Radhika Merchant: ವಿದೇಶದ ನೆಲದಲ್ಲೂ ಭಾರತೀಯ ಸಂಸ್ಕೃತಿ ಮರೆಯದ ಅಂಬಾನಿ ಸೊಸೆ; ಹರಿದು ಬಂತು ಮೆಚ್ಚುಗೆ

Written by Soma Shekar

Published on:

---Join Our Channel---

Radhika Merchant: ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ ಸದಸ್ಯೆ ಹಾಗೂ ರಿಲಯನ್ಸ್ ಫೌಂಡೇಶನ್ ಅಧ್ಯಕ್ಷೆ ಆಗಿರುವ ನೀತಾ ಅಂಬಾನಿ (Nita Ambani) ಹಾಗೂ ಅವರ ಕುಟುಂಬ ಒಲಂಪಿಕ್ಸ್ ನ ಪಂದ್ಯ ವೀಕ್ಷಣೆಯನ್ನು ಮಾಡಲು ಈಗಾಗಲೇ ಪ್ಯಾರಿಸ್‌ಗೆ ತೆರಳಿದ್ದಾರೆ. ಈ ಸಂದರ್ಭದಲ್ಲಿ ನವ ಜೋಡಿಯಾದ ಅನಂತ್​ ಅಂಬಾನಿ ಹಾಗೂ ರಾಧಿಕ ಮರ್ಚೆಂಟ್​ (Radhika Merchant) ಸಹಾ ಇದರಲ್ಲಿ ಭಾಗಿಯಾಗಿದ್ದರು.

ಮುಖೇಶ್ ಅಂಬಾನಿಯ (Mukhesh Ambani) ಮುದ್ದಿನ ಸೊಸೆಯ ಫೋಟೋ ಮತ್ತು ವೀಡಿಯೋಗಳನ್ನು ನೋಡಿದ ನೆಟ್ಟಿಗರು ನೆಟ್ಟಿಗರು ದೊಡ್ಡ ಮಟ್ಟದಲ್ಲಿ ಶ್ಲಾಘನೆ ಮಾಡುತ್ತಿದ್ದಾರೆ. ಪ್ಯಾರಿಸ್ ನಲ್ಲಿ ರಾಧಿಕಾ ವೆಸ್ಟರ್ನ್ ಡ್ರೆಸ್ ಧರಿಸಿದ್ದರಾದರೂ ರಾಧಿಕಾ ಮಂಗಳ ಸೂತ್ರಕ್ಕೆ ವಿಶೇಷವಾದ ಗೌರವವನ್ನು ನೀಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ರಾಧಿಕಾ ಫೋಟೋಗಳು ವೈರಲ್ ಆಗಿದೆ.

ಹಿಂದೂ ಧಾರ್ಮಿಕ ಗ್ರಂಥಗಳು ಹಾಗೂ ಸಂಪ್ರದಾಯದ ಪ್ರಕಾರ ವಿವಾಹಿತ ಮಹಿಳೆ ಮಂಗಳಸೂತ್ರವನ್ನು ಧರಿಸುವುದು ಕಡ್ಡಾಯ ಎನ್ನಲಾಗಿದೆ. ಆದರೆ ಇಂದಿನ ಆಧುನಿಕ ಜೀವನಕ್ಕೆ ಒಗ್ಗಿಕೊಂಡು ಅನೇಕ ಮಹಿಳೆಯರು ಮಂಗಳ ಸೂತ್ರವನ್ನು ಧರಿಸುವುದಿಲ್ಲ.

ಅಲ್ಲದೇ ಕೆಲವು ಸೆಲೆಬ್ರಿಟಿಗಳು, ನಟಿಯರು ವಿದೇಶಕ್ಕೆ ಹೋದಾಗ ಅಲ್ಲಿ ಫೋಟೋ ಶೂಟ್ ಗಳ ವೇಳೆಯಲ್ಲೂ ಸಹಾ ಮಂಗಳ ಸೂತ್ರವನ್ನು ತೆಗೆಯುವುದು ಸಾಮಾನ್ಯ. ಆದರೆ ರಾಧಿಕಾ ವಿದೇಶಿ ಉಡುಗೆ ತೊಟ್ಟರೂ ಮಂಗಳ ಸೂತ್ರ ತೆಗೆಯದೇ ಇರೋದನ್ನ ನೋಡಿ ಜನ ರಾಧಿಕಾ ಅವರನ್ನ ಹಾಡಿ ಹೊಗಳಿದ್ದಾರೆ.‌

Leave a Comment