Shubman Gill: ಟೀಂ ಇಂಡಿಯಾದ (Team India) ಪ್ರಿನ್ಸ್ ಎಂದು ಹೆಸರನ್ನು ಪಡೆದಿರುವ, ತನ್ನ ಸ್ಟೈಲಿಶ್ ಬ್ಯಾಟಿಂಗ್ ನಿಂದ ಕಡಿಮೆ ಅವಧಿಯಲ್ಲೇ ಹೆಚ್ಚು ಜನಪ್ರಿಯತೆ ಪಡೆದಿರುವ ಶುಭ್ ಮನ್ ಗಿಲ್ (Shubman Gill) ಕ್ರಿಕೆಟ್ ಮಾತ್ರವೇ ಅಲ್ಲದೇ ವೈಯಕ್ತಿಕ ಜೀವನದಲ್ಲಿ ತಮ್ಮ ಡೇಟಿಂಗ್ ವಿಚಾರಗಳಿಂದಲೂ ಸುದ್ದಿಯಾಗುತ್ತಾರೆ. ಹಲವು ಯುವತಿಯರ ಹೆಸರು ಈ ಯುವ ಆಟಗಾರನ ಜೊತೆ ತಳಕು ಹಾಕಿಕೊಂಡಿದೆ. ಅದರಲ್ಲಿ ನಾಲ್ಕು ಜನರ ಹೆಸರು ಸಾಕಷ್ಟು ಸಲ ಮುನ್ನೆಲೆಗೆ ಬಂದಿದೆ.
ಸಾರಾ ಅಲಿ ಖಾನ್ (Sara Ali Khan), ಬಾಲಿವುಡ್ ಬೆಡಗಿ ಸಾರಾ ಜೊತೆಗೆ ಶುಭ್ಮನ್ ಹೆಸರು ಸಾಕಷ್ಟು ಸಲ ಕೇಳಿ ಬಂದಿದೆ. ಇಬ್ಬರೂ ರೆಸ್ಟೋರೆಂಟ್ ನಲ್ಲಿ, ಹೊರಗೆ ಹಲವು ಬಾರಿ ಜೊತೆಯಾಗಿ ಕಾಣಿಸಿಕೊಂಡಿದ್ದರು. ಇಬ್ಬರು ಸ್ವಲ್ಪ ಸಮಯ ಡೇಟಿಂಗ್ ಮಾಡುತ್ತಿದ್ದರು ಎನ್ನುವ ಮಾತು ಕೇಳಿ ಬಂದಿತ್ತಾದರೂ ಅದು ಅಧಿಕೃತವಾಗಿರಲಿಲ್ಲ.
ಸಾರಾ ತೆಂಡೂಲ್ಕರ್ (Sara Tendulkar), ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಮಗಳು ಸಾರಾ ಮತ್ತು ಶುಭ್ಮನ್ ನಡುವಿನ ಪ್ರೇಮ ಪುರಾಣ ಸಾಕಷ್ಟು ಚರ್ಚೆಗಳನ್ನು ಹುಟ್ಟು ಹಾಕಿತ್ತು. 2020 ರ ಐಪಿಎಲ್ ವೇಳೆ ಸಾರಾ ಶುಭ್ಮನ್ ಬಗ್ಗೆ ಹೊಗಳಿ ಮಾತನಾಡಿದ ನಂತರ ಇವರ ಡೇಟಿಂಗ್ ವದಂತಿ ಹರಿದಾಡಿತ್ತು.
ಮಾರಿಯಾ ಅರೋಯೋ (Maria Arroyo), ಸಾರಾ ತೆಂಡೂಲ್ಕರ್ ಜೊತೆ ಬ್ರೇಕಪ್ ನಂತರ ಶುಭ್ಮನ್ ಸ್ಪೈನ್ ನ ಮಾರಿಯಾ ಜೊತೆಗೆ ಒಂದಷ್ಟು ದಿನಗಳ ಕಾಲ ಒಟ್ಟಿಗೆ ತಿರುಗಾಡಿದ್ದರು ಎನ್ನುವುದು ಸುದ್ದಿಯಾಗಿತ್ತು. ಅನಂತರ ಇವರ ನಡುವೆ ಏನಾಯಿತು ಎನ್ನುವುದು ಗೊತ್ತಿಲ್ಲ.
ರಿಧಿಮಾ ಪಂಡಿತ್ (Ridhima Pandit), ಇತ್ತೀಚಿನ ದಿನಗಳಲ್ಲಿ ಶುಭ್ಮನ್ ಹೆಸರು ಕಿರುತೆರೆಯ ನಟಿ ರಿಧಿಮಾ ಜೊತೆ ಕೇಳಿ ಬಂದಿದ್ದು ಮಾತ್ರವೇ ಅಲ್ಲದೇ ಶೀಘ್ರದಲ್ಲೇ ಇವರು ಮದುವೆಯಾಗುತ್ತಾರೆಂದು ಸಹಾ ಸುದ್ದಿಗಳು ಹರಿದಾಡಿದ್ದವು. ನಂತರ ರಿಧಿಮಾ ಇದೆಲ್ಲಾ ಸುಳ್ಳೆಂದು ಸ್ಪಷ್ಟನೆ ನೀಡಿದ್ದರು.
Ranjini Haridas: ತನ್ನ ಬೆತ್ತಲೆ ಫೋಟೋ ಕಳ್ಸಿ ನಂದು ಕಳ್ಸು ಅಂದ; ಸ್ಟಾರ್ ನಟನ ಮೇಲೆ ನಿರೂಪಕಿಯ ಆರೋಪ