Varun Aradya: ರೀಲ್ಸ್ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಸ್ಟಾರ್ ಆಗಿ, ನಂತರ ಸೀರಿಯಲ್ ಗೆ ಎಂಟ್ರಿ ಕೊಟ್ಟು ಹೆಸರು ಮಾಡಿರುವ ನಟ ವರುಣ್ ಆರಾಧ್ಯ (Varun Aradya) ಅವರ ವಿರುದ್ಧ ಮಾಜಿ ಪ್ರೇಯಸಿ ಕಂಪ್ಲೇಟ್ ಮಾಡಿದ್ದಾರೆನ್ನುವ ಸುದ್ದಿ ನಿನ್ನೆ ವೈರಲ್ ಆಗಿತ್ತು. ವರುಣ್ ಆರಾಧ್ಯ ಖಾಸಗಿ ವಿಡಿಯೋ ಇಟ್ಟುಕೊಂಡು ತನ್ನನ್ನು ಬ್ಲ್ಯಾಕ್ ಮೇಲ್ ಮಾಡ್ತಾರೆ ಅಂತ ದೂರು ನೀಡಿದ್ದರು.
ಆದರೆ ಈಗ ಈ ಕಥೆಗೊಂದು ದೊಡ್ಡ ಟ್ಬಿಸ್ಟ್ ಸಿಕ್ಕಿದೆ. ಏಕೆಂದರೆ ಈ ವಿಚಾರವಾಗಿ ವರುಣ್ ಅವರ ಮಾಜಿ ಪ್ರೇಯಸಿಯೇ ತಮ್ಮ ಇನ್ಸ್ಟಾದಲ್ಲಿ ಇದೆಲ್ಲಾ ಕೇವಲ ಸುಳ್ಳು ಸುದ್ದಿ ಎಂಬುದಾಗಿ ಪೋಸ್ಟ್ ಮಾಡಿ ಶಾಕ್ ನೀಡಿದ್ದಾರೆ. ಮಾದ್ಯಮಗಳಲ್ಲಿ ಬರುತ್ತಿರುವುದು ಸುಳ್ಳು ಸುದ್ದಿ ಎಂದು ಮಾಜಿ ಪ್ರೇಯಸಿ ಸ್ಪಷ್ಟನೆಯನ್ನು ನೀಡಿದ್ದಾರೆ.
ನಟ ವರುಣ್ ಆರಾಧ್ಯ ವಿರುದ್ಧ ಸೆ.7 ರಂದು ಬೆಂಗಳೂರು ಪಶ್ಚಿಮ ವಿಭಾಗದ ಸೈಬರ್ ಕ್ರೈಮ್ ಠಾಷೆಯಲ್ಲಿ ಎಫ್ ಐ ಆರ್ (FIR) ದಾಖಲಾಗಿದೆ ಎನ್ನುವುದಾಗಿ ಸುದ್ದಿಗಳು ಪ್ರಸಾರವಾಗಿತ್ತು. ಅದರಲ್ಲಿ ಸ್ವತಃ ಮಾಜಿ ಪ್ರೇಯಸಿಯೇ ವರುಣ್ ಆರಾಧ್ಯ ವಿರುದ್ಧ ದೂರು ದಾಖಲಿಸಿದ್ದರು ಎಂಬುದಾಗಿ ತೋರಿಸಲಾಗಿತ್ತು.
ಆದರೆ ಈಗ ಮಾಜಿ ಪ್ರೇಯಸಿ ಅದೆಲ್ಲವೂ ಸಹಾ ಸುಳ್ಳು ಸುದ್ದಿಯೆಂದು ಹೇಳಿದ್ದಾರೆ. ಮಾದ್ಯಮಗಳ ಮೂಲಕ ನೀವು ನೋಡುತ್ತಿರುವುದು ಸುಳ್ಳು ಮಾಹಿತಿ, ಇದು ಇನ್ಸ್ಟಾಗ್ರಾಂ ಪ್ರೊಫೈಲ್ ಮತ್ತು ಇತರೆ ಸಾಮಾಜಿಕ ಮಾದ್ಯಮಗಳ ಫ್ಲಾಟ್ ಫಾರಂನಿಂದ ಎಲ್ಲಾ ರೀಲ್ ತೆಗೆದು ಹಾಕುವುದರ ಕುರಿತಾಗಿದೆ. ನಕಲಿ ಸುದ್ದಿಗಳನ್ನು ಹರಡುವುದನ್ನು ನಿಲ್ಲಿಸಿ ಎಂದಿದ್ದಾರೆ.