Thalapathy Vijay : ತಮಿಳು ಸ್ಟಾರ್ ನಟ ದಳಪತಿ ವಿಜಯ್ (Thalapathy Vijay) ಅವರು ಸಿನಿಮಾ ರಂಗಕ್ಕೆ ಗುಡ್ ಬೈ ಹೇಳಿ ರಾಜಕೀಯಕ್ಕೆ ಪ್ರವೇಶ ನೀಡಿದ್ದಾರೆ. ತಮ್ಮದೇ ಆದ ಪಕ್ಷವನ್ನು ಕಟ್ಟಿ ತಮಿಳಗ ವೆಟ್ರಿ ಕಳಗಂ (Tamilaga Vetri Kalagam) ಎನ್ನುವ ಹೆಸರನ್ನು ನೀಡಿದ್ದಾರೆ. ಈಗ ನಟ ರಾಜಕೀಯಕ್ಕೆ ಅಡಿಯಿಟ್ಟ ಮೇಲೆ ತಮ್ಮ ಮೊಟ್ಟ ಮೊದಲ ಬಹಿರಂಗ ಸಭೆ ನಡೆಸಿದ್ದು, ತಮಿಳುನಾಡು ರಾಜಕೀಯದಲ್ಲೊಂದು ಬಿರುಗಾಳಿ ಎಬ್ಬಿಸಿದ್ದಾರೆ. ನಟ ಮೊದಲ ಸಮಾವೇಶದಲ್ಲೇ ಅಬ್ಬರದ ಭಾಷಣ ಮಾಡಿ ಜನರ ಮನಸ್ಸನ್ನು ಗೆದ್ಧಿದ್ದಾರೆ.
ವಿಕ್ರವಾಂಡಿಯಲ್ಲಿ ನಡೆದ ಸಮಾವೇಶಕ್ಕೆ ಜನಸಾಗರವೇ ಹರಿದು ಬಂದಿದೆ. ವಿಜಯ್ ಅವರ ಮೊದಲ ಬಹಿರಂಗ ಸಮಾವೇಶಕ್ಕೆ ಐದು ಲಕ್ಷಕ್ಕೂ ಅಧಿಕ ಬೆಂಬಲಿಗರು ಆಗಮಿಸಿ ಸಮಾವೇಶವನ್ನು ಯಶಸ್ವಿಗೊಳಿಸಿದ್ದಾರೆ. ನಟನ ಮೊದಲ ರಾಜಕೀಯ ಸಮಾವೇಶಕ್ಕೆ ಹರಿದು ಬಂದ ಜನ ಸಾಗರ ನೋಡಿ ತಮಿಳುನಾಡಿನ ಇತರೆ ರಾಜಕೀಯ ಪಕ್ಷಗಳು ದಂಗಾಗಿ ಹೋಗಿವೆ.
ಮೊದಲ ಸಭೆಯಲ್ಲಿ ದಳಪತಿ ವಿಜಯ್ ಅವರು ಡಿಎಂಕೆ ಪಕ್ಷದ ವಿರುದ್ಧ ವಾಗ್ಧಾಳಿಯನ್ನು ನಡೆಸಿದ್ದು, ಒಂದು ಕುಟುಂಬ ತಮಿಳು ನಾಡನ್ನ ಲೂಟಿ ಮಾಡುತ್ತಿದರೆ ಎನ್ನುವ ಮಾತನ್ನ ಆಡಿದ್ದಾರೆ. ಡಿಎಂಕೆ ಮಾತ್ರವೇ ಅಲ್ಲದೇ ಬಿಜೆಪಿ ವಿರುದ್ಧ ಸಹಾ ನಟ ವಾಗ್ಧಾಳಿಯನ್ನು ನಡೆಸಿದ್ದಾರೆ. 2026 ರಲ್ಲಿ ತಮ್ಮ ಪಕ್ಷ ಏಕಾಂಗಿಯಾಗಿ ಚುನಾವಣಾ ಕಣಕ್ಕೆ ಇಳಿಯಲಿದೆ ಎಂದಿದ್ದಾರೆ.
ತಮಗೆ ಬಿಜೆಪಿ ಮತ್ತು ಡಿಎಂಕೆ ಪಕ್ಷಗಳು ಪ್ರಬಲ ಪ್ರತಿಸ್ಪರ್ಧಿಗಳು ಎಂದು ಹೇಳಿರುವ ನಟ ವಿಜಯ್ ಡಿಎಂಕೆ ಜನವಿರೋಧಿ ಸರ್ಕಾರ ಎಂದಿದ್ದಾರೆ. ಡಿಎಂಕೆ ಕುಟುಂಬ ತಮಿಳುನಾಡನ್ನು ಲೂಟಿ ಮಾಡುತ್ತಿದೆ ಎಂದು ಟೀಕೆ ಮಾಡಿದ್ದಾರೆ. ಇದೇ ವೇಳೆ ಅವರು ಭ್ರಷ್ಟಾಚಾರ ಮತ್ತು ಕೋಮುವಾದವು ರಾಜಕೀಯದ ಶತ್ರುಗಳು ಮತ್ತು ಪ್ರಾಯೋಗಿಕ ಘೋಷಣೆಗಳನ್ನು ಮಾತ್ರ ಮಾಡಿ ಎಂದಿದ್ದಾರೆ.
Jr. NTR : ತೆಲುಗು ಬಿಗ್ ಬಾಸ್ ವೇದಿಕೆ ಮೇಲೆ ನಟ ಜೂ.ಎನ್ ಟಿ ಆರ್ ಕನ್ನಡದ ಮಾತು; ನಟನ ಕನ್ನಡ ಆಗಲೇ ಸ್ಪಷ್ಟವಾಗಿತ್ತು