Nayanthara: ತಮಿಳಿನಲ್ಲಿ ಲೇಡಿ ಸೂಪರ್ ಸ್ಟಾರ್ ಖ್ಯಾತಿಯನ್ನು ಪಡೆದುಕೊಂಡಿರುವ, ಬಹು ಬೇಡಿಕೆಯ ನಟಿ ಸಹಾ ಆಗಿರುವ ನಯನತಾರಾ (Nayanthara) ಆಗಾಗ ಕೆಲವೊಂದು ವಿವಾದಗಳಲ್ಲಿ ಸಿಲುಕಿಕೊಳ್ಳುತ್ತಾರೆ. ಈ ಹಿಂದೆ ಅವರು ತಮ್ಮ ಅನ್ನಪೂರ್ಣಿ ಸಿನಿಮಾ ವಿಚಾರವಾಗಿ ಸಾಕಷ್ಟು ಸುದ್ದಿಯಾಗಿದ್ದರು. ಈಗ ನಟಿ ಅವರ ಅವಳಿ ಮಕ್ಕಳ ವಿಷಯವಾಗಿ ಮತ್ತೊಂದು ಬಾರಿ ಚರ್ಚೆಗೆ ಕಾರಣವಾಗಿದ್ದಾರೆ.
ತಮಿಳು ಸಿನಿಮಾ ನಿರ್ಮಾಪಕ ಹಾಗೂ ಯೂಟ್ಯೂಬರ್ ಸಹಾ ಆಗಿರುವ ಅನಂತನ್ (Producer and Youtuber Ananthan) ಅವರು ಈ ಹಿಂದೆ ನಟಿ ನಯನತಾರ ಶೂಟಿಂಗ್ ಸೆಟ್ ಗೆ ಬಂದಾಗ ಅವರ ಜೊತೆಗೆ ಏಳೆಂಟು ಜನ ಸಹಾಯಕರೊಂದಿಗೆ ಬರುತ್ತಾರೆ. ಅವರ ಸಹಾಯಕರಿಗೂ ಸಹಾ ನಿರ್ಮಾಪಕರೇ ಸಂಭಾವನೆ ನೀಡಬೇಕೆಂದು ಹೇಳಿದ್ದರು.
ಈಗ ಮತ್ತೊಮ್ಮೆ ಅನಂತನ್ ಅವರ ಅಂತಹುದೇ ವಿಚಾರವನ್ನು ಮಾತನಾಡಿದ್ದಾರೆ. ನಯನತಾರಾ ಶೂಟಿಂಗ್ ಗೆ ಬರುವಾಗ ತಮ್ಮ ಇಬ್ಬರು ಮಕ್ಕಳು ಮತ್ತು ಆ ಮಕ್ಕಳ ಇಬ್ಬರು ದಾದಿಯರನ್ನು ಸಹಾ ಜೊತೆಗೆ ಕರೆದುಕೊಂಡು ಬರುತ್ತಾರೆ. ದಾದಿಯರಿಗೆ ನಿರ್ಮಾಪಕರೇ ಸಂಬಳ ನೀಡಬೇಕೆಂದು ಅವರು ಹೇಳುತ್ತಾರೆ.
ಅವರ ಮಕ್ಕಳನ್ನು ನೋಡಿಕೊಳ್ಳುವುದಕ್ಕೂ ಸಹಾ ನಿರ್ಮಾಪಕರೇ ತಮ್ಮ ಜೇಬಿನಿಂದ ಹಣವನ್ನು ನೀಡಬೇಕೆಂದು ನಟಿ ಹೇಳುವುದು ಎಷ್ಟು ಸರಿ ಎಂದು ಅನಂತನ್ ಅವರು ಪ್ರಶ್ನೆ ಮಾಡಿದ್ದಾರೆ. ಈ ಹಿಂದೆ ನಟಿಯರು ತಮ್ಮ ಸಹಾಯಕರನ್ನು ಕರೆ ತಂದು ನಿರ್ಮಾಪಕರ ಜೇಬಿಗೆ ಕತ್ತರಿ ಹಾಕುವ ವಿಚಾರವಾಗಿ ನಿರ್ದೇಶಕ ಸೆಲ್ವಮಣಿ ಸಹಾ ಮಾತನಾಡಿದ್ದರು.
Samantha ಮನಸ್ಸು ಇಷ್ಟು ಒಳ್ಳೇದಾ? ಮಾಜಿ ಗಂಡನ ಭಾವಿ ಪತ್ನಿಯ ಸಿನಿಮಾ ಪ್ರಮೋಷನ್ ಗೆ ಬಂದ ಸಮಂತಾ