South Actress: ಇತ್ತೀಚೆಗಿನ ದಿನಗಳಲ್ಲಿ ಸಿನಿಮಾ ರಂಗದಲ್ಲಿನ ಸೆಲೆಬ್ರಿಟಿಗಳ ಜೀವನದಲ್ಲಿ ಡೇಟಿಂಗ್, ಅಫೇರ್, ಡಿವೋರ್ಸ್, ಬ್ರೇಕಪ್ ಆಮೇಲೆ ಮತ್ತೆ ಮದುವೆ ಅನ್ನೋ ವಿಚಾರಗಳು ತೀರಾನೇ ಸಾಮಾನ್ಯ ಎನ್ನುವಷ್ಟು ಕಾಣ್ತಿದೆ. ಇಂತಹ ವಿಚಾರಗಳಿಂದಾನೇ ಒಂದಷ್ಟು ಜನ ಸೆಲೆಬ್ರಿಟಿಗಳು ಫೇಮಸ್ ಆಗ್ತಾ ಇದ್ದಾರೆ. ಈ ದಕ್ಷಿಣದ ನಟಿಯೊಬ್ಬರು (South Actress) ನಾಲ್ಕನೇ ಮದುವೆಗೆ ಸಜ್ಜಾಗ್ತಾ ಇದ್ದಾರೆ.
ದಕ್ಷಿಣ ಸಿನಿಮಾ ರಂಗದ ಹಿರಿಯ ನಟ ವಿಜಯ್ ಕುಮಾರ್ ಹಾಗೂ ತೆಲುಗು, ತಮಿಳಿನಲ್ಲಿ ಒಂದು ಕಾಲದಲ್ಲಿ ಸ್ಟಾರ್ ನಟಿಯಾಗಿದ್ದ, ದಿವಂಗತ ನಟಿ ಮಂಜುಳಾ ಅವರ ಮಗಳು ವನಿತಾ ವಿಜಯ್ ಕುಮಾರ್ (Vanitha Vijay Kumar) ತಮ್ಮ ಮದುವೆ ವಿಚಾರಗಳಿಂದಲೇ ಸುದ್ದಿಯಾದವರು. ಈಗ ನಟಿ ಮತ್ತೆ ವಿವಾಹ ಆಗ್ತಾರೆ ಅನ್ನೋ ವಿಷಯ ವೈರಲ್ ಆಗಿದೆ.
ವನಿತಾ ವಿಜಯ್ ಕುಮಾರ್ ಈಗಾಗಲೇ ಮೂರು ಮದುವೆಯಾಗಿರುವ ವಿಚಾರ ಎಲ್ಲರಿಗೂ ಗೊತ್ತಿರುವುದೇ ಆಗಿದೆ. ಸಾಕಷ್ಟು ವಿ ವಾ ದಗಳ ಕಾರಣವಾಗಿ ಚರ್ಚೆಯಾಗುವ ಈ ನಟಿ ಈಗ ನಾಲ್ಕನೇ ಮದುವೆ ಮಾಡಿಕೊಳ್ಳುವ ಆಲೋಚನೆಯಲ್ಲಿ ಇದ್ದಾರೆ ಎನ್ನುವ ಸುದ್ದಿ ಬಹಳಷ್ಟು ಜನರಿಗೆ ಅಚ್ಚರಿ ಮೂಡಿಸಿದೆ.
ವನಿತಾ ಮೊದಲ ಮದುವೆ ಬ್ರೇಕ್ ಆದ ನಂತರ ಆನಂದ್ ಎನ್ನುವ ಉದ್ಯಮಿ ಜೊತೆ ವಿವಾಹವಾದರು. ಅದು ಹೆಚ್ಚು ಕಾಲ ಉಳಿಯಲೇ ಇಲ್ಲ. ನಂತರ ಪೀಟರ್ ಪೌಲ್ ಜೊತೆ ಅದ್ದೂರಿಯಾಗಿ ಮೂರನೇ ಮದುವೆ ಆಗಿದ್ದ ನಟಿ ಅನಂತರ ಅವರಿಂದಲೂ ದೂರಾಗಿದ್ದು, ಈಗ ನಾಲ್ಕನೇ ಮದುವೆ ತಯಾರಿಯಲ್ಲಿದ್ದಾರೆ ಎನ್ನಲಾಗಿದೆ.
Kodishri: ಆ ವಿಷಯ ನಾನು 20 ದಿನಗಳ ಮೊದಲೇ ಹೇಳಿದ್ದೆ ಎನ್ನುತ್ತಲೇ ಮತ್ತೆ ಸ್ಪೋಟಕ ಭವಿಷ್ಯವಾಣಿ ನುಡಿದ ಕೋಡಿಶ್ರೀ