Sarath Babu: ಈ ನಟ ಕನ್ನಡ ಮಾತ್ರವೇ ಅಲ್ಲದೇ ದಕ್ಷಿಣದ ನಾಲ್ಕು ಭಾಷೆಗಳ ಸಿನಿಮಾಗಳಲ್ಲಿ ನಟಿಸಿ, ಸ್ಟಾರ್ ನಟನ ಪಟ್ಟವನ್ನು ಪಡೆದವರು. ಪೋಷಕ ನಟನಾಗಿ ಅಪಾರ ಜನಪ್ರಿಯತೆಯನ್ನು ಪಡೆದಿದ್ದವರು. ಹೌದು, ಹಿರಿಯ ನಟ, ದಿವಂಗತ ಶರತ್ ಬಾಬು (Sarath Babu) ಅವರು ದಕ್ಷಿಣದ ಸಿನಿಮಾ ರಂಗದಲ್ಲಿ ಸ್ಟಾರ್ ನಟನಾಗಿದ್ದವರು. ತೆಲುಗು ಸಿನಿಮಾ ರಂಗದಲ್ಲಿ ತನ್ನದೇ ಆದ ಸ್ಥಾನವನ್ನು ಹಾಗೂ ವರ್ಚಸ್ಸನ್ನು ಪಡೆದ ನಟ ಇವರು.
ಶರತ್ ಬಾಬು ಅವರು ಹಿಂದಿ ಸಿನಿಮಾಗಳಲ್ಲೂ ನಟಿಸಿದ್ದರು. ತಮಿಳು ಸಿನಿಮಾ ರಂಗದಲ್ಲೂ ದೊಡ್ಡ ಹೆಸರನ್ನು ಮಾಡಿದ್ದ ಈ ನಟ ಚೆನ್ನೈನಲ್ಲಿ (Chennai) ನೆಲೆಸಿದ್ದರು. ಸಿನಿಮಾ ರಂಗದಲ್ಲಿ ದೊಡ್ಡ ಹೆಸರನ್ನು ಮಾಡಿದ್ದ ಈ ನಟ 1971 ರಲ್ಲಿ ತೆಲುಗಿನ ಪ್ರಖ್ಯಾತ ಹಾಸ್ಯ ನಟಿ, ಪೋಷಕ ನಟಿಯೂ ಆಗಿದ್ದ ರಮಾಪ್ರಭ ಅವರ ಜೊತೆಗೆ ದಾಂಪತ್ಯ ಜೀವನಕ್ಕೆ ಅಡಿಯಿಟ್ಟಿದ್ದರು.
ರಮಾಪ್ರಭ (Ramaprabha) ಅವರು ಹಳೆ ತಲೆಮಾರಿನ ನಟಿ, ಭರ್ಜರಿ ಜನಪ್ರಿಯತೆ ಪಡೆದಿದ್ದ ನಟಿ, ಶರತ್ ಬಾಬು ಮತ್ತು ರಮಾಪ್ರಭ ಅವರ ವೈವಾಹಿಕ ಸಂಬಂಧ 1988 ರಲ್ಲಿ ವಿಚ್ಚೇದನದೊಂದಿಗೆ ಮುಗಿದ ಅಧ್ಯಾಯವಾಗಿ ಹೋಯಿತು. ಅನಂತರ ಶರತ್ ಬಾಬು ಸ್ನೇಹಲತಾ ಜೊತೆಗೆ ವಿವಾಹವಾದರು. ಆದರೆ ಈ ಸಂಬಂಧ ಸಹಾ ಹೆಚ್ಚು ಸಮಯ ಉಳಿಯಲಿಲ್ಲ.
ಹೀಗೆ ಒಂದಲ್ಲಾ ಎರಡು ಮದುವೆಯಾದರೂ ಸಹಾ ಶರತ್ ಬಾಬು ಅವರಿಗೆ ವಾರಸುದಾರರಿಲ್ಲ ಎನ್ನುವುದು ಸತ್ಯ. ಕಳೆದ ವರ್ಷ ಜುಲೈ ನಲ್ಲಿ ಶರತ್ ಬಾಬು ಅವರು ಆರೋಗ್ಯ ಸಮಸ್ಯೆಯಿಂದ ಇಹಲೋಕವನ್ನು ತ್ಯಜಿಸಿದರು. ಅದಾದ ನಂತರ ಈಗ ಅವರ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿಗೆ ವಾರಸುದಾರರು ಯಾರು ಎನ್ನುವ ವಿಚಾರ ಮುನ್ನೆಲೆಗೆ ಬಂದಿದೆ.
ನಟ ಶರತ್ ಬಾಬು ಅವರು ಚೆನ್ನೈ, ಬೆಂಗಳೂರು, ಹೈದರಾಬಾದ್ ನಲ್ಲಿ ಕೋಟ್ಯಂತರ ಮೌಲ್ಯದ ಆಸ್ತಿ ಹೊಂದಿದ್ದರು. ಮನೆಗಳು, ಮಾಲ್ ಗಳು, ಅಪಾರ್ಟ್‌ಮೆಂಟ್‌ಗಳು, ವಿಲ್ಲಾಗಳು ಮತ್ತು ಕಂಪನಿಗಳಂತ ಆಸ್ತಿ ಅವರ ಹೆಸರಿನಲ್ಲಿದೆ. ಆದರೆ ಅವರಿಗೆ ತಮ್ಮ ಸ್ವಂತ ಮಕ್ಕಳು ಇಲ್ಲದ ಕಾರಣ ಈಗ ಅವರ ಆಸ್ತಿಯನ್ನು ಅವರ ಸಹೋದರರ ಮಕ್ಕಳಿಗೆ ನೀಡಬಹುದು ಎನ್ನಲಾಗಿದೆ.
Abhishek Bachchan: ನನ್ನೆಲ್ಲಾ ಸಂಘರ್ಷಕ್ಕೆ ನಮ್ಮಪ್ಪನೇ ಕಾರಣ, ಮನಸ್ಸಿನ ನೋವು ಬಿಚ್ಚಿಟ್ಟ ಅಭಿಷೇಕ್ ಬಚ್ಚನ್