Netra Jadhav: ರೌದ್ರಾವತಾರದಲ್ಲಿ ಕಾಣಿಸಿಕೊಂಡ ಶ್ರೀರಸ್ತು ಶುಭಮಸ್ತು ಶಾರ್ವರಿ, ಹೊಸ ಲುಕ್ ಗೆ ಶಾಕ್ ಆದ ನೆಟ್ಟಿಗರು

Written by Soma Shekar

Published on:

---Join Our Channel---

Netra Jadhav: ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿ ಶ್ರೀರಸ್ತು ಶುಭಮಸ್ತು ನಲ್ಲಿ (Srirastu Shubhamastu) ಶಾರ್ವರಿ ಪಾತ್ರದ ಮೂಲಕ ಮನೆ ಮನೆ ಮಾತಾದವರು ನಟಿ ನೇತ್ರಾ ಜಾಧವ್ (Netra Jadhav) ಅವರು. ಸೌಮ್ಯ ಮುಖದ ವಿಲನ್ ಆಗಿ ಕಣ್ಣಿನ ಮೂಲಕವೇ ಅಭಿನಯವನ್ನು ಮಾಡುತ್ತಿದ್ದ ಈ ನಟಿಯು ಶಾರ್ವರಿ ಪಾತ್ರದ ಮೂಲಕ ತಮ್ಮದೇ ಆದ ಅಭಿಮಾನಿ ಬಳಗವನ್ನು ಗಳಿಸಿಕೊಂಡಿದ್ದರು, ಇವರ ಅಭಿನಯಕ್ಕೆ ಸಾಕಷ್ಟು ಮೆಚ್ಚುಗೆಗಳು ಹರಿದು ಬಂದಿತ್ತು.

ಬೇರೆಲ್ಲಾ ಖಳ ನಾಯಕಿಯರ ಪಾತ್ರಕ್ಕಿಂತ ವಿಭಿನ್ನವಾಗಿ ಗುರುತಿಸಿಕೊಂಡಿದ್ದ ನಟಿ ನೇತ್ರಾ ಅವರು ಕೆಲವು ದಿನಗಳ ಹಿಂದೆಯಷ್ಟೇ ಶ್ರೀರಸ್ತು ಶುಭಮಸ್ತು ಸೀರಿಯಲ್ ನ ತಮ್ಮ ಪಾತ್ರದಿಂದ ಹೊರಗಡೆ ಬಂದಿದ್ದರು. ಆ ಪಾತ್ರಕ್ಕೆ ಈಗಾಗಲೇ ಬೇರೊಬ್ಬ ನಟಿಯ ಎಂಟ್ರಿ ಆಗಿದೆ, ಆಗ ಅದನ್ನು ನೋಡಿ ಪ್ರೇಕ್ಷಕರು ಅಚ್ಚರಿ ವ್ಯಕ್ತಪಡಿಸಿದ್ದರು. ಇಂತಹ ದಿಢೀರ್ ಬದಲಾವಣೆಗೆ ಅನೇಕರು ತಮ್ಮ ಬೇಸರವನ್ನು ವ್ಯಕ್ತಪಡಿಸಿದ್ದರು.

ಶ್ರೀರಸ್ತು ಶುಭಮಸ್ತು ಸೀರಿಯಲ್ ಆರಂಭ ಆದಾಗಿನಿಂದಲೂ ನೇತ್ರಾ ಜಾಧವ್ ಅವರು ಶಾರ್ವರಿಯ ಪಾತ್ರಕ್ಕೆ ಜೀವ ತುಂಬಿದ್ದರು. ಅಲ್ಲದೇ ಜೀ ಕುಟುಂಬ ಅವಾರ್ಡ್ ನಲ್ಲಿ ತಮ್ಮ ಖಲನಾಯಕಿಯ ಪಾತ್ರಕ್ಕೆ ಪ್ರಶಸ್ತಿಯನ್ನು ಕೂಡಾ ಪಡೆದುಕೊಂಡಿದ್ದರು. ಇಷ್ಟೆಲ್ಲಾ ಜನಪ್ರಿಯತೆಯನ್ನು ಪಡೆದಿದ್ದ ಪಾತ್ರದಿಂದ ನಟಿ ಇದ್ದಕ್ಕಿದ್ದ ಹಾಗೆ ಹೊರಗೆ ಬಂದಿದ್ದು ಬಹಳಷ್ಟು ಜನರಿಗೆ ದೊಡ್ಡ ಶಾಕ್ ನೀಡಿತ್ತು.

ಸೋಶಿಯಲ್ ಮೀಡಿಯಾ ಗಳಲ್ಲಿ ಅನೇಕರು ನೇತ್ರಾ ಅವರೇ ಆ ಪಾತ್ರಕ್ಕೆ ಮರಳಿ ಬರಬೇಕೆಂದು ಅನಿಸಿಕೆ ವ್ಯಕ್ತಪಡಿಸಿದ್ದರು. ಇವೆಲ್ಲವುಗಳ ಬೆನ್ನಲ್ಲೇ ಈಗ ನೇತ್ರಾ ಜಾಧವ್ ಅವರು ತೆಲುಗು ಸೀರಿಯಲ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಮಗುವಾ ಓ ಮಗುವಾ ಎಂಬ ಧಾರಾವಾಹಿಯಲ್ಲಿ ಒಂದು ಖಡಕ್ , ಪವರ್ ಫುಲ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ನೇತ್ರಾ ಅವರು ಆ್ಯಕ್ಷನ್ ದೃಶ್ಯಗಳ ಚಿತ್ರೀಕರಣದ ವಿಡಿಯೋವನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.

Leave a Comment