Chanakya Niti: ನಿಮ್ಮ ಮನೇಲಿ ಈ 5 ಲಕ್ಷಣ ಕಂಡ್ರೆ ದುರಾದೃಷ್ಟ ಫಿಕ್ಸ್; ಚಾಣಾಕ್ಯ ತಿಳಿಸಿದ ಆ ಸೂಚನೆಗಳು ಯಾವುವು

Written by Soma Shekar

Published on:

---Join Our Channel---

Chanakya Niti: ಆಚಾರ್ಯ ಚಾಣಕ್ಯ ತಮ್ಮ ನೀತಿ ಶಾಸ್ತ್ರದಲ್ಲಿ (Chanakya Niti) ಬಹಳಷ್ಟು ಮಹತ್ವಪೂರ್ಣವಾದ ವಿಚಾರಗಳನ್ನು ತಿಳಿಸಿದ್ದು, ಕೆಟ್ಟ ಸಮಯ ಬರುವ ಮೊದಲು ನಮಗೆ ಕೆಲವೊಂದು ಸೂಚನೆಗಳು ಕಾಣಿಸಿಕೊಳ್ಳುತ್ತವೆ ಅವುಗಳನ್ನ ಗುರ್ತಿಸಿ ನಾವು ಜಾಗರೂಕರಾಗಬೇಕು ಎನ್ನುವುದನ್ನು ತಮ್ಮ ನೀತಿ ಶಾಸ್ತ್ರದಲ್ಲಿ ತಿಳಿಸಿದ್ದು ಅಂತಹ ಐದು ಚಿಹ್ನೆಗಳು ಯಾವುದು ಎನ್ನುವುದನ್ನು ತಿಳಿಯೋಣ.

ನಿಮ್ಮ ಮನೆಯಲ್ಲಿ ಇದಕ್ಕಿಂತ ಹಾಗೆ ಜಗಳಗಳು ಮತ್ತು ಮನಸ್ತಾಪಗಳು ಹೆಚ್ಚಾಗುವುದಕ್ಕೆ ಪ್ರಾರಂಭವಾದರೆ ಅದು ಅಶುಭ ಸಂಕೇತವೆಂದು ಪರಿಗಣಿಸಲಾಗುತ್ತದೆ. ಆಚಾರ್ಯ ಚಾಣಕ್ಯರ ಪ್ರಕಾರ ನಿಮ್ಮ ಕುಟುಂಬವು ಯಾವುದೋ ಒಂದು ಕೆಟ್ಟ ಕಣ್ಣಿಗೆ ಬಲಿಯಾಗಿದ್ದು ಇದರ ಪರಿಣಾಮವಾಗಿ ಆರ್ಥಿಕ ಬಿಕ್ಕಟ್ಟು ಎದುರಾಗಬಹುದು. ಈ ಸಮಸ್ಯೆಯ ಪರಿಹಾರಕ್ಕೆ ಕುಟುಂಬದ ಸದಸ್ಯರು ಸಹಕಾರ ಮತ್ತು ಪ್ರೀತಿಯಿಂದ ಇರಬೇಕೆಂದು ಹೇಳುತ್ತಾರೆ.

ಯಾವ ಮನೆಯಲ್ಲಿ ನಿಯಮಿತವಾಗಿ ಪೂಜೆಯನ್ನ ಮಾಡುವುದಿಲ್ಲವೋ ಅಲ್ಲಿ ಶಾಂತಿ ನೆಲೆಸುವುದಿಲ್ಲ. ಇದರಿಂದಾಗಿ ಕುಟುಂಬದ ಸದಸ್ಯರು ಯಾವಾಗಲೂ ಹಣದ ಬಗ್ಗೆ ಚಿಂತೆ ಮಾಡುತ್ತಾರೆ. ಈ ಸಮಸ್ಯೆಯಿಂದ ಪಾರಾಗುವುದಕ್ಕೆ ನಿತ್ಯ ಪೂಜೆ ಮಾಡಿ ದೇವರ ಧ್ಯಾನ ಮಾಡಬೇಕು.

ಯಾವ ಮನೆಯಲ್ಲಿ ಹಿರಿಯರನ್ನ ಗೌರವಿಸುವುದಿಲ್ಲವೋ ಅಂತಹ ಮನೆಯಲ್ಲಿ ಸಂಪತ್ತಿನ ಒಡತಿಯಾದ ಶ್ರೀ ಮಹಾಲಕ್ಷ್ಮಿಯು ನೆಲೆಸುವುದಿಲ್ಲ. ಈ ತಪ್ಪನ್ನ ಮಾಡುವುದರಿಂದ ಸಂಸಾರದಲ್ಲಿನ ಶಾಂತಿ ನೆಮ್ಮದಿ ನಾಶವಾಗಿ ಸದಾ ಅಸಮಾಧಾನದ ವಾತಾವರಣ ನಿರ್ಮಾಣವಾಗುತ್ತದೆ. ಆದ್ದರಿಂದ ಹಿರಿಯರನ್ನ ಗೌರವಿಸಿ ಅವರ ಸೇವೆಯನ್ನ ಮಾಡುವುದು ಬಹಳ ಮುಖ್ಯವೆಂದು ಆಚಾರ್ಯ ಚಾಣಕ್ಯ ಹೇಳಿದ್ದಾರೆ.

ಮನೆಯಲ್ಲಿ ಪದೇಪದೇ ಗಾಜು ಒಡೆಯುತ್ತಿದ್ದರೆ ಅದನ್ನ ನಿರ್ಲಕ್ಷ ಮಾಡಬೇಡಿ. ಇದು ಭವಿಷ್ಯದಲ್ಲಿ ಎದುರಾಗಲಿರುವ ಆರ್ಥಿಕ ನಷ್ಟದ ಸಂಕೇತವಾಗಿರುತ್ತದೆ ಪರಿಹಾರವಾಗಿ ಗಾಜು ಒಡೆದ ಕೂಡಲೇ ಅದನ್ನು ತೆಗೆದು ಮನೆಯಲ್ಲಿ ಸ್ವಚ್ಛತೆಯನ್ನ ಕಾಪಾಡಿ ಮತ್ತು ಮನೆಯಲ್ಲಿ ನಿಯಮಿತವಾಗಿ ಧಾರ್ಮಿಕ ಚಟುವಟಿಕೆಗಳನ್ನು ನಡೆಸಬೇಕೆಂದು ಚಾಣಕ್ಯ ಹೇಳಿದ್ದಾರೆ.

ನೆಟ್ಟಿರುವ ಗಿಡ ಅಥವಾ ತುಳಸಿ ಗಿಡ ಒಣಗಿ ಹೋಗುತ್ತಿದ್ದರೆ ಅದು ಅಶುಭದ ಸಂಕೇತ ಆಗಿರುತ್ತದೆ. ಇದು ಕೂಡಾ ಭವಿಷ್ಯದಲ್ಲಿ ಎದುರಾಗುವ ಸಮಸ್ಯೆಗಳನ್ನು ಸಂಕೇತಿಸುತ್ತದೆ. ಆದ್ದರಿಂದ ಗಿಡಗಳನ್ನು ಚೆನ್ನಾಗಿ ನೋಡಿಕೊಳ್ಳುವುದು ಮತ್ತು ತುಳಸಿ ಗಿಡಕ್ಕೆ ನೀರು ಹಾಕಿ ಆರಾಧಿಸುವುದು ಮುಂಬರುವ ಸಮಸ್ಯೆಗಳಿಗೆ ಪರಿಹಾರವಾಗಿರುತ್ತದೆ.‌

Olympics: ಬಾಯ್ ಫ್ರೆಂಡ್ ಜೊತೆ ನೈಟ್ ಔಟ್, ಈಜುಗಾರ್ತಿಯನ್ನು ಒಲಂಪಿಕ್ಸ್ ನಿಂದ ಹೊರ ಹಾಕಿದ ಅಧಿಕಾರಿಗಳು

Leave a Comment