Tamannaah Bhatia: ಸೌತ್ ಸಿನಿಮಾ ಬ್ಯೂಟಿ, ಸ್ಟಾರ್ ನಟಿ ತಮನ್ನಾ ಭಾಟಿಯಾ (Tamannaah Bhatia) ಸದ್ಯಕ್ಕೆ ಬಾಲಿವುಡ್ ನಟ ವಿಜಯ್ ವರ್ಮಾ (Vijay Varma) ಜೊತೆಗಿನ ತಮ್ಮ ರಿಲೇಶನ್ ಶಿಪ್ ನಲ್ಲಿ ಖುಷಿಯಾಗಿದ್ದಾರೆ. ಮದುವೆಯ ಸುದ್ದಿ ಯಾವಾಗ ಕೊಡ್ತಾರೆ ಅನ್ನೋದು ಈಗ ಅಭಿಮಾನಿಗಳ ನಿರೀಕ್ಷೆಯಾಗಿದೆ. ಆದರೆ ಇದರ ನಡುವೆಯೇ ನಟಿ ತಮ್ಮ ಒಂದಲ್ಲ ಎರಡು ಬ್ರೇಕಪ್ ಗಳ ಕುರಿತು ಶಾಕಿಂಗ್ ವಿಚಾರ ಬಹಿರಂಗಪಡಿಸಿದ್ದಾರೆ.
ಮೊದಲ ಬ್ರೇಕಪ್ ಆದಾಗ ಚಿಕ್ಕವಳಾಗಿದ್ದೆ. ಆ ವ್ಯಕ್ತಿಗಾಗಿ ನಾನು ನನ್ನ ಜೀವನದಲ್ಲಿನ ಎಲ್ಲಾ ಅಗತ್ಯತೆ ಮತ್ತು ಆಸೆಗಳನ್ನು ತ್ಯಜಿಸುತ್ತೇನೆ ಅಂತ ಅಂದುಕೊಂಡೇ ಇರ್ಲಿಲ್ಲ. ಆದರೆ ಕೆಲವು ಕಾರಣಗಳಿಂದಾಗಿ ಆ ಸಂಬಂಧ ಮುರಿದು ಬಿತ್ತು ಎಂದು ತಮ್ಮ ಮೊದಲ ಬ್ರೇಕಪ್ ಕುರಿತಾಗಿ ಹೇಳಿದ್ದಾರೆ.
ಎರಡನೆ ಬ್ರೇಕಪ್ ನಲ್ಲಿ, ಆ ವ್ಯಕ್ತಿ ನನ್ನ ಜೊತೆ ಜೀವನ ಪೂರ್ತಿ ಇರಲು ಸೂಕ್ತ ವ್ಯಕ್ತಿ ಅಲ್ಲ ಅನಿಸಿತು,ಸಣ್ಣ ಸಣ್ಣ ವಿಚಾರಕ್ಕೂ ಸುಳ್ಳು ಹೇಳುವ ವ್ಯಕ್ತಿ ಜೊತೆಗೆ ಜೀವನ ಸಾಗಿಸೋದು ಕಷ್ಟವೆಂದು ಬ್ರೇಕಪ್ ಆಯಿತು ಎಂದಿದ್ದಾರೆ ತಮನ್ನಾ.
ಇದೇ ಮೊದಲ ಬಾರಿಗೆ ನಟಿ ತಮನ್ನಾ ತಮ್ಮ ಬ್ರೇಕಪ್ ಗಳ ಕುರಿತಾಗಿ ಮಾತನಾಡಿದ್ದಾರೆ. ಅಲ್ಲದೇ ಅವುಗಳಿಂದ ನಾನು ದೊಡ್ಡ ಪಾಠವನ್ನು ಸಹಾ ಕಲಿತಿದ್ದೇನೆ ಎನ್ನುವ ಮಾತನ್ನ ತಮನ್ನಾ ಹೇಳಿದ್ದಾರೆ. ನಟಿ ಬಾಲಿವುಡ್ ನಲ್ಲಿ ಇತ್ತೀಚಿಗೆ ಸಖತ್ ಸುದ್ದಿ ಮಾಡಿರುವ ಸ್ತ್ರೀ 2 ಸಿನಿಮಾದಲ್ಲಿ ಐಟಂ ಹಾಡಿಗೆ ಹೆಜ್ಜೆ ಹಾಕಿದ್ದರು.
Jayam Ravi: 15 ವರ್ಷಗಳ ದಾಂಪತ್ಯ ಜೀವನಕ್ಕೆ ಕೊನೆ ಹಾಡಿದ ನಟ ಜಯಂ ರವಿ; ಶಾಕ್ ನಲ್ಲಿ ಅಭಿಮಾನಿಗಳು