:

---Join Our Channel---

Lakshmi Baramma: ಕನ್ನಡ ಕಿರುತೆರೆಯ ಜನಪ್ರಿಯ ಸೀರಿಯಲ್ ಗಳಲ್ಲಿ ಲಕ್ಷ್ಮೀ ಬಾರಮ್ಮ (Lakshmi Baramma) ಸಹಾ ಒಂದಾಗಿದೆ. ಕಳೆದ ವಾರದಿಂದಲೂ ಪ್ರಸಾರ ಆಗುತ್ತಿರುವ ಎಪಿಸೋಡ್ ಪ್ರೇಕ್ಷಕರಲ್ಲಿ ತೀವ್ರವಾದ ಕುತೂಹಲವನ್ನು ಕೆರಳಿಸಿತ್ತು. ಹೊಸ ರೋಚಕ ತಿರುವುಗಳು ಸೀರಿಯಲ್ ನಲ್ಲಿ ಮುಂದೆ ಏನಾಗಲಿದೆ ಎನ್ನುವ ಪ್ರಶ್ನೆಗಳನ್ನು ಹುಟ್ಟು ಹಾಕಿದ್ದು, ಪ್ರೇಕ್ಷಕರು ಉತ್ತರಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ.‌

ಕಾವೇರಿ ಮುಖವಾಡ ಕಳಚೋದಕ್ಕೆ ಕೀರ್ತಿ ಬೆಟ್ಟದ ತುದಿಯಲ್ಲಿ ಮಂಟಪ ಹಾಕಿಸಿ, ಕಾವೇರಿಯನ್ನ ಅಲ್ಲಿಗೆ ಕರೆಸಿಕೊಂಡು ತನ್ನ ಮನಸ್ಸಿನಲ್ಲಿ ಕೋಪ, ಅಸಹನೆಯನ್ನು ಕಾವೇರಿ ಮೇಲೆ ತೀರಿಸಿಕೊಂಡಿದ್ದಳು. ಆದರೆ ಅಲ್ಲಿ ಮತ್ತೆ ತನ್ನ ಕುತಂತ್ರವನ್ನು ಕಾರ್ಯಾಚರಣೆಗೆ ತಂದು, ಕೀರ್ತಿಯನ್ನು ಬೆಟ್ಟದ ಮೇಲೆ ಕೆಳಗೆ ತಳ್ಳಿದ್ದಾಳೆ ಕಾವೇರಿ.

ಸಖತ್ ಥ್ರಿಲ್ಲಿಂಗ್ ಆಗಿದ್ದ ಈ ಎಪಿಸೋಡ್ ಗಳ ಚಿತ್ರೀಕರಣದ ವೀಡಿಯೋವನ್ನು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದು ಈ ವೀಡಿಯೋ ವೈರಲ್ ಆಗಿದೆ. ಅಲ್ಲದೇ ಮುಂದೇನಾಗುತ್ತೆ ಎಂದು ನೀವು ಯೋಚಿಸುತ್ತಿರುವಿರಿ ಅನ್ನೋ ಪ್ರಶ್ನೆಯನ್ನ ನಟಿ ನೆಟ್ಟಿಗರ ಮುಂದೆ ಇಟ್ಟಿದ್ದು ಇದಕ್ಕೆ ಪ್ರತಿಕ್ರಿಯೆಗಳು ಹರಿದು ಬರುತ್ತಿವೆ.

ಪ್ರತಿಕ್ರಿಯೆಗಳನ್ನು ನೀಡಿದ ಅನೇಕರು ನಟಿಯ ನಟನೆಗೆ ಫಿದಾ ಆಗಿದ್ದಾರೆ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಅನೇಕರು ನಟಿಯ ಅಭಿನಯವನ್ನ ಮೆಚ್ಚುತ್ತಾ ಕಾಮೆಂಟ್ ಗಳನ್ನು ಮಾಡುತ್ತಿದ್ದಾರೆ.‌ ನೆಗೆಟಿವ್ ರೋಲ್ ನಲ್ಲಿ ಬೆಸ್ಟ್ ಆ್ಯಕ್ಟರ್ ಎಂದು ಕಾಮೆಂಟ್ ಮಾಡಿದ್ದಾರೆ. ಕೆಲವರು ಕಥೆಯ ಪ್ರಕಾರ ನೀವು ಕೋಮಾಗೆ ಹೋಗಬಹುದು ಎಂದಿದ್ದಾರೆ.

ಕೆಲವರು ಮೇಲಿಂದ ಬಿದ್ದ ಪರಿಣಾಮಕ್ಕೆ ಹಿಂದಿನದೆಲ್ಲಾ ಮರೆತು ಹೋಗಬಹುದು ಎನ್ನುವ ಮಾತನ್ನು ಹೇಳಿದ್ದಾರೆ.‌ ಇದೇ ವೇಳೆ ನಟಿಯ ಪಾತ್ರ ಈ ಮೂಲಕ ಸೀರಿಯಲ್ ನಲ್ಲಿ ಮುಗಿಯುತ್ತಾ ಅಂತ ಕೂಡಾ ಕೆಲವರು ಅನುಮಾನ ಪಡುತ್ತಿದ್ದಾರೆ. ಏನಾಗುತ್ತೆ ಅನ್ನೋದನ್ನ ಕಾದು ನೋಡಬೇಕಾಗಿದೆ.

Bigg Boss Kannada: ಈ ಬಾರಿ ಬಿಗ್ ಬಾಸ್ ನಿಂದ ಕಿಚ್ಚ ಔಟ್? ರಿಷಬ್ ಶೆಟ್ಟಿ ಮಾಡಲಿದ್ದಾರಂತೆ ನಿರೂಪಣೆ

Leave a Comment