Ravi Teja : ಟಾಲಿವುಡ್ ನ ಮಾಸ್ ಮಹಾರಾಜ ಖ್ಯಾತಿಯ ಸ್ಟಾರ್ ನಟ ರವಿತೇಜ (Ravi Teja) ನಾಯಕನಾಗಿರುವ ‘ಮಿಸ್ಟರ್ ಬಚ್ಚನ್’ (Mr. Bachchan) ಸಿನಿಮಾ ಥಿಯೇಟರ್ ಗಳಲ್ಲಿ ನಿರೀಕ್ಷಿತ ಪ್ರತಿಕ್ರಿಯೆ ಪಡೆಯದೇ ಮಕಾಡೆ ಮಲಗುವ ಸ್ಥಿತಿ ಸೇರಾಗಿದೆ. ಇಂತಹ ಸೋಲಿನ ಹೊಣೆಗಾರಿಕೆಯನ್ನು ನಟ ರವಿತೇಜ ಅವರು ಸಹಾ ಹೊತ್ತಿದ್ದಾರೆ.
ಸಿನಿಮಾ ಸೋಲಿನಿಂದ ಬೇಸತ್ತಿರುವ ನಟ ರವಿತೇಜ ಅವರು, ಸಿನಿಮಾ ನಿರ್ಮಾಪಕರಿಗೂ ಇದರಿಂದ ದೊಡ್ಡ ನಷ್ಟವಾಗಿದೆ ಎನ್ನುವ ಕಾರಣಕ್ಕೆ ತಾವು ಪಡೆದಿದ್ದಂತಹ ಸಂಭಾವನೆಯಲ್ಲಿ 4 ಕೋಟಿ ರೂ. ಯನ್ನು ನಿರ್ಮಾಪಕರಿಗೆ ಹಿಂದಿರುಗಿಸಿದ್ದಾರೆ. ಮಿಸ್ಟರ್ ಬಚ್ಚನ್ ಸಿನಿಮಾ ಆಗಸ್ಟ್ ಹದಿನೈದರಂದು ತೆರೆ ಕಂಡಿತ್ತು.
ಸಿನಿಮಾ ನಿರ್ಮಾಣಕ್ಕೆ ಹೂಡಿದ ಬಂಡವಾಳ 85 ಕೋಟಿ ರೂ.ಗಳಾಗಿದ್ದು ಸಿನಿಮಾದ ಅದರ ಅರ್ಧದಷ್ಟು ಹಣವನ್ನು ಸಹಾ ಗಳಿಸಲು ಸಾಧ್ಯವಾಗದೇ ಹೀನಾಯ ಸೋಲು ಕಂಡಿದೆ. ಈ ಹಿನ್ನೆಲೆಯಲ್ಲಿ ನಟ ರವಿತೇಜ ತಾವು ಪಡೆದ ಸಂಭಾವನೆಯಲ್ಲಿ ನಾಲ್ಕು ಕೋಟಿ ರೂಪಾಯಿಗಳನ್ನು ಹಿಂತಿರುಗಿಸಿದ್ದಾರೆ.
ನಿರ್ದೇಶಕ ಹರೀಶ್ ಶಂಕರ್ (Hairsh Shankar) ಸಹಾ ಎರಡು ಕೋಟಿ ರೂಪಾಯಿಗಳನ್ನು ನಿರ್ಮಾಪಕರಿಗೆ ಹಿಂತಿರುಗಿಸಿದ್ದಾರೆ. ನಟ ಮತ್ತು ನಿರ್ದೇಶಕನ ಇಂತಹ ನಡೆಗೆ ಈಗ ವ್ಯಾಪಾಕ ಮೆಚ್ಚುಗೆಗಳು ಹರಿದು ಬರುತ್ತಿದೆ. ನಟ ರವಿತೇಜ ಅವರ ಮಿಸ್ಟರ್ ಬಚ್ಚನ್ ಸೋಲು ನಟನ ಅಭಿಮಾನಿಗಳಿಗೆ ಬೇಸರವನ್ನು ಉಂಟು ಮಾಡಿದೆ.
Bigg Boss Kannada: ಬಿಗ್ ಬಾಸ್ ಮನೆಗೆ ವರ್ಷಾ ಕಾವೇರಿ ಎಂಟ್ರಿ; ಈ ಬಗ್ಗೆ ಕೊನೆಗೂ ಸ್ಪಷ್ಟನೆ ಕೊಟ್ಟ ರೀಲ್ಸ್ ಬೆಡಗಿ