Gauri Khan: ಬಾಲಿವುಡ್ ನ ಸ್ಟಾರ್ ನಟ ಶಾರೂಖ್ ಖಾನ್ (Shah Rukh Khan) -ಗೌರಿ ಖಾನ್ (Gauri Khan) ದಂಪತಿಗೆ ಮೂರು ಜನ ಮಕ್ಕಳು. ಇವರಲ್ಲಿ ಆರ್ಯನ್ ಮತ್ತು ಸುಹಾನ್ ಹದಿಹರೆಯಕ್ಕೆ ಬಂದಿದ್ದಾರೆ. ಸೋಶಿಯಲ್ ಮೀಡಿಯಾಗಳಲ್ಲಿ ಇಬ್ಬರ ಫೋಟೋಗಳು ವೈರಲ್ ಆಗುತ್ತಿವೆ. ಸುಹಾನಾ ಈಗಾಗಲೇ ಜಾಹೀರಾತೊಂದರಲ್ಲೂ ಕಾಣಿಸಿಕೊಂಡಿದ್ದಾರೆ. ಹರಯಕ್ಕೆ ಬಂದಿರುವ ಇಬ್ಬರು ಮಕ್ಕಳಿಗೆ ಗೌರಿ ಖಾನ್ ನೀಡಿದ ಒಂದು ಸಲಹೆ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿಯಾಗಿ ಹರಿದಾಡುತ್ತಿದೆ.
ಹಿಂದೊಮ್ಮೆ ಗೌರಿ ಖಾನ್ ಕರಣ್ ಜೋಹರ್ (Karan Johar) ನಡೆಸಿಕೊಡುವ ಕಾಫಿ ವಿತ್ ಕರಣ್ ಶೋಗೆ ಬಂದಿದ್ರು. ಆಗ ಕರಣ್ ಮಕ್ಕಳಿಗೆ ಯಾವ ರಿಲೇಶಿನ್ ಶಿಪ್ ಅಡ್ವೈಸ್ ಅನ್ನ ಕೊಡ್ತೀರಾ ಅನ್ನೋ ಒಂದು ಪ್ರಶ್ನೆಯನ್ನ ಕೇಳಿದ್ರು. ಇದಕ್ಕೆ ಗೌರಿ ಖಾನ್ ಕೊಟ್ಟ ಉತ್ತರ ಖಂಡಿತ ಎಲ್ಲರಿಗೂ ಅಚ್ಚರಿಯನ್ನ ಮೂಡಿಸಿತ್ತು.
ಗೌರಿ ಖಾನ್ ಉತ್ತರ ನೀಡಿದ ವೀಡಿಯೋ ಕ್ಲಿಪ್ ಸೋಶಿಯಲ್ ಮೀಡಿಯಾಗಳಲ್ಲಿ ಆಗಾಗ ಹರಿದಾಡುತ್ತೆ. ಅವರು ಕೊಟ್ಟ ಉತ್ತರ ಕೇಳಿದ ನೆಟ್ಟಿಗರು ಅಸಮಾಧಾನ ಹೊರ ಹಾಕೋದು ಸಾಮಾನ್ಯ. ಕೆಲವರು ನೀವು ಇಂತ ಆಲೋಚನೆ ಮಾಡೋದಕ್ಕೆ ನಿಮ್ಮ ಮಗ ಕೆಟ್ಟಿರೋದು ಎಂದು ನೆಗೆಟಿವ್ ಕಾಮೆಂಟ್ ಮಾಡೋದುಂಟು. ಹಾಗಾದರೆ ಗೌರಿ ಖಾನ್ ಹೇಳಿದ್ದೇನು?
ಒಂದೇ ಸಮಯದಲ್ಲಿ ಇಬ್ಬರ ಜೊತೆ ಡೇಟ್ ಮಾಡಬೇಡ ಅನ್ನೋದು ಗೌರಿ ಖಾನ್ ತಮ್ಮ ಮಗಳಿಗೆ ಕೊಟ್ಟಂತಹ ರಿಲೇಶಿನ್ ಶಿಪ್ ಸಲಹೆಯಾಗಿತ್ತು. ಆದರೆ ಇದೇ ವೇಳೆ ಗೌರಿ ಖಾನ್ ತಮ್ಮ ಮಗನಿಗೆ ಮಾತ್ರ ಯಾವುದೇ ಸಲಹೆಯನ್ನು ನೀಡಿಲ್ಲ ಎನ್ನುವುದು ಅನೇಕರಿಗೆ ಅಚ್ಚರಿ ಮೂಡಿಸಿದೆ. ಆರ್ಯನ್ ಗೆ ಯಾವ ಕಂಡೀಷನ್ ಇಲ್ವಾ ಎಂದು ಕೆಲವರು ಪ್ರಶ್ನೆ ಮಾಡಿದ್ದಾರೆ.
SeethaRama: ಸಿಹಿನ ಪದೇ ಪದೇ ಕಿಡ್ನಾಪ್ ಮಾಡೋದು ಬಿಟ್ರೆ ಬೇರೆ ಕಥೆ ಇಲ್ವಾ? ಸೀರಿಯಲ್ ಮೇಲೆ ರೊಚ್ಚಿಗೆದ್ದ ಪ್ರೇಕ್ಷಕರು