Hema Rave Party: ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿನ (Bengaluru Electronic City) ಜಿ ಆರ್ ಫಾರ್ಮ್ ಹೌಸ್ ನಲ್ಲಿ ನಡೆಯುತ್ತಿದ್ದ ರೇವ್ ಪಾರ್ಟಿ (Hema Rave Party) ಮೇಲೆ ಸಿಸಿಬಿ ಪೊಲೀಸರು ಧಾಳಿಯನ್ನು ನಡೆಸಿ ಮಾ ದ ಕ ವಸ್ತು ಗಳನ್ನು ವಶಪಡಿಸಿಕೊಂಡಿದ್ದಾರೆ ಮತ್ತು ಈ ವೇಳೆ ತೆಲುಗಿನ ನಟಿಯರು, ಮಾಡೆಲ್ ಗಳು ಸಿಕ್ಕಿ ಬಿದ್ದಿದ್ದಾರೆನ್ನುವ ವಿಷಯ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದೆ. ಪಾರ್ಟಿಗೆ ಬರುವ ಸೆಲೆಬ್ರಿಟಿಗಳನ್ನು ಹೈದರಾಬಾದ್ ನಿಂದ (Hyderabad) ಕರೆ ತರಲು ವಿಮಾನಗಳಲ್ಲಿ ಸೀಟ್ ಬುಕ್ ಮಾಡಲಾಗಿತ್ತು ಎನ್ನಲಾಗಿದೆ.
ಬೆಂಗಳೂರು ವಿಮಾನ ನಿಲ್ದಾಣದಿಂದ ಲಗ್ಷುರಿ ಕಾರುಗಳಲ್ಲಿ ಮೂಲಕ ಪಾರ್ಟಿ ನಡೆಯುವ ಸ್ಥಳಕ್ಕೆ ನಟಿಯರನ್ನು ಕರೆತರಲಾಗಿತ್ತು ಎನ್ನಲಾಗಿದೆ. ಆದರೆ ಇವೆಲ್ಲವುಗಳ ನಡುವೆಯೇ ತೆಲುಗಿನ ಜನಪ್ರಿಯ ಪೋಷಕ ನಟಿ, ಹಾಸ್ಯ ನಟಿ ಹೇಮ (Actress Hema) ಅವರ ಹೆಸರು ಇದರಲ್ಲಿ ಕೇಳಿ ಬಂದಿದ್ದು, ಹೇಮ ಅವರು ಸಹಾ ಪಾರ್ಟಿಯಲ್ಲಿ ಹಾಜರಾಗಿದ್ದರೆನ್ನುವ ಸುದ್ದಿಗಳು ತೆಲುಗು ಮಾದ್ಯಮಗಳಲ್ಲಿ ಮತ್ತು ಕನ್ನಡ ಮಾದ್ಯಮಗಳಲ್ಲೂ ಸಹಾ ಹರಿದಾಡಿದೆ.
ನಟಿ ಹೇಮ ತಮ್ಮ ಹೆಸರು ಎಲ್ಲೆಡೆ ಸುದ್ದಿಯಾದ ಬೆನ್ನಲ್ಲೇ ವೀಡಿಯೋ ಒಂದನ್ನು ಮಾಡಿ ಸೋಶಿಯಲ್ ಮೀಡಿಯಾಗಳಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಅದರಲ್ಲಿ ನಾನು ಹೈದ್ರಾಬಾದ್ ನಲ್ಲೇ ಒಂದು ಫಾರ್ಮ್ ಹೌಸ್ ನಲ್ಲಿ (Farm House) ಇದ್ದೇನೆ. ಇಲ್ಲಿ ಚಿಲ್ ಮಾಡ್ತಾ ಇದ್ದೀನಿ. ನನಗೂ ಬೆಂಗಳೂರಿನಲ್ಲಿ ನಡೆದ ರೇವ್ ಪಾರ್ಟಿಗೂ ಸಂಬಂಧ ಇಲ್ಲ, ಹರಡಿರುವುದು ಫೇಕ್ ನ್ಯೂಸ್ ಅಂತ ನಟಿ ಕ್ಲಾರಿಟಿ ಕೊಟ್ಟಿದ್ದಾರೆ.
ನಟಿ ಸ್ಪಷ್ಟನೆ ಕೊಟ್ಟ ವೀಡಿಯೋ ವೈರಲ್ ಆದ ಬೆನ್ನಲ್ಲೇ ಮತ್ತೆ ಹೊಸ ಪ್ರಶ್ನೆಗಳು ಹುಟ್ಟುಕೊಂಡಿವೆ. ನಟಿ ಬೆಂಗಳೂರಿನ ಫಾರ್ಮ್ ಹೌಸ್ ನಲ್ಲೇ ಪಕ್ಕಕ್ಕೆ ಹೋಗಿ ವೀಡಿಯೋ ಮಾಡಿದ್ದಾರೆ, ವೀಡಿಯೋದಲ್ಲಿ ಇರೋದು ಹೈದ್ರಾಬಾದ್ ನ ಫಾರ್ಮ್ ಹೌಸ್ ಅಲ್ಲ. ನಟಿ ಫಾರ್ಮ್ ಹೌಸ್ ನ ಮರವೊಂದರ ಮುಂದೆ ನಿಂತಿದ್ದು, ಬೇರೆ ಏನನ್ನೂ ತೋರಿಸಿಲ್ಲ.
ಅಲ್ಲದೇ ನಟಿಯ ಗೆಳೆಯ ಚಿರಂಜೀವಿ ಎನ್ನುವವರನ್ನು ಈಗಾಗಲೇ ಪೋಲಿಸರು ಬಂಧಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಈಗ ನಟಿ ತನ್ನನ್ನ ತಾನು ಸೇವ್ ಮಾಡಿಕೊಳ್ಳೋದಕ್ಕೆ ಸುಳ್ಳು ಹೇಳ್ತಿದ್ದಾರೆ ಅಂತ ಸೋಶಿಯಲ್ ಮೀಡಿಯಾಗಳಲ್ಲಿ, ತೆಲುಗು ಮಾದ್ಯಮಗಳಲ್ಲಿ ಸುದ್ದಿ ಹರಿದಾಡಿದೆ. ಪಾರ್ಟಿಯಲ್ಲಿ ಒಟ್ಟು 70 ಜನ ಪುರುಷರು ಮತ್ತು 30 ಜನ ಮಹಿಳೆಯರು ಇದ್ದರು ಎನ್ನಲಾಗಿದೆ.