Tapsi Pannu: ಅನಂತ್ ಅಂಬಾನಿ (Anant Ambani) ಮತ್ತು ರಾಧಿಕಾ ಮರ್ಚೆಂಟ್ (Radhika Merchant) ಮದುವೆಯ ಸುದ್ದಿಗಳು, ಈ ಮದುವೆಯ ವಿಶೇಷಗಳು ಹಾಗೂ ಮದುವೆಗೆ ಹಾಜರಾದ ಸೆಲೆಬ್ರಿಟಿಗಳ ಫೋಟೋಗಳು ಮತ್ತು ವೀಡಿಯೋಗಳು ಸೋಶಿಯಲ್ ಮೀಡಿಯಾಗಳಲ್ಲಿ ಮತ್ತು ಮಾದ್ಯಮ ಸುದ್ದಿಗಳಲ್ಲಿ ಭರ್ಜರಿಯಾಗಿ ವೈರಲ್ ಆಗುತ್ತಿದೆ. ಕೆಲವರು ಇದಕ್ಕೆ ಮೆಚ್ಚುಗೆ ನೀಡಿದರೆ ಇನ್ನೂ ಕೆಲವರು ಟೀಕೆಗಳನ್ನು ಸಹಾ ಮಾಡುತ್ತಿದ್ದಾರೆ.
ಅನಂತ್ ಅಂಬಾನಿ ಮದುವೆಗೆ ಇಡೀ ಬಾಲಿವುಡ್ ಹಾಜರಾಗಿತ್ತು. ಕೆಲವೊಬ್ಬ ನಟ ನಟಿಯರು ವೈಯಕ್ತಿಕ ಕಾರಣಗಳಿಂದ ಮದುವೆಗೆ ಹಾಜರಾಗಿರಲಿಲ್ಲ. ಹೀಗೆ ಮದುವೆಗೆ ಹಾಜರಾಗದೇ ಉಳಿದವರಲ್ಲಿ ದಕ್ಷಿಣ ಸಿನಿಮಾಗಳ ನಟಿ, ಸದ್ಯಕ್ಕೆ ಬಾಲಿವುಡ್ ನಲ್ಲೇ ನೆಲೆ ಊರಿರುವ ಜನಪ್ರಿಯ ನಟಿ ತಾಪ್ಸಿ ಪನ್ನು (Tapsi Pannu) ಸಹಾ ಒಬ್ಬರು.
ಈಗ ನಟಿ ತಾಪ್ಸಿ ತಾನೇಕೆ ಅನಂತ್ ಅಂಬಾನಿ ಮದುವೆಯಲ್ಲಿ ಹಾಜರಾಗಲಿಲ್ಲ ಎನ್ನುವುದಕ್ಕೆ ಯಾವುದೇ ಹಿಂಜರಿಕೆ ಇಲ್ಲದೇ ಉತ್ತರವನ್ನು ನೀಡುವ ಮೂಲಕ ಎಲ್ಲರ ಗಮನವನ್ನು ಸೆಳೆಯುವುದು ಮಾತ್ರವೇ ಅಲ್ಲದೇ ನೆಟ್ಟಿಗರಿಂದ ಮೆಚ್ಚುಗೆಗಳನ್ನು ಸಹಾ ಪಡೆದುಕೊಂಡಿದ್ದಾರೆ. ತಾಪ್ಸಿ ಕೊಟ್ಟ ಕಾರಣವೇನು ಎನ್ನುವುದನ್ನ ತಿಳಿಯೋಣ ಬನ್ನಿ.
ತಾಪ್ಸಿ ಪನ್ನು ಅವರು, ನನಗೆ ಅನಂತ್ ಅಂಬಾನಿ ಅವರ ಕುಟುಂಬದ ಜೊತೆಗೆ ಯಾವುದೇ ರೀತಿಯ ಪರಿಚಯ ಇಲ್ಲ. ಮದುವೆಯಾಗುವ ಜೋಡಿ ಹಾಗೂ ಅವರ ಕುಟುಂಬದವರೊಡನೆ ನಂಟು ಇದೆ ಎಂದಾಗ ಅಂತಹ ಮದುವೆಗಳಲ್ಲಿ ಭಾಗಿಯಾಗಲು ನಾನು ಇಷ್ಟ ಪಡುತ್ತೇನೆ ಎನ್ನುವ ಮಾತುಗಳನ್ನು ಹೇಳಿದ್ದಾರೆ.