Namratha Gowda: ನಮ್ರತಾ ಮನೇಲಿ ವೈಭವದ ವರಮಹಾಲಕ್ಷ್ಮಿ ಪೂಜೆ, ಬಿಗ್ ಬಾಸ್ ಸ್ಪರ್ಧಿಗಳು ಹಾಜರ್, ಇಲ್ಲಿವೆ ಫೋಟೋಗಳು

Written by Soma Shekar

Published on:

---Join Our Channel---

Namratha Gowda : ನಿನ್ನೆ ವರಮಹಾಲಕ್ಷ್ಮಿ ಹಬ್ಬವನ್ನು ಸಾಮಾನ್ಯರಿಂದ ಹಿಡಿದು ಸೆಲೆಬ್ರಿಟಿಗಳ ವರೆಗೆ ಎಲ್ಲರೂ ತಮ್ಮ ಮನೆಗಳಲ್ಲಿ ಬಹಳ ಸಂಭ್ರಮ, ಸಡಗರದಿಂದ ಆಚರಿಸಿದ್ದು, ಶ್ರೀ ಮಹಾಲಕ್ಷ್ಮಿಯನ್ನು ಭಕ್ತಿ ಶ್ರದ್ಧೆ ಗಳಿಂದ ಆರಾಧನೆ ಮಾಡಿದ್ದಾರೆ.‌ ಇದೇ ವೇಳೆ ಬಿಗ್ ಬಾಸ್ ಖ್ಯಾತಿಯ ನಟಿ ನಮ್ರತಾ ಗೌಡ (Namratha Gowda) ಅವರ ಮನೆಯಲ್ಲಿ ಹಬ್ಬವನ್ನು ವೈಭವದಿಂದ ಆಚರಿಸಲಾಗಿದ್ದು, ಬಿಗ್ ಬಾಸ್ (Bigg Boss) ಸ್ಪರ್ಧಿಗಳು ಸಹಾ ಭಾಗಿಯಾಗಿದ್ದರು.

ನಮ್ರತಾ ಅವರ ಮನೆಯಲ್ಲಿ ನಡೆದ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮದ ಫೋಟೋಗಳು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುವ ಮೂಲಕ ಎಲ್ಲರ ಗಮನ ಸೆಳೆದು ಮೆಚ್ಚುಗೆಗಳನ್ನು ಪಡೆದುಕೊಂಡಿವೆ.

ಬಿಗ್ ಬಾಸ್ ಸೀಸನ್ ಹತ್ತರ ವಿನ್ನರ್ ನಟ ಕಾರ್ತಿಕ್ ಮಹೇಶ್ ಅವರು ತಮ್ಮ ತಾಯಿ ಮತ್ತು ಪುಟ್ಟ ಅಳಿಯನ ಜೊತೆಗೆ ನಮ್ರತಾ ಅವರ ಮನೆಗೆ ಆಗಮಿಸಿ ಹಬ್ಬದ ಸಂಭ್ರಮದಲ್ಲಿ ಭಾಗಿಯಾಗಿದ್ದರು.

ಬಿಗ್ ಬಾಸ್ ನಲ್ಲಿ ಸಿಕ್ಕಾಪಟ್ಟೆ ಸದ್ದು, ಸುದ್ದಿಯಾದ ನಟಿ ಸಂಗೀತಾ ಶೃಂಗೇರಿ ಅವರು ತಮ್ಮ ಅತ್ತಿಗೆ ಸುಚಿತ್ರಾ ಅವರ ಜೊತೆಗೆ ನಮ್ರತಾ ಅವರ ಮನೆಗೆ ಆಗಮಿಸಿದ್ದರು.

ಮೊದಲ ಮಗುವಿನ ನಿರೀಕ್ಷೆಯಲ್ಲಿ ಇರುವ ಕಿರುತೆರೆಯ ಜನಪ್ರಿಯ ನಟಿ ಕವಿತಾ ಗೌಡ ಅವರು ಸಹಾ ವರಮಹಾಲಕ್ಷ್ಮಿ ಹಬ್ಬಕ್ಕಾಗಿ ನಮ್ರತಾ ಅವರ ಮನೆಗೆ ಆಗಮಿಸಿದ್ದರು.

ಬುಲೆಟ್ ಪ್ರಕಾಶ್ ಅವರ ಪುತ್ರ ಬಿಗ್ ಬಾಸ್ ಸ್ಪರ್ಧಿ ರಕ್ಷಕ್ ಬುಲೆಟ್ ಸಹಾ ನಮ್ರತಾ ಅವರ ಮನೆಗೆ ಆಗಮಿಸಿದ್ದರು. ಅವರ ಫೋಟೋ ಸಹಾ ವೈರಲ್ ಆಗಿದೆ.

ಬಿಗ್ ಬಾಸ್ ಸ್ಪರ್ಧಿ ಜನಪ್ರಿಯ ನಟಿ ಸಿರಿ ಅವರು ನಮ್ರತಾ ಅವರ ಮನೆಗೆ ಪೂಜೆಯಲ್ಲಿ ಪಾಲ್ಗೊಳ್ಳುವ ಸಲುವಾಗಿ ಆಗಮಿಸಿದ್ದರು. ಇನ್ನೂ ಹಲವು ಕಿರುತೆರೆಯ ನಟ, ನಟಿಯರು ನಮ್ರತಾ ಅವರ ಮನೆಯಲ್ಲಿ ಹಾಜರಿದ್ದರು.

ನಮ್ರತಾ ಅವರ ಮನೆಯಲ್ಲಿ ಸಡಗರದಿಂದ ನಡೆದ ಹಬ್ಬದ ಸಂಭ್ರಮದ ಫೋಟೋಗಳನ್ನು ನೋಡಿದ ಅಭಿಮಾನಿಗಳು ಸಹಾ ಕಾಮೆಂಟ್ ಗಳಲ್ಲಿ ಹಬ್ಬದ ಶುಭಾಶಯವನ್ನು ಕೋರಿದ್ದಾರೆ.

Rakshit Shetty: 20 ಲಕ್ಷ ಠೇವಣಿ ಇಡಿ, ರಕ್ಷಿತ್ ಶೆಟ್ಟಿಗೆ ಹೈಕೋರ್ಟ್ ನ ನಿರ್ದೇಶನ, ನಟನ ಮುಂದಿನ ಹೆಜ್ಜೆ ಏನು

Leave a Comment