Crime News: ಸ್ಮಾರ್ಟ್ ಫೋನ್ (Smart Phone) ಬಳಕೆ ಅನ್ನೋದು ಇತ್ತೀಚಿನ ವರ್ಷಗಳಲ್ಲಿ ಅಭ್ಯಾಸ ಎನ್ನುವುದಕ್ಕಿಂತ ಒಂದು ಚಟವಾಗಿ ಬದಲಾಗುತ್ತಿದೆ. ವಿಶೇಷವಾಗಿ ಯುವ ಪೀಳಿಗೆ ಮತ್ತು ಶಾಲಾ ವಿದ್ಯಾರ್ಥಿಗಳು ಸ್ಮಾರ್ಟ್ ಫೋನ್ ಗಳನ್ನು ಬಳಸುವುದರಲ್ಲೇ ಹೆಚ್ಚಿನ ಸಮಯ ಕಳೆಯುತ್ತಿದ್ದಾರೆ. ಅನೇಕ ಸಂದರ್ಭಗಳಲ್ಲಿ ಮನೆಯಲ್ಲಿ ಹಿರಿಯರು ಸ್ಮಾರ್ಟ್ ಫೋನ್ ಬಳಕೆ ಮಾಡಬೇಡಿ ಅಂದಾಗ ಕೋಪಿಸಿಕೊಳ್ಳುವವರ ಸಂಖ್ಯೆ ಹೆಚ್ಚಾಗಿದೆ. ಈಗ ಇಂಥದೇ ಘಟನೆಯೊಂದರಲ್ಲಿ ಮೊಬೈಲ್ ಫೋನ್ ನಲ್ಲಿ ಹುಡುಗರ ಜೊತೆಗೆ ಹೆಚ್ಚಾಗಿ ಮಾತನಾಡಬೇಡ ಅಂತ ಬುದ್ಧಿ ಮಾತನ್ನು ಹೇಳಿದ್ದಕ್ಕೆ ತನ್ನ ಸ್ವಂತ ಅಣ್ಣನನ್ನು 14 ವರ್ಷದ ಹುಡುಗಿಯೊಬ್ಬಳು ಬಹಳ ಕ್ರೂ ರವಾಗಿ ಕೊಲೆ ಮಾಡಿರುವ ಘಟನೆ (Crime News) ಛತ್ತೀಸ್ಗಡದಲ್ಲಿ ನಡೆದಿದೆ.
ಛತ್ತೀಸ್ಗಡದ ಖೈರಾಘರ್ ಚುಯಿಖಾದನ್ ಗಂಡೈ (Khairaghar Chhuikhadan Gandai) ಜಿಲ್ಲೆಯಲ್ಲಿ ಇಂತಹದೊಂದು ಘಟನೆ ನಡೆದಿದ್ದು ಬಾಲಕಿಯನ್ನು ಪೊಲೀಸರು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ. ಆಘಾತಕಾರಿ ವಿಚಾರ ಏನೆಂದರೆ ಬಾಲಕಿಯ ತನ್ನ ಹಿರಿಯ ಅಣ್ಣನನ್ನು ಕೊಡಲಿಯಿಂದ ಕೊಚ್ಚಿ ಕೊಂ ದು ಹಾಕಿದ್ದಾಳೆ. 14 ವರ್ಷದ ಬಾಲಕಿಯು ಫೋನಿನಲ್ಲಿ ಹುಡುಗರ ಜೊತೆಗೆ ಹೆಚ್ಚು ಮಾತನಾಡುತ್ತಿದ್ದಾಳೆ ಎನ್ನುವ ಕಾರಣಕ್ಕೆ ಆಕೆಯ 18 ವರ್ಷದ ಅಣ್ಣ ಹುಡುಗರೊಂದಿಗೆ ಫೋನ್ ನಲ್ಲಿ ಹರಟೆ ಹೊಡೆಯುವುದನ್ನು ನಿಲ್ಲಿಸು ಎಂದು ಬುದ್ಧಿ ಮಾತನ್ನ ಹೇಳಿದ್ದಾನೆ.
ಇದರಿಂದ ಬಾಲಕಿ ಕೆರಳಿದ್ದಾಳೆ. ಅಣ್ಣ ನಿದ್ದೆ ಮಾಡುವ ಸಂದರ್ಭದಲ್ಲಿ ಕೊಡಲಿ ತಂದು ನೇರವಾಗಿ ಅವನ ಕುತ್ತಿಗೆಗೆ ಹೊಡೆದ ಪರಿಣಾಮವಾಗಿ ತೀವ್ರ ರಕ್ತಸ್ರಾವದಿಂದ ಬಾಲಕಿಯ ಅಣ್ಣ ಸ್ಥಳದಲ್ಲಿ ಸಾವನ್ನಪ್ಪಿದ್ದಾನೆ. ಮನೆಯಲ್ಲಿ ಆಗ ಯಾರು ಇರಲಿಲ್ಲ, ಎಲ್ಲರೂ ಕೆಲಸಕ್ಕೆ ಹೊರಗೆ ಹೋಗಿದ್ದರು ಎನ್ನಲಾಗಿದೆ. ಅಣ್ಣನನ್ನು ಕೊಂದು ಹಾಕಿದ ನಂತರ ಬಾಲಕಿ ಸ್ನಾನ ಮಾಡಿಕೊಂಡು ರಕ್ತದ ಕಲೆಗಳಾದ ತನ್ನ ಬಟ್ಟೆಯನ್ನ ಶುಭ್ರ ಮಾಡಿದ್ದಾಳೆ. ನಂತರ ಏನೂ ತಿಳಿಯದವಳಂತೆ ಪಕ್ಕದ ಮನೆಯವರಿಗೆ ತನ್ನ ಅಣ್ಣನ ಕೊಲೆಯಾಗಿದೆ ಎನ್ನುವ ವಿಚಾರವನ್ನು ತಿಳಿಸಿದ್ದಾಳೆ.
ಘಟನೆಯ ಕುರಿತಾಗಿ ಪೊಲೀಸರಿಗೆ ವಿಚಾರ ತಿಳಿದು ಗ್ರಾಮಕ್ಕೆ ಆಗಮಿಸಿದ ಪೊಲೀಸರು ಘಟನೆಯ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ವಿಚಾರಣೆಯ ವೇಳೆ ಬಾಲಕಿಯು ನಡೆದ ಘಟನೆ ಏನು ಎನ್ನುವುದನ್ನು ವಿವರಿಸಿ, ತಾನೇ ಕೊಲೆ ಮಾಡಿರುವುದಾಗಿ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾಳೆ. ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣವನ್ನು ದಾಖಲು ಮಾಡಿದ್ದು ಬಾಲಕಿಯನ್ನು ಬಂಧಿಸಿ, ಬಾಲಾಪರಾಧಿ ಕೇಂದ್ರಕ್ಕೆ ಕಳುಹಿಸಿದ್ದಾರೆ.