Madhuri Dixit: ಲಿಪ್ ಲಾಕ್ ವೇಳೆ ತುಟಿ ಕಚ್ಚಿ, ರಕ್ತ ಬರ್ತಿದ್ರೂ ಬಿಡದೇ ಮಾಧುರಿ ದೀಕ್ಷಿತ್ ಗೆ ಕಿಸ್ ಮಾಡಿದ್ದ ಸ್ಟಾರ್ ನಟ

Written by Soma Shekar

Published on:

---Join Our Channel---

Madhuri Dixit : ಸಿನಿಮಾ ರಂಗದಲ್ಲಿ ನಟಿಯರು ತಮಗೆ ಎದುರಾದ ಕಹಿ ಅನುಭವ, ಮುಜುಗರ ಉಂಟು ಮಾಡಿದ ಘಟನೆಗಳ ಕುರಿತಾಗಿ ಇತ್ತೀಚಿನ ದಿನಗಳಲ್ಲಿ ಮಾತನಾಡುತ್ತಿದ್ದಾರೆ. ಇಂತಹ ಅನುಭವ ಸ್ಟಾರ್ ನಟಿಯರಿಗೂ ಸಹಾ ಆಗಿದೆ ಎಂದರೆ ಶಾಕ್ ಆದ್ರು ಸತ್ಯ. ಹೌದು ಬಾಲಿವುಡ್ ನ ಒಂದು ಕಾಲದ ನಂಬರ್ ಒನ್ ನಟಿ ಮಾಧುರಿ ದೀಕ್ಷಿತ್ (Madhuri Dixit) ಸಹಾ ಇಂತ ಅನುಭವದಿಂದ ಬೇಸತ್ತಿದ್ದರು ಎನ್ನುವುದು ಸತ್ಯ.

ಮಾಧುರಿ ದೀಕ್ಷಿತ್ ಅವರಿಗೆ ಆಗಿನ್ನೂ 20 ವರ್ಷ ವಯಸ್ಸು, ದಯಾವಾನ್ ಸಿನಿಮಾದಲ್ಲಿ ನಟಿಸುತ್ತಿದ್ದರು. ಸಿನಿಮಾದ ನಾಯಕ ಅಂದಿನ ಸ್ಟಾರ್ ನಟ ವಿನೋದ್ ಖನ್ನಾ (Vinod Khanna). ಅವರಿಗೆ ಆಗ 42 ವರ್ಷ ವಯಸ್ಸು. ಸಿನಿಮಾದಲ್ಲಿ ಆಜ್ ಫಿರ್ ತುಮ್ ಸೇ ಎನ್ನುವ ರೋಮ್ಯಾಂಟಿಕ್ ಹಾಡಿನ ಚಿತ್ರೀಕರಣ ನಡೆಯುತ್ತಿತ್ತು.

ಈ ಹಾಡಿನ ಲಿಪ್ ಲಾಕ್ ದೃಶ್ಯದಲ್ಲಿ ನಟ ಮಾಧುರಿ ದೀಕ್ಷಿತ್ ಅವರಿಗೆ ಕಿಸ್ ಮಾಡುತ್ತಾ ಅತಿರೇಕಕ್ಕೆ ಹೋಗಿದ್ದಾರೆ. ನಟಿಯ ತುಟಿಯನ್ನು ಕಚ್ಚಿ ರಕ್ತ ಬಂದರೂ, ಸೀನ್ ಮುಗಿದರೂ ಕಿಸ್ ಮಾಡುವುದನ್ನು ನಿಲ್ಲಿಸದೇ ಇದ್ದಾಗ ನಿರ್ದೇಶಕ ಫಿರೋಜ್ ಖಾನ್ ನಟನನ್ನು ಹಿಂದಕ್ಕೆ ಎಳೆದಿದ್ದರಂತೆ. ಈ ಘಟನೆಯಿಂದ ಮಾಧುರಿ ದೀಕ್ಷಿತ್ ಆಘಾತಕ್ಕೆ ಒಳಗಾಗಿದ್ದರಂತೆ.

ಅನಂತರ ನಟ ಮತ್ತು ನಿರ್ದೇಶಕ ಇಬ್ಬರೂ ನಟಿಯ ಬಳಿ ಕ್ಷಮಾಪಣೆ ಕೇಳಿದ್ದರಂತೆ. ಅನಂತರ ನಟಿ ವಿನೋದ್ ಖನ್ನಾ ಜೊತೆಗೆ ಯಾವುದೇ ಸಿನಿಮಾ ಮಾಡಲಿಲ್ಲ. ನಂತರದ ದಿನಗಳಲ್ಲಿ ನಟಿ ತಮ್ಮ ಅಂದ, ಅಭಿನಯ ಮತ್ತು ಡ್ಯಾನ್ಸ್ ನಿಂದಾಗಿ ಬಾಲಿವುಡ್ ನಲ್ಲಿ ನಂಬರ್ ಒನ್ ನಟಿಯಾಗಿ ಸ್ಥಾನ ಪಡೆದು ಬಾಲಿವುಡ್ ಅನ್ನು ಆಳಿದ್ದರು.

Urfi Javed: ಎಷ್ಟು ಜನರ ಜೊತೆ ಮಲಗಿದ್ದೆ; ಉರ್ಫಿಗೆ ಎದುರಾಯ್ತು ಮುಜುಗರದ ಪ್ರಶ್ನೆ, ನಟಿ ಕೊಟ್ಟ ಉತ್ತರ ಏನು?

Leave a Comment