Kareena Kapoor: ರಾಹುಲ್ ಗಾಂಧಿ ಬಗ್ಗೆ ಕರೀನಾ ಹೇಳಿದ ಮಾತಿಗೆ ನೆಟ್ಟಿಗರು ಶಾಕ್! ಕರೀನಾಗೆ ಅಂತ ಫೀಲಿಂಗ್ ಇತ್ತಾ

Written by Soma Shekar

Published on:

---Join Our Channel---

Kareena Kapoor: ಬಾಲಿವುಡ್ (Bollywood) ನಟ. ನಟಿಯರ ಕುರಿತಾಗಿ ಆಗಾಗ ಹೊಸ ಸುದ್ದಿಗಳು ಹಾಗೂ ಅವರು ನೀಡುವ ಹೇಳಿಕೆಗಳು ವೈರಲ್ ಆಗುತ್ತಲೇ ಇರುತ್ತದೆ. ಈಗ ಬಾಲಿವುಡ್ ನ ಸ್ಟಾರ್ ನಟಿ ಕರೀನಾ ಕಪೂರ್ (Kareena Kapoor) ಅವರ ಸಂದರ್ಶನದ ವೀಡಿಯೋ ಒಂದು ವೈರಲ್ ಆಗಿದ್ದು ಎಲ್ಲರ ಗಮನವನ್ನು ಸೆಳೆಯುತ್ತಿದೆ. ಸ್ಟಾರ್ ನಟಿಯರು ತಾವು ಡೇಟಿಂಗ್ ಮಾಡಲು ಬಯಸುವವರ ಹೆಸರು ಕೇಳಿದಾಗ ಬೇರೆ ನಟರ ಹೆಸರುಗಳನ್ನು ಹೇಳುತ್ತಾರೆ.

ಆದರೆ ನಟಿ ಕರೀನಾ ಕಪೂರ್ ಈ ವಿಚಾರದಲ್ಲಿ ನೀಡಿದ ಹೇಳಿಕೆ ಎಲ್ಲರಿಗೂ ಅಚ್ಚರಿಯನ್ನು ಮೂಡಿಸಿದೆ. ವರ್ಷಗಳ ಹಿಂದೆ ಕರೀನಾ ನಟಿಸಿದ್ದ ಜಬ್ ವಿ ಮೆಟ್ ಸಿನಿಮಾ ಸೂಪರ್ ಹಿಟ್ ಸಿನಿಮಾ ಆಗಿತ್ತು. ಆಗ ಆ ಸಿನಿಮಾ ಪ್ರಚಾರ ಕಾರ್ಯದಲ್ಲಿ ನಟಿ ತೊಡಗಿದ್ದಾಗ, ಅವರಿಗೆ ನೀವು ಯಾರೊಂದಿಗೆ ಡೇಟ್ ಮಾಡಲು ಬಯಸುವಿರಿ ಎನ್ನುವ ಪ್ರಶ್ನೆ ಎದುರಾಗಿತ್ತು.

ಆಗ ಕರೀನಾ ನಾನು ರಾಹುಲ್ ಗಾಂಧಿ (Rahul Gandhi) ಜೊತೆಗೆ ಡೇಟಿಂಗ್ ಮಾಡಲು ಬಯಸುವುದಾಗಿ ಹೇಳಿದ್ದರು. ಅಲ್ಲದೆ ನಾನು ಈ ಹೆಸರನ್ನು ಹೇಳಿದರೆ ವಿ ವಾ ದ ಉಂಟಾಗುತ್ತದೆ ಎನ್ನುವ ಮಾತನ್ನು ಹೇಳಿದ್ದರು. ಆಗ ಆ ವಿಷಯ ಅಷ್ಟೊಂದು ಸುದ್ದಿಯಾಗದೇ ಇದ್ದರೂ ಈಗ ನಟಿಯ ಹೇಳಿಕೆ ವೈರಲ್ ಆಗುತ್ತಿದೆ.

ನಟಿಯ ವೀಡಿಯೋ ನೋಡಿದ ನಂತರ, ನಟಿಯ ಫ್ಯಾನ್ಸ್, ನಿಮ್ಮ ಮಾತು ಸರಿ, ಆಗ ರಾಹುಲ್ ಗಾಂಧಿಯವರು ತುಂಬಾ ಸ್ಮಾರ್ಟ್ ಆಗಿದ್ದರು ಎನ್ನುವ ಮಾತನ್ನ ಹೇಳಿದ್ದರು. ಆದರೆ ಕೆಲವರು ಇದಕ್ಕೆ ವ್ಯಂಗ್ಯ ಭರಿತವಾದ ಕಾಮೆಂಟ್ ಗಳನ್ನು ಸಹಾ ಮಾಡಿದ್ದಾರೆ ಎನ್ನುವುದು ಸಹಾ ನಿಜ.

Government Scheme: ಈ ಯೋಜನೆಯಿಂದ ಏನೆಲ್ಲಾ ಲಾಭಗಳಿವೆ ಗೊತ್ತಾ? ಸ್ವಾವಲಂಬಿಗಳಾಗೋಕೆ ಇದೇ ಮಾರ್ಗ

Leave a Comment