Bahubali: ಬಾಹುಬಲಿ ಸಿನಿಮಾದ ಹೀರೋ ಪಾತ್ರ ರಿಜೆಕ್ಟ್ ಮಾಡಿದ್ದ ಸ್ಟಾರ್ ಹೀರೋ; ಯಾರು ಆ ಸ್ಟಾರ್ ಹೀರೋ?

Written by Soma Shekar

Published on:

---Join Our Channel---

Bahubali : ತೆಲುಗು ಸಿನಿಮಾ ರಂಗದ ದಿಗ್ಗಜ ನಿರ್ದೇಶಕ, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರನ್ನ ಪಡೆದುಕೊಂಡಿರುವ ಎಸ್ ಎಸ್ ರಾಜಮೌಳಿ ( S S Rajamouli) ನಿರ್ದೇಶನದ ಬಾಹುಬಲಿ ಸಿನಿಮಾದ ಬಗ್ಗೆ ಪ್ರತ್ಯೇಕವಾಗಿ ಹೇಳುವ ಅವಶ್ಯಕತೆ ಖಂಡಿತ ಇಲ್ಲ ಎನ್ನುವಷ್ಟು ಜನಪ್ರಿಯತೆಯನ್ನು ಆ ಸಿನಿಮಾ ಪಡೆದುಕೊಂಡಿತ್ತು. ರಾಜಮೌಳಿ ನಿರ್ದೇಶನದ ಬಾಹುಬಲಿ (Bahubali) ಸಿನಿಮಾ ಭಾರತೀಯ ಸಿನಿಮಾ ರಂಗ ದಕ್ಷಿಣದ ಕಡೆಗೆ ಮುಖ ಮಾಡುವಂತೆ ಮಾಡಿತ್ತು.

ಬಾಲಿವುಡ್ ಸಿನಿಮಾಗಳು ಕೂಡಾ ಬಾಹುಬಲಿ ಸಿನಿಮಾದ ಮುಂದೆ ನೀರಸ ಪ್ರತಿಕ್ರಿಯೆಯನ್ನು ಕಂಡಿದ್ದವು. ಬಾಹುಬಲಿ ಸಿನಿಮಾ ಕಲೆಕ್ಷನ್ ವಿಚಾರದಲ್ಲಿ ಮಾತ್ರವಲ್ಲದೇ ಪ್ರಶಸ್ತಿಗಳ ವಿಚಾರದಲ್ಲೂ ಸುದ್ದಿಯನ್ನ ಮಾಡಿತ್ತು. ಈ ಸಿನಿಮಾದಲ್ಲಿ ಜನಪ್ರಿಯ ಕಲಾವಿದರ ದೊಡ್ಡ ದಂಡೇ ಇತ್ತು. ಬಾಹುಬಲಿ ಸಿನಿಮಾದ ನಂತರ ನಟ ಪ್ರಭಾಸ್ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ದೊಡ್ಡ ಮಟ್ಟದಲ್ಲಿ ಜನಪ್ರಿಯತೆಯನ್ನು ಪಡೆದುಕೊಂಡರು.

ಎರಡು ಭಾಗಗಳಲ್ಲಿ ಮೂಡಿಬಂದ ಈ ಸಿನಿಮಾ ಕಲೆಕ್ಷನ್ ವಿಚಾರದಲ್ಲಿ ದಾಖಲೆಯನ್ನು ಬರೆದಿತ್ತು. ಆದರೆ ಇಂತಹ ಸೂಪರ್ ಹಿಟ್ ಸಿನಿಮಾದಲ್ಲಿ ನಟಿಸುವ ಅವಕಾಶವನ್ನು ಒಬ್ಬ ಸ್ಟಾರ್ ನಟ ನಿರಾಕರಣೆ ಮಾಡಿದ್ದರು. ಹೌದು ಆ ನಟ ಬೇರೆ ಯಾರೂ ಅಲ್ಲ ತಮಿಳು ಸಿನಿಮಾರಂಗದ ಸ್ಟಾರ್ ಹೀರೋ ಸೂರ್ಯ ಅಂದರೆ ಅಚ್ಚರಿಯಾದರೂ ಇದು ನಿಜ.‌

ಬಾಹುಬಲಿ ಸಿನಿಮಾದಲ್ಲಿ ನಾಯಕನ ಪಾತ್ರಕ್ಕಾಗಿ ರಾಜ ಮೌಳಿ ಸೂರ್ಯ (Suriya) ಅವರನ್ನ ಸಂಪರ್ಕಿಸಿದ್ದರು. ಆದರೆ ಸೂರ್ಯ ಆ ಆಫರ್ ತಿರಸ್ಕಾರ ಮಾಡಿದ್ದರು. ಸೂರ್ಯ ಇಂದಿಗೂ ತಾನು ಅಂತಹ ಅದ್ಭುತ ಅವಕಾಶವನ್ನು ತಿರಸ್ಕರಿಸಿದ್ದಕ್ಕೆ ವಿಷಾದವನ್ನು ವ್ಯಕ್ತಪಡಿಸುತ್ತಾರೆ.
ಭವಿಷ್ಯದಲ್ಲಿ ರಾಜ ಮೌಳಿ ಸಿನಿಮಾದಲ್ಲಿ ನಟಿಸೋ ಅವಕಾಶ ಸಿಕ್ರೆ ಖಂಡಿತ ಅದನ್ನು ಕಳೆದುಕೊಳ್ಳೋದಿಲ್ಲ ಅಂತಾರೆ ಸೂರ್ಯ.

Drone Prathap: ನುಡಿದಂತೆ ನಡೆದ ಡ್ರೋನ್ ಪ್ರತಾಪ್, ಅಜ್ಜಿಯ ಬಾಳಲ್ಲಿ ಬೆಳಕು ಮೂಡಿಸಿದ ಪ್ರತಾಪ್ ಗೆ ನೆಟ್ಟಿಗರ ಮೆಚ್ಚುಗೆ

Leave a Comment