Kannada Serial TRP: ಕನ್ನಡ ಕಿರುತೆರೆಯಲ್ಲಿ ಹೊಸ ಧಾರಾವಾಹಿಗಳು ಎಂಟ್ರಿ ಕೊಡ್ತಾನೆ ಇದೆ. ಇದೇ ವೇಳೆ ಕೆಲವು ಹಳೆಯ ಧಾರಾವಾಹಿಗಳು ಜನಪ್ರಿಯತೆಯ ಉತ್ತುಂಗದಲ್ಲಿ ಮುಂದೆ ಸಾಗ್ತಿವೆ. ಹೊಸ ಧಾರಾವಾಹಿಗಳು ಹಳೆಯ ಧಾರವಾಹಿಗಳ ಜೊತೆ ಟಿ ಆರ್ ಪಿ (Kannada Serial TRP) ಸ್ಪರ್ಧೆಯಲ್ಲಿ ಸವಾಲು ನೀಡುವ ಪ್ರಯತ್ನವನ್ನ ಮಾಡುತ್ತಿದೆ. ಆದರೂ ಕೆಲವು ಹಳೆಯ ಧಾರಾವಾಹಿಗಳು ಹೊಸ ಧಾರಾವಾಹಿಗಳಿಗೆ ಭರ್ಜರಿ ಪೈಪೋಟಿ ನೀಡುತ್ತಾ ಅವುಗಳನ್ನು ಹಿಂದಕ್ಕಿ ತಾವು ಜನಪ್ರಿಯತೆಯ ಸಾಲಿನಲ್ಲಿ ಮೊದಲ ಸಾಲಿನಲ್ಲೇ ಉಳಿದಿವೆ.
ಕಿರುತೆರೆಯಲ್ಲಿ ಈಗಾಗಲೇ 675 ಸಂಚಿಕೆಗಳನ್ನ ಪೂರ್ತಿ ಮಾಡಿರುವ ಪುಟ್ಟಕ್ಕನ ಮಕ್ಕಳು (Puttakkana Makkalu) ಸೀರಿಯಲ್ ಕಳೆದ ಕೆಲವು ತಿಂಗಳುಗಳಿಂದಲೂ ಟಿ ಆರ್ ಪಿ ಯಲ್ಲಿ ಮೊದಲ ಸ್ಥಾನವನ್ನು ಭದ್ರವಾಗಿ ಉಳಿಸಿಕೊಂಡಿದೆ. ಹಿರಿಯ ನಟಿ ಉಮಾಶ್ರೀ, ಮಂಜು ಭಾಷಿಣಿ, ಸಂಜನಾ ಬುರ್ಲಿ ಅವರು ಪ್ರಮುಖ ಪಾತ್ರದಲ್ಲಿರುವ ಈ ಧಾರಾವಾಹಿ 23ನೇ ವಾರದಲ್ಲಿ ಮೊದಲ ಸ್ಥಾನದಲ್ಲಿ ಮುಂದುವರೆಯುತ್ತಿದೆ.
ಎಂದಿನಂತೆ ಎರಡನೇ ಸ್ಥಾನದಲ್ಲಿ ಮತ್ತೊಂದು ಜನಪ್ರಿಯ ಧಾರಾವಾಹಿ ಲಕ್ಷ್ಮಿ ನಿವಾಸ (Lakshmi Nivasa) ಸ್ಥಾನವನ್ನು ಉಳಿಸಿಕೊಂಡಿದ್ದು, ಈ ಸೀರಿಯಲ್ ಆರಂಭದಿಂದಲೂ ಜನರ ಮೆಚ್ಚುಗೆಯನ್ನು ಪಡೆದುಕೊಂಡಿದೆ. ಜಯಂತ್ ಜಾಹ್ನವಿ ಮತ್ತು ಸಿದ್ಧೇಗೌಡ್ರು ಹಾಗೂ ಭಾವನಾ ನಡುವಿನ ಕಥಾಹಂದರ ಈಗ ಸೀರಿಯಲ್ ನಲ್ಲಿ ವಿಶೇಷ ಆಕರ್ಷಣೆಯಾಗಿದೆ.
ಮೂರನೇ ಸ್ಥಾನದ ವಿಚಾರಕ್ಕೆ ಬಂದರೆ ಇತ್ತೀಚೆಗೆ ಆರಂಭಗೊಂಡಂತಹ ಶ್ರಾವಣಿ ಸುಬ್ರಹ್ಮಣ್ಯ (Shravani Subramanya) ಸೀರಿಯಲ್ ಮೂರನೇ ಸ್ಥಾನದಲ್ಲಿದ್ದು, ಪ್ರಸಾರ ಕಂಡ ಕೆಲವೇ ದಿನಗಳಲ್ಲಿ ಪ್ರೇಕ್ಷಕರ ಮನಸ್ಸನ್ನು ಗೆದ್ದಿದೆ. ಸೀರಿಯಲ್ ನಲ್ಲಿ ಶ್ರಾವಣಿ ಮತ್ತು ಸುಬ್ಬು ನಡುವಿನ ಸ್ನೇಹ, ಸುಬ್ಬು ಕಳ್ಕೊಂಡ ಬೈಕ್ ಅನ್ನು ಮರಳಿ ತಂದ ಶ್ರಾವಣಿ ಅವನಿಗೆ ಹೊಸ ಹುರುಪನ್ನು ತಂದಿದ್ದಾಳೆ.
ಇನ್ನು ನಾಲ್ಕನೇ ಸ್ಥಾನದಲ್ಲಿ ಸೀತಾರಾಮ (SeethaRama) ಸೀರಿಯಲ್ ಇದೆ. ಸೀತಾ ಮತ್ತು ರಾಮನ ನಡುವೆ ಪ್ರೀತಿ, ನಂತರ ಅದ್ದೂರಿಯಾಗಿ ನಡೆದ ಎಂಗೇಜ್ಮೆಂಟ್ ನಂತರ ಈಗ ಅವದ ಮದುವೆ ಸಂಭ್ರಮ ಮುಂದಿನ ಎಪಿಸೋಡ್ ಗಳಲ್ಲಿ ಪ್ರೇಕ್ಷಕರನ್ನು ರಂಜಿಸಲಿದೆ. ಸೀತಾ ರಾಮ ಆರಂಭದಲ್ಲಿ ಟಾಪ್ ಮೂರಕ್ಕೆ ಪ್ರವೇಶ ಮಾಡಿತ್ತು. ಆದರೆ ಈಗ ಸೀತಾರಾಮ ಕಳೆದ ಕೆಲವು ತಿಂಗಳುಗಳಿಂದಲೂ ನಾಲ್ಕು, ಐದನೇ ಸ್ಥಾನದಲ್ಲಿ ಉಳಿದುಕೊಂಡಿದೆ.
5ನೇ ಸ್ಥಾನದಲ್ಲಿ ಅಮೃತಧಾರೆ (Amruthadhaare) ಸೀರಿಯಲ್ ಸ್ಥಾನವನ್ನು ಪಡೆದುಕೊಂಡಿದೆ. ಕಳೆದ ವಾರವು ಇದೇ ಸ್ಥಾನವನ್ನು ಪಡೆದುಕೊಂಡಿತ್ತು. ಈ ವಾರ ಕೂಡಾ ಅದೇ ಸ್ಥಾನದಲ್ಲಿ ಮುಂದುವರೆದಿದೆ. ಗೌತಮ್ ಮತ್ತು ಭೂಮಿಕಾ ನಡುವಿನ ಪ್ರೇಮ ಕಥೆ ಹಾಗೂ ಗೌತಮ್ ಚಿಕ್ಕಮ್ಮ ಶಕುಂತಲಾ ದೇವಿ ಮಾಡುವ ಕುತಂತ್ರಗಳು ಈ ಧಾರಾವಾಹಿಯ ಕಥೆಯ ಮುಖ್ಯಾಂಶವಾಗಿದೆ.