Baba Ramdev: ಬಾಬಾ ರಾಮ್ ದೇವ್ ಗೆ ಶಾಕ್ ಕೊಟ್ಟ ಸರ್ಕಾರ; 14 ಉತ್ಪನ್ನಗಳ ಪರವಾನಗಿ ರದ್ದು

Written by Soma Shekar

Published on:

---Join Our Channel---

Baba Ramdev: ಬಾಬಾ ರಾಮ್‌ದೇವ್ (Baba Ramdev) ಅವರ ದಿವ್ಯ ಫಾರ್ಮಸಿ ಮತ್ತು ಪತಂಜಲಿ (Patanjali) ಆಯುರ್ವೇದ್ ಲಿಮಿಟೆಡ್ ಈಗಾಗಲೇ ಸಾಕಷ್ಟು ಹೆಸರನ್ನು ಮಾಡಿದೆ. ಆದರೆ ಈಗ ಇದರ ವಿರುದ್ಧ ದೂರನ್ನು ದಾಖಲು ಮಾಡುವುದಕ್ಕೆ ಅನುಮತಿಯನ್ನು ನೀಡಿರುವುದಾಗಿ ಉತ್ತರಾಖಂಡ ಸರ್ಕಾರವು ಅಫಿಡೆವಿಟ್ ನಲ್ಲಿ ಮಾಹಿತಿಯನ್ನು ನೀಡಿದೆ. ದಿವ್ಯ ಫಾರ್ಮಸಿ ಮತ್ತು ಪತಂಜಲಿ ಲಿಮಿಟೆಡ್ ಔಷಧ ಜಾಹೀರಾತು ಕಾನೂನನ್ನು ಪದೇ ಪದೇ ಉಲ್ಲಂಘನೆ ಮಾಡಿದೆ ಎನ್ನುವ ಕಾರಣಕ್ಕಾಗಿ ಒಟ್ಟು 14 ಉತ್ಪನ್ನಗಳ ಉತ್ಪಾದನಾ ಪರವಾನಗಿಯನ್ನು ರದ್ದು ಮಾಡಿದೆ.

ಕಾನೂನಿಗೆ ವಿರುದ್ಧವಾದಂತಹ ಯಾವುದೇ ಜಾಹೀರಾತನ್ನು ಪ್ರಕಟಣೆ ಮಾಡಿದರೂ ದಂಡ, ಜೈಲು ಶಿಕ್ಷೆ ಅಥವಾ ಎರಡನ್ನು ಒಳಗೊಂಡು ಕಠಿಣ ಶಿಸ್ತು ಮತ್ತು ಕಾನೂನು ಕ್ರಮಗಳನ್ನು ತೆಗೆದುಕೊಳ್ಳುವುದಕ್ಕೆ ರಾಜ್ಯ ಪರವಾನಗಿ ಪ್ರಾಧಿಕಾರವು ಮುಂದಾಗುತ್ತದೆ ಎಂದು ಉತ್ತರಾಖಂಡ (Uttarakhand) ಸರ್ಕಾರವು ಅಫಿಡೆವಿಟ್ ನಲ್ಲಿ ತಿಳಿಸಿದೆ. ಎಸ್‌ ಎಲ್‌ ಎ ಏ.15 ರಂದು ದಿವ್ಯ ಫಾರ್ಮಸಿ ಮತ್ತು ಪತಂಜಲಿ ಆಯುರ್ವೇದ್ ಲಿಮಿಟೆಡ್‌ ಗೆ ಆದೇಶ ಹೊರಡಿಸಿದೆ ಎಂದು ತಿಳಿದು ಬಂದಿದೆ.

ಆದೇಶದಲ್ಲಿ 14 ಉತ್ಪನ್ನಗಳಾದ ಸ್ವಸರಿ ಗೋಲ್ಡ್, ಸ್ವಸರಿ ವಟಿ, ಬ್ರಾಂಕೋಮ್, ಸ್ವಸರಿ ಪ್ರವಾಹಿ, ಸ್ವಸರಿ ಅವಳೇಹ್, ಮುಕ್ತಾವತಿ ಎಕ್ಸ್‌ ಟ್ರಾ ಪವರ್, ಲಿಪಿಡೋಮ್, ಬಿಪಿ ಗ್ರಿಟ್, ಮಧುಗ್ರಿತ್, ಮಧುನಾಶಿನಿವತಿ, ಲಿವಾಮೃತ್ ಅಡ್ವಾನ್ಸ್, ಲಿವೋಗ್ರಿಟ್, ಐಗ್ರಿಟ್ ಗೋಲ್ಡ್ ಮತ್ತು ಪತಂಜಲಿ ದೃಷ್ಟಿ ಐ ಡ್ರಾಪ್ ಅನ್ನು ದಿ ಡ್ರಗ್ಸ್ ಅಂಡ್ ಕಾಸ್ಮೆಟಿಕ್ಸ್ ರೂಲ್ಸ್, 1945 ರ ನಿಯಮ 159 (1) ರ ಅಡಿಯಲ್ಲಿ ತಕ್ಷಣವೇ ಜಾರಿಗೆ ಬರುವಂತೆ ಪರವಾನಗಿ ರದ್ದುಗೊಳಿಸಲಾಗಿದೆ.

ದಿವ್ಯ ಫಾರ್ಮಸಿ ಮತ್ತು ಪತಂಜಲಿ ಆಯುರ್ವೇದ್ ಲಿಮಿಟೆಡ್ ನ ವಿರುದ್ಧ ಕಾನೂನಿನಲ್ಲಿ ಸೂಚಿಸಲಾಗಿರುವಂತಹ ಕಾರ್ಯ ವಿಧಾನ ಮತ್ತು ಸುಪ್ರೀಂ ಕೋರ್ಟ್ ನೀಡಿರುವಂತಹ ನಿರ್ದೇಶನಗಳ ಪ್ರಕಾರ ಮುಂದಿನ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ ಎಂಬುದಾಗಿ ಎಸ್ ಎಲ್ ಎ ತಿಳಿಸಿದೆ.

Leave a Comment