DKD Show: ಗ್ಯಾರೇಜ್ ನಿಂದ ಡಿಕೆಡಿ ವರೆಗೆ ಬಂದ ಸಂಜನಾ, ಜೀವನದ ನೋವಿನ ನಡುವೆಯೇ ಸಾಧನೆಯ ಕಥೆ

Written by Soma Shekar

Published on:

---Join Our Channel---

DKD Show: ಕಿರುತೆರೆಯ ಅತ್ಯಂತ ಜನಪ್ರಿಯ ಶೋ ಗಳಲ್ಲಿ ಒಂದಾಗಿರುವ ಡ್ಯಾನ್ಸ್ ರಿಯಾಲಿಟಿ ಶೋ ಡಿಕೆಡಿ (DKD Show) ಹೊಸ ಸೀಸನ್ ಆರಂಭವಾಗಿದೆ.‌ ಅಲ್ಲದೇ ಈ ಬಾರಿ ಡಿಕೆಡಿ ಬಹಳ ವಿಶೇಷವಾಗಿ, ಹೊಸ ಹಾಗೂ ವಿಭಿನ್ನವಾದ ಕಾನ್ಸೆಪ್ಟ್ ನೊಂದಿಗೆ ಪ್ರೇಕ್ಷಕರ ಮುಂದೆ ಬರ್ತಿದೆ. ಒಂದು ಹೊಸ ರೀತಿಯ ಅನುಭವವನ್ನು ಪ್ರೇಕ್ಷಕರಿಗೆ ನೀಡಲು ಡಿಕೆಡಿ ನಿರ್ಧಾರವನ್ನು ಮಾಡಿದ್ದು, ಈಗಾಗಲೇ ಅನೇಕರು ಇದನ್ನ ನೋಡಿ ಥ್ರಿಲ್ ಆಗಿದ್ದಾರೆ.

ಈ ಬಾರಿ ಡ್ಯಾನ್ಸ್ ಬರದೇ ಇರೋರನ್ನ ವಾಹಿನಿ ಡ್ಯಾನ್ಸ್ ಶೋ ಗೆ ಕರೆ ತಂದಿದೆ. ಅಲ್ಲದೇ ಎರಡನೇ ವಾರದಲ್ಲಿ ಶೋ ನಲ್ಲಿ ಮತ್ತೊಂದು ಟ್ವಿಸ್ಟ್ ನೀಡಿದೆ ಮೊದಲ ವಾರದಲ್ಲಿ ಡ್ಯಾನ್ಸ್ ಬರದ ಸೆಲೆಬ್ರಿಟಿಗಳನ್ನ ಪರಿಚಯ ಮಾಡಿದ್ದ ಶೋ ನಲ್ಲಿ ಈ ವಾರ ಸಖತ್ ಆಗಿ ಡ್ಯಾನ್ಸ್ ಮಾಡೋ ಪ್ರತಿಭಾವಂತರನ್ನ ಸೆಲೆಬ್ರಿಟಿಗಳಿಗೆ ಜೋಡಿಯಾಗಿ ಮಾಡಿದ್ದಾರೆ.

ಅಮೃತಧಾರೆ ಸೀರಿಯಲ್ ನಲ್ಲಿ ಜೀವ ಅನ್ನೋ ಪಾತ್ರ ಮಾಡ್ತಿರೋ ನಟನಿಗೆ ಡಿಕೆಡಿಯಲ್ಲಿ ಜೋಡಿಯಾಗಿ ಸಂಜನಾ (Sanjana) ಜಬರ್ದಸ್ತ್ ಎಂಟ್ರಿಯನ್ನು ನೀಡಿದ್ದಾರೆ. ಉತ್ತರ ಕರ್ನಾಟಕದ ಮೂಲದವರಾದ ಸಂಜು ಡ್ಯಾನ್ಸ್ ನೋಡಿ ಜಡ್ಜ್ ಗಳು ಸಹಾ ಫಿದಾ ಆಗಿದ್ದು, ಸಂಜು ಅವರನ್ನು ಹಾಡಿ ಹೊಗಳಿದ್ದಾರೆ.

ಡ್ಯಾನ್ಸ್ ನಂತರ ಸಂಜು ಮಾತನಾಡ್ತಾ ತಮ್ಮ ಜೀವನದ ಬಗ್ಗೆ ಹೇಳುವಾಗ ಸಂಜು ಪಟ್ಟ ಕಷ್ಟಗಳು ಎಲ್ಲರ ಮುಂದೆ ಬಂದಿದೆ. ಅಪ್ಪನನ್ನ ಕರೆದುಕೊಂಡ ಮೇಲೆ ಸಂಜು ಗ್ಯಾರೇಜ್ ನಲ್ಲಿ ಕೆಲಸ ಮಾಡಿದ್ದು, ಆರ್ಕೆಸ್ಟ್ರಾ ಗಳಲ್ಲಿ ದುಡಿದದ್ದು, ಮದುವೆ ಸಮಾರಂಭಗಳಲ್ಲಿ ಡ್ಯಾನ್ಸ್ ಮಾಡಿದ್ದು ಎಲ್ಲವನ್ನು ಹೇಳಿಕೊಂಡಿದ್ದಾರೆ.

ಕಳೆದ ಬಾರಿ ಸಂಜನಾ ಡಿಕೆಡಿಗೆ ಆಯ್ಕೆ ಆಗಿರಲಿಲ್ಲವಂತೆ. ಆದರೆ ಈ ಬಾರಿ ಅವರು ಆಯ್ಕೆ ಆಗಿರೋದು ಅವರ ಅಮ್ಮ ಮತ್ತು ಅಕ್ಕನಿಗೂ ಖುಷಿ ನೀಡಿದೆ. ಸಂಜನಾ ಎಸ್ ಎಸ್ ಎಲ್ ಸಿ ವರೆಗೆ ಮಾತ್ರ ಓದಿದ್ದಾರೆ. ಅಕ್ಕನ ಓದಿಗಾಗಿ ತಾನು ದುಡಿಯೋದಕ್ಕೆ ಮುಂದಾಗಿದ್ದಾರೆ ಸಂಜನಾ.

ಸಂಜನಾ ಅವರ ಇಂತಹ ಸಾಧನೆ ಅನೇಕರಿಗೆ ಖಂಡಿತ ಸ್ಪೂರ್ತಿಯಾಗಲಿದೆ. ಜಡ್ಜ್ ಗಳು ಸಹಾ ಸಂಜನಾ ಅವರ ಇಂತಹ ಕಷ್ಟ ಹಾಗೂ ಹೋರಾಟದ ಹಾದಿಯ ಬಗ್ಗೆ ತಿಳಿದು ಮೆಚ್ಚುಗೆ ನೀಡಿದ್ದಾರೆ. ಡಿಕೆಡಿಗೆ ಬರುವ ಕನಸು ನನಸಾಗಿರುವುದಕ್ಕೆ ಈಗ ಸಂಜನಾ ಸಹಾ ಬಹಳ ಖುಷಿಯಾಗಿದ್ದಾರೆ.

Namratha Gowda: ನಮ್ರತಾ ಗೌಡ ಹೊಸ ಬೋಲ್ಡ್ ಲುಕ್ ಗೆ ಫ್ಯಾನ್ಸ್ ಫಿದಾ; ಬಿಗ್ ಬಾಸ್ ನಂತ್ರ ನಟಿ ಏನ್ಮಾಡ್ತಿದ್ದಾರೆ

Leave a Comment