Vidya Balan: ಮುಂಬೈನ ಐಕಾನಿಕ್ ರಾಯಲ್ ಒಪೇರಾ ಹೌಸ್ ನ ವೇದಿಕೆಯಲ್ಲಿ ಶುಕ್ರವಾರದಂದು ಬಾಲಿವುಡ್ (Bollywood) ನಟಿಯರಾದ ಮಾಧುರಿ ದೀಕ್ಷಿತ್ (Madhuri Dixit) ಮತ್ತು ವಿದ್ಯಾಬಾಲನ್ (Vidya Balan) ಇಬ್ಬರೂ ಸಹಾ ಅದ್ಭುತ ನೃತ್ಯ ಪ್ರದರ್ಶನವನ್ನು ನೀಡಿದ್ದು, ಅಮಿಜೆ ತೋಮಾರ್ ಹಾಡಿಗೆ ಇಬ್ಬರೂ ನರ್ತಿಸಿದ್ದನ್ನು ನೋಡಿ ನೆರೆದಿದ್ದವರು ಖುಷಿಯಾಗಿದ್ದಾರೆ.
ನೇರ ಪ್ರಸಾರ ಕಾರ್ಯಕ್ರಮದ ವೇಳೆ ವಿದ್ಯಾ ಮತ್ತು ಮಾಧುರಿ ಇಬ್ಬರೂ ಸಹಾ ಅಭಿಮಾನಿಗಳ ಮನಸ್ಸನ್ನು ಗೆಲ್ಲುವ ಹಾಗೆ ನೃತ್ಯ ಪ್ರದರ್ಶನ ಮಾಡುವಾಗಲೇ ವಿದ್ಯಾ ಬಾಲನ್ ಇದ್ದಕ್ಕಿದ್ದ ಹಾಗೆ ನೃತ್ಯದ ಸ್ಟೆಪ್ ಮಾಡುವಾಗ ಆಕಸ್ಮಿಕವಾಗಿ ಸಮತೋಲನ ತಪ್ಪಿ ಕೆಳಗೆ ಬಿದ್ದಿದ್ದಾರೆ.
ಆದರೆ ನಟಿ ಕೆಳಗೆ ಬಿದ್ದರೂ ಸಹಾ ನೃತ್ಯ ನಿಲ್ಲಿಸಿದೇ ಸಂಭಾಳಿಸಿದ್ದಾರೆ. ಮಾಧುರಿ ಕೂಡಾ ವಿದ್ಯಾ ಬಾಲನ್ ಬಿದ್ದಿದ್ದರಿಂದ ಸ್ಟೆಪ್ ಬದಲಾದರೂ ಅದಕ್ಕೆ ತಕ್ಕಂತೆ ಡ್ಯಾನ್ಸ್ ಮಾಡಿ ಸಾಥ್ ನೀಡಿದ್ದಾರೆ. ಈ ವೀಡಿಯೋ ಈಗ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ.
ಮಾಧುರಿ ಮತ್ತು ವಿದ್ಯಾ ಅವರ ನೃತ್ಯಕ್ಕೆ ಮೆಚ್ಚುಗೆಗಳು ಹರಿದು ಬರುತ್ತಿದೆ. ಬೀಳೋದು ಸಹಜ ಆದರೆ ಮತ್ತೆ ಮೇಲೆ ಏಳೋದು ಸಾಧನೆ, ಇದು ಖಂಡಿತ ಸ್ಪೂರ್ತಿದಾಯಕ ಕ್ಷಣ ಎಂದು ನೆಟ್ಟಿಗರು ವೀಡಿಯೋಗೆ ಕಾಮೆಂಟ್ ಮಾಡಿ ವಿದ್ಯಾ ಬಾಲನ್ ಅವರಿಗೆ ಮೆಚ್ಚುಗೆಗಳನ್ನು ನೀಡಿದ್ದಾರೆ.
Alia Bhatt: ಮುಖದ ಅಂದ ಹೆಚ್ಚಿಸಲು ಪಡೆದ ಚಿಕಿತ್ಸೆಯಿಂದ ಪಾರ್ಶವಾಯುಗೆ ಆಲಿಯಾ ಭಟ್ ಗುರಿಯಾದ್ರಾ?