Lakshmi Nivasa: ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿ ಲಕ್ಷ್ಮೀ ನಿವಾಸದಲ್ಲಿ (Lakshmi Nivasa) ಜಾಹ್ನವಿ ಪಾತ್ರ ಈಗಾಗಲೇ ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿರುವ ಪ್ರಮುಖ ಪಾತ್ರವಾಗಿ ಹೊರಹೊಮ್ಮಿದೆ. ಈ ಪಾತ್ರದಲ್ಲಿ ಕಿರುತೆರೆಯ ಹೆಸರಾಂತ ನಟಿ ಚಂದನಾ ಅನಂತ ಕೃಷ್ಣ (Chandana Anantakrishna) ಅವರು ಕಾಣಿಸಿಕೊಳ್ಳುತ್ತಿದ್ದು, ಕೆಲವೇ ದಿನಗಳಲ್ಲಿ ತಮ್ಮ ಪಾತ್ರದ ಮೂಲಕ ಕಿರುತೆರೆಯ ಪ್ರೇಕ್ಷಕರ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ಸನ್ನು ಪಡೆದುಕೊಂಡಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಲಕ್ಷ್ಮೀ ನಿವಾಸ ಸೀರಿಯಲ್ ವಿಚಾರದಲ್ಲಿ ಜಯಂತ್ ಮತ್ತು ಜಾಹ್ನವಿ ಪಾತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಬಹಳ ದೊಡ್ಡ ಮಟ್ಟದಲ್ಲಿ ಚರ್ಚೆಯ ವಿಷಯವಾಗಿ ಮಾರ್ಪಟ್ಟಿದೆ. ಬುದ್ಧಿವಂತಳಾದ ಜಾಹ್ನವಿಗೆ ತನ್ನ ಗಂಡ ಜಯಂತ್ ತನ್ನನ್ನು ಪ್ರೀತಿ ಎಂಬ ಬಂಗಾರದ ಪಂಜರದಲ್ಲಿ ಬಂಧಿಸಿ, ತನಗೆ ಖುಷಿಯನ್ನು ನೀಡ್ತಾ ಇದ್ದಾನೆ ಅನ್ನೋ ವಿಚಾರ ಇನ್ನು ಅರ್ಥವಾಗಿಲ್ಲ.
ಅಲ್ಲದೇ ತನ್ನ ಗಂಡ ವಿಚಿತ್ರವಾಗಿ ನಡೆದುಕೊಳ್ಳೋದು ಅವಳಿಗೆ ಇನ್ನೂ ಕೂಡ ಬೇಸರವನ್ನ ಉಂಟು ಮಾಡಿಲ್ಲ. ಆದರೆ ಸೀರಿಯಲ್ ನಲ್ಲಿ ಪ್ರಸಾರ ಆಗ್ತಾ ಇರೋ ಜಯಂತ್ ಮತ್ತು ಜಾಹ್ನವಿಯ ದೃಶ್ಯಗಳ ಕುರಿತಾಗಿ ವೀಕ್ಷಕರು ಹಲವು ಬಾರಿ ಸಾಮಾಜಿಕ ಜಾಲತಾಣಗಳಲ್ಲಿ ಬೇಸರವನ್ನು ಹೊರಹಾಕಿದ್ದಾರೆ.
ಪ್ರತಿ ದಿನ ಒಂದು ಗಂಟೆಯ ಅವಧಿಯಲ್ಲಿ ಪ್ರಸಾರವಾಗ್ತಿರೋ ಸೀರಿಯಲ್ ನಲ್ಲಿ ಜಯಂತ್ ಮತ್ತು ಜಾಹ್ನವಿ ಪಾತ್ರಕ್ಕೆ ಹೆಚ್ಚು ಸ್ಕೋಪ್ ದೊರೆಯುತ್ತಿದ್ದು, ಎರಡು ಪಾತ್ರಗಳು ವಿಶೇಷವಾಗಿ ಗಮನವನ್ನು ಸೆಳೀತಾ ಇದೆ. ಆದರೆ ಇವೆಲ್ಲವುಗಳ ನಡುವೆ ಚಂದನಾ ಅವರು ಜಾಹ್ನವಿ ಪಾತ್ರದಿಂದ ಹೊರಗೆ ಬರಲಿದ್ದು, ಅವರು ಲಕ್ಷ್ಮೀ ನಿವಾಸ ಸೀರಿಯಲ್ ಗೆ ಗುಡ್ ಬೈ ಹೇಳಿದ್ದಾರೆ ಎನ್ನುವ ಮಾತೊಂದು ಹರಿದಾಡುತ್ತಿದೆಯಂತೆ.
ಅದಕ್ಕೆ ಚಂದನ ಅವರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಒಂದನ್ನು ಶೇರ್ ಮಾಡಿಕೊಂಡು ಸ್ಪಷ್ಟನೆಯನ್ನು ನೀಡಿದ್ದಾರೆ. ನಟಿ ತಮ್ಮ ಪೋಸ್ಟ್ ಮೂಲಕ ಅಭಿಮಾನಿಗಳು ಮತ್ತು ವೀಕ್ಷಕರಿಗೆ ಸದ್ಯಕ್ಕೆ ನಾನು ಈ ಶೋವನ್ನ ಬಿಡೋದಿಲ್ಲ ಎನ್ನುವ ಮಾತನ್ನ ಹೇಳಿದ್ದಾರೆ. ಜಾಹ್ನವಿಯಾಗಿ ನಾನು ಪಾತ್ರವನ್ನು ಮುಂದುವರಿಸುತ್ತೇನೆ, ನಿಮ್ಮ ಪ್ರೀತಿ ಇರಲಿ ಎಂದಿದ್ದಾರೆ.
ಈ ಮೂಲಕ ಚಂದನಾ ಅವರು ವೈಯಕ್ತಿಕ ಕಾರಣಗಳಿಂದ ಸೀರಿಯಲ್ ನಿಂದ ಹೊರಗೆ ಬಂದು ಬಿಡ್ತಾರೆ ಅಂತ ಹರಡಿದ್ದ ಸುದ್ದಿಗಳು ಹಾಗೂ ವದಂತಿಗಳಿಗೆ ತಮ್ಮ ಕಡೆಯಿಂದ ಸ್ಪಷ್ಟನೆ ನೀಡೋ ಮೂಲಕ ಅದೆಲ್ಲಾ ಕೇವಲ ಸುಳ್ಳು ಸುದ್ದಿಗಳು ಎಂದು ಖಾತ್ರಿಪಡಿಸುವ ಮೂಲಕ ಅಭಿಮಾನಿಗಳಿಗೆ ಖುಷಿಯನ್ನು ನೀಡಿದ್ದಾರೆ.