Puttakkana Makkalu: ಪುಟ್ಟಕ್ಕನ ಮಕ್ಕಳು ಸೀರಿಯಲ್ (Puttakkana Makkalu) ಕನ್ನಡ ಕಿರುತೆರೆಯ ಅತ್ಯಂತ ಜನಪ್ರಿಯ ಸೀರಿಯಲ್ ಗಳಲ್ಲಿ ಒಂದಾಗಿದೆ. ಪ್ರಸ್ತುತ ಕಥೆಯಲ್ಲಿ ಪುಟ್ಟಕ್ಕನ ಹಿರಿ ಮಗಳು ಸ್ನೇಹ ಮನೆ ಬಿಟ್ಟು ಹೋದಳೆಂದು ನೋವಿನಲ್ಲಿ ಪುಟ್ಟಕ್ಕ ಇರವಾಗಲೇ ಈಗ ಮತ್ತೊಂದು ಬರ ಸಿಡಿಲಿನಂತಹ ಪರಿಸ್ಥಿತಿ ಎದುರಾಗಿದೆ. ಏಕೆಂದರೆ ಸಹನಾ ಶವವಾಗಿ ಪತ್ತೆಯಾಗಿದ್ದಾಳೆ. ಇದನ್ನು ನೋಡಿ ಮನೆ ಮಂದಿ ಕಣ್ಣೀರನ್ನು ಹಾಕಿದ್ದಾರೆ. ಮಗಳನ್ನು ಕಳೆದಕೊಂಡ ಪುಟ್ಟಕ್ಕನ ಗೋಳು ಕಣ್ಣೀರನ್ನು ತರಿಸುವ ಹಾಗೆ ಆಗಿದೆ.
ಗಂಡ ಮುರುಳಿ (Muruli) ಜೊತೆ ವಿಚ್ಚೇದನ ಪಡೆಯಲು ನಿರ್ಧರಿಸಿದ್ದ ಸಹನಾ (Sahana) ತವರು ಮನೆಗೆ ತಾನು ಭಾರವಾಗಬಾರದು ಅಂತ ಮನೆ ಬಿಟ್ಟು ರಾತ್ರಿ ವೇಳೆ ಮನೆಯಿಂದ ಹೊರಗೆ ಬಂದು, ಊರು ಬಿಟ್ಟು ಹೋಗಿದ್ದಾಳೆ. ಸ್ವಂತವಾಗಿ ಜೀವನ ನಡೆಸಬೇಕೆಂದು ನಿರ್ಧರಿಸಿ ಮನೆಯಿಂದ ಹೊರ ಬಂದವಳು ಈಗ ಶವವಾಗಿ ಪತ್ತೆಯಾಗಿದ್ಧಾಳೆ. ಆದರೆ ಅದು ನಿಜವಾಗಿ ಸಹನಾ ಶವನಾ? ಅಥವಾ ಬೇರೆ ಯಾರಾದ್ರೂ ಆಗಿರಬಹುದು ಎನ್ನುವ ಅನುಮಾನ ಮೂಡಿದೆ.
ಯಾವುದಾದರೂ ಸೀರಿಯಲ್ ನಲ್ಲಿ ಆ ಪಾತ್ರ ಮಾಡುವ ಕಲಾವಿದರು ಸೀರಿಯಲ್ ನಿಂದ ಹೊರ ಬಂದಾಗ ಕಥೆಯಲ್ಲಿ ಅಪಘಾತ ಅಥವಾ ಇನ್ನೇನಾದ್ರು ಆಗಿ ಪ್ಲಾಸ್ಟಿಕ್ ಸರ್ಜರಿ ಆಗಿ ಮುಖ ಬದಲಾವಣೆಯೊಂದಿಗೆ ಹೊಸ ಕಲಾವಿದರು ಎಂಟ್ರಿ ಕೊಡೋದು ನಡೀತಾ ಇರುತ್ತೆ. ಅದೇ ರೀತಿ ಸಹನಾ ಪಾತ್ರದಲ್ಲೂ ಏನಾದರೂ ಬದಲಾವಣೆ ಆಗಬಹುದಾ? ಅನ್ನೋ ಅನುಮಾನ ಕೂಡಾ ಈಗ ಮೂಡಿದೆ ಅಂತಾನೇ ಹೇಳಬಹುದು.
ಆದರೆ ಇದೇ ವೇಳೆ ಪುಟ್ಟಕ್ಕನ ಮಕ್ಕಳು ಸೀರಿಯಲ್ ನಲ್ಲಿ ಸಹನಾ ಪಾತ್ರ ಕೂಡಾ ಬಹಳ ಮುಖ್ಯವಾದ ಪಾತ್ರಗಳಲ್ಲಿ ಒಂದಾಗಿರೋದ್ರಿಂದ ಆ ಪಾತ್ರವನ್ನ ಇಷ್ಟು ಬೇಗ ಮುಗಿಸೋದು ಸಾಧ್ಯವೇ ಇಲ್ಲ ಅನ್ನೋದು ಅನೇಕರ ಅಭಿಪ್ರಾಯ ಆಗಿದೆ. ಆದರೆ ವಾಹಿನಿ ಹಂಚಿಕೊಂಡಿರೋ ಹೊಸ ಪ್ರೊಮೋ ಮಾತ್ರ ಸದ್ಯಕ್ಕೆ ಬಹಳಷ್ಟು ಕುತೂಹಲವನ್ನು ಮೂಡಿಸಿದೆ ಅನ್ನೋದ್ರಲ್ಲಿ ಎರಡು ಮಾತಿಲ್ಲ.
ಸಹನಾ ಅತ್ತೆ ಮನೆಯಲ್ಲಿ ತನಗಾದ ಹಿಂಸೆಯನ್ನ ಗಂಡನ ಹತ್ರ ಹೇಳಿಕೊಂಡ್ರು, ವಿಷ ಹಾಕಿ ಸಾಯಿಸೋ ಪ್ರಯತ್ನ ಮಾಡಿದ್ದಾರೆ ಅಂದ್ರೂ ಮುರುಳಿ ಮೇಷ್ಟ್ರು ಅದನ್ನ ನಂಬೋಕೆ ಸಿದ್ಧವಾಗಿರ್ಲಿಲ್ಲ. ತನ್ನ ಕುಟುಂಬದ ಮೇಲೆ ಇಟ್ಟ ನಂಬಿಕೆಯಿಂದ ಸಹನಾ ಮಾತನ್ನ ಒಪ್ಪದೇ ವಿಚ್ಚೇದನ ಪಡೆಯೋಕೆ ಕೋರ್ಟ್ ಗೆ ಹೋದಾಗ ಅಲ್ಲಿ ಮುರುಳಿಗೆ ಅಸಲಿ ವಿಷಯ ಅರ್ಥ ಆಗಿದೆ. ಸಹನಾಗೆ ವಿಷ ಹಾಕಿದ್ದು, ಅವರ ಕುಟುಂಬ ಸಹನಾನ ಬದುಕಿಸಿದ್ದು ಎಲ್ಲಾ ಸ್ಪಷ್ಟವಾಗಿದೆ.
ಮುರುಳಿಗೆ ತನ್ನ ತಪ್ಪಿನ ಅರಿವಾಗಿದೆ. ಅಲ್ಲದೇ ಅವರು ಕ್ಷಮೆ ಕೇಳೋಕು ಸಿದ್ಧವಾಗಿದ್ದಾರೆ. ಆದರೆ ಸಹನಾ ಮಾತ್ರ ಅದಕ್ಕೆ ಒಪ್ಪಿಕೊಂಡಿಲ್ಲ. ತನ್ನ ಮೇಲೆ ನಂಬಿಕೆ ಇಲ್ದೇ ಇರೋ ಗಂಡನ ಜೊತೆ ಬದುಕೋದು ಕಷ್ಟ ಅಂತ ವಿಚ್ಚೇದನ ಪಡಿಲೇಬೇಕು ಅಂತ ದೃಢವಾದ ನಿರ್ಧಾರವನ್ನು ಮಾಡಿದ್ದಾಳೆ. ಸ್ವಂತವಾಗಿ ಬದುಕಬೇಕು ಅಂತ ಮನೆಯಿಂದ ಬಂದ ಸಹನಾ ಈಗ ಶವ ಆಗಿ ಪತ್ತೆ ಆಗಿದ್ದು, ಮುಂದೆ ಕಥೇಲಿ ಮತ್ತೇನು ಟ್ವಿಸ್ಟ್ ಇದೆ ಕಾದು ನೋಡಬೇಕಾಗಿದೆ.