Dreams: ನಿದ್ರೆಯಲ್ಲಿ ಕನಸು (Dreams) ಕಾಣೋದು ಸಾಮಾನ್ಯವಾದ ವಿಚಾರವಾಗಿದ್ದರೂ, ಕನಸುಗಳನ್ನು ಅರ್ಥ ಮಾಡಿಕೊಳ್ಳುವುದು ಮಾತ್ರ ಖಂಡಿತ ಸುಲಭವಲ್ಲ. ಅನೇಕ ಸಂದರ್ಭಗಳಲ್ಲಿ ಕನಸುಗಳು ನಮ್ಮ ಭವಿಷ್ಯತ್ತಿನ ಕುರಿತಾಗಿ ಸೂಚನೆಗಳನ್ನು ನೀಡುತ್ತದೆ ಅಂತ ಹೇಳಲಾಗುತ್ತದೆ. ಕೆಲವು ಕನಸುಗಳು ಶುಭ ಸೂಚನೆಯನ್ನು ನೀಡಿದರೆ ಮತ್ತೆ ಕೆಲವು ಕನಸುಗಳು ಅಶುಭದ ಮುನ್ಸೂಚನೆ ಆಗಿರುತ್ತದೆ. ಸ್ವಪ್ನ ಶಾಸ್ತ್ರದ ಪ್ರಕಾರ ಎಂತಹ ಕನಸುಗಳು ಬಿದ್ದರೆ ನಿಮ್ಮ ಅದೃಷ್ಟದ ದಿನಗಳು ಆರಂಭವಾಗುತ್ತದೆ ಎನ್ನುವುದನ್ನು ತಿಳಿಯೋಣ ಬನ್ನಿ.
ಸ್ವಪ್ನ ಶಾಸ್ತ್ರದ ಪ್ರಕಾರ ಕನಸಿನಲ್ಲಿ ಏನಾದ್ರೂ ಕಮಲದ (Lotus) ಪುಷ್ಪ ಕಾಣಿಸಿದರೆ ಜೀವನದಲ್ಲಿ ಲಕ್ಷ್ಮೀದೇವಿಯ ಆಗಮನ ಆಗುತ್ತದೆ ಎನ್ನಲಾಗಿದೆ. ಲಕ್ಷ್ಮಿ ದೇವಿಯ ಅನುಗ್ರಹದಿಂದ ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆಯನ್ನ ಕಾಣುವಿರಿ ಎನ್ನುವುದರ ಸೂಚನೆಯಾಗಿರುತ್ತದೆ.
ಕನಸಿನಲ್ಲಿ ಹಾಲಿನಿಂದ (Milk) ಸ್ನಾನವನ್ನು ಮಾಡುವುದನ್ನು ನೋಡಿದರೆ ಮಂಗಳಕರ ಎಂದು ಪರಿಗಣಿಸಲಾಗಿದ್ದು, ಇದು ದೊಡ್ಡ ಆರ್ಥಿಕ ಲಾಭದ ಸಂಕೇತವಾಗಿರುತ್ತದೆ. ವೃತ್ತಿ ಜೀವನದಲ್ಲೂ ಉತ್ತಮ ಪ್ರಗತಿಯ ಸಂಕೇತವಾಗಿರುತ್ತದೆ ಎನ್ನಲಾಗಿದೆ.
ಕನಸಿನಲ್ಲಿ ಮಳೆಯನ್ನು (Rain) ಕಂಡರೆ ಇದು ಕೂಡಾ ಮಂಗಳಕರ ಎಂದು ಹೇಳಲಾಗಿದ್ದು, ಒಬ್ಬ ವ್ಯಕ್ತಿಗೆ ಶ್ರೀಮಂತನಾಗುವ ಮುನ್ಸೂಚನೆಯನ್ನ, ಹಠಾತ್ ಆರ್ಥಿಕ ಲಾಭವನ್ನು ಈ ಕನಸು ಸೂಚಿಸುತ್ತದೆ ಎಂದು ಹೇಳಲಾಗಿದೆ.
ಕನಸಿನಲ್ಲಿ ಒಳ್ಳೆಯ ಆಹಾರವನ್ನು (Food) ಸೇವನೆ ಮಾಡುತ್ತಿರುವ ಹಾಗೆ ಕಂಡರೆ ಒಳ್ಳೆಯ ಸಮಯದ ಆರಂಭವನ್ನು ಸೂಚಿಸುತ್ತದೆ ಮತ್ತು ದೊಡ್ಡ ಪ್ರಮಾಣದಲ್ಲಿ ಹಣವನ್ನು ಗಳಿಸುವ ಸಂಕೇತ ಆಗಿರುತ್ತದೆ ಎಂದು ಸ್ವಪ್ನ ಶಾಸ್ತ್ರದಲ್ಲಿ ಹೇಳಲಾಗಿದೆ.
Bahubali: ಬಾಹುಬಲಿ ಸಿನಿಮಾದ ಹೀರೋ ಪಾತ್ರ ರಿಜೆಕ್ಟ್ ಮಾಡಿದ್ದ ಸ್ಟಾರ್ ಹೀರೋ; ಯಾರು ಆ ಸ್ಟಾರ್ ಹೀರೋ?