Vinesh Phogat: ಅನರ್ಹತೆ ಬೆನ್ನಲ್ಲೇ ಮತ್ತೊಂದು ಶಾಕಿಂಗ್ ಸುದ್ದಿ; ವಿನೇಶ್ ಫೋಗಟ್ ಆಸ್ಪತ್ರೆಗೆ ದಾಖಲು

Written by Soma Shekar

Published on:

---Join Our Channel---

Vinesh Phogat : ಭಾರತೀಯ ಕ್ರೀಡಾಪಟು ವಿನೇಶ್‌ ಫೋಗಟ್‌ (Vinesh Phogat) ಅವರು ಒಲಿಂಪಿಕ್ಸ್‌‌ನಲ್ಲಿ (olympics) ಫೈನಲ್ ಗೂ ಮುನ್ನ ಅನರ್ಹರಾಗಿದ್ದಾರೆ ಎನ್ನುವ ಸುದ್ದಿ ದೊಡ್ಡ ಸಂಚಲನಕ್ಕೆ ಕಾರಣವಾಗಿದೆ ಮತ್ತು ಚರ್ಚೆಯ ವಿಷಯವಾಗಿ ಬದಲಾಗಿದೆ. ಈಗ ಇದರ ಬೆನ್ನಲ್ಲೇ ಮತ್ತೊಂದು ಶಾಕಿಂಗ್‌ ವಿಚಾರ ಹೊರಬಂದಿದ್ದು ವಿನೇಶ್‌ ಫೋಗಟ್‌ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ ಎನ್ನಲಾಗಿದೆ. ‌

ವಿನೇಶ್ ಫೋಗಟ್ ಅವರು ತಮ್ಮ ದೇಹದ ತೂಕವನ್ನು ಕಡಿಮೆ ಮಾಡುವುದಕ್ಕಾಗಿ ರಾತ್ರಿಯಿಡೀ ಹರಸಾಹಸವನ್ನು ಪಟ್ಟಿದ್ದಾರೆ ಎನ್ನಲಾಗಿದ್ದು, ಅವರು ಇಡೀ ರಾತ್ರಿ ಸೈಕ್ಲಿಂಗ್‌, ಸ್ಕಿಪ್ಪಿಂಗ್‌, ಜಾಗಿಂಗ್‌ ಮಾಡುತ್ತಲೇ ಇದ್ದರು ಎನ್ನಲಾಗಿದೆ.

ಹೀಗೆ ಹೆಚ್ಚು ಕಸರತ್ತನ್ನ ಮಾಡಿದ್ದರಿಂದ ದೇಹದಲ್ಲಿ ನೀರಿನ ಅಂಶ ಕಡಿಮೆಯಾಗಿದ್ದು, ವಿನೇಶ್‌ ಫೋಗಟ್‌ ಪ್ಯಾರಿಸ್ ನ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ ಅಂತ ಹೇಳಲಾಗ್ತಾ ಇದೆ. ಅತಿಯಾದ ದೈಹಿಕ ಕಸರತ್ತಿನಿಂದಲೇ ಹೀಗಾಗಿದೆ ಎನ್ನಲಾಗಿದೆ.

ವಿನೇಶ್ ನಿಗಧಿತ ತೂಕಕ್ಕಿಂತ ನೂರು ಗ್ರಾಂ ತೂಕ ಹೆಚ್ಚಿದ್ದಾರೆ ಎನ್ನುವ ಕಾರಣಕ್ಕೆ ಅವರನ್ನು ಅನರ್ಹಗೊಳಿಸಿರುವ ವಿಚಾರವನ್ನು ಕೇಳಿದ ನಂತರ ಸೋಶಿಯಲ್ ಮೀಡಿಯಾಗಳಲ್ಲಿ ಕ್ರೀಡಾ ಪ್ರೇಮಿಗಳು ತಮ್ಮ ಅಸಹನೆ ಮತ್ತು ಆಕ್ರೋಶ ಹೊರ ಹಾಕುತ್ತಿದ್ದಾರೆ.

Kantara 24 ವರ್ಷಗಳ ಕಾಯುವಿಕೆ ಮುಗಿದ ಕ್ಷಣ, ಫೋಟೋ ಶೇರ್ ಮಾಡಿ ಖುಷಿಯ ವಿಚಾರ ಹಂಚಿಕೊಂಡ ರಿಷಬ್ ಶೆಟ್ಟಿ

Leave a Comment