Dhanush: ಗಾಯಕಿ ಸುಚಿತ್ರಾ (Suchithra) ಕುರಿತಾಗಿ ಮತ್ತೊಮ್ಮೆ ಸಿಕ್ಕಾಪಟ್ಟೆ ಸುದ್ದಿಗಳಾಗುತ್ತಿವೆ. ತಮಿಳು ಒನ್ ಇಂಡಿಯಾ ಪ್ರಕಟಿಸಿದ ವರದಿಗಳು ಈಗ ಬಹಳ ದೊಡ್ಡ ಮಟ್ಟದಲ್ಲೇ ಚರ್ಚೆಗಳನ್ನು ಹುಟ್ಟು ಹಾಕಿದ್ದು, ಸಂಚಲನವನ್ನೇ ಸೃಷ್ಟಿಸಿದೆ. ಸುಚಿತ್ರಾ ಸಂದರ್ಶನವೊಂದರಲ್ಲಿ ತನ್ನ ಪತಿ ಕಾರ್ತಿಕ್ (Karthik Kumar) ಸಲಿಂಗ ಕಾಮಿಯೆಂದೂ ಅವರಿಗೂ ನಟ ಧನುಷ್ ಗೂ (Dhanush) ನಿಕಟ ಸಂಬಂಧವಿದೆಯೆಂದೂ ಹೇಳಿದ್ದಾರೆನ್ನುವ ವಿಚಾರಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಸುಚಿತ್ರಾ ಹೇಳಿಕೆಯ ಬೆನ್ನಲ್ಲೇ ಅವರ ಪತಿ ಕಾರ್ತಿಕ್ ತಮ್ಮ ಮಾಜಿ ಪತ್ನಿ ಮಾಡಿರುವ ಆರೋಪಗಳನ್ನು ನೇರವಾಗಿ ಪ್ರಸ್ತಾಪಿಸದೆಯೇ ಅದಕ್ಕೆ ತಮ್ಮದೇ ಆದ ಪ್ರತಿಕ್ರಿಯೆಯನ್ನು ನೀಡಿದ್ದು, ಕಾರ್ತಿಕ್ ಹಂಚಿಕೊಂಡ ವಿಚಾರಗಳು ಈಗ ಜನರ ಗಮನ ಸೆಳೆದಿದೆ ಮತ್ತು ಮೆಚ್ಚುಗೆ ಗಳು ಸಹಾ ಹರಿದು ಬರುತ್ತಿದೆ. ಆದರೆ ಕಾರ್ತಿಕ್ ಎಲ್ಲೂ ಸಹಾ ಸುಚಿತ್ರಾ ಮಾಡಿರುವ ಲೈಂಗಿಕ ಆರೋಪಗಳ ಕುರಿತಾಗಿ ಮಾತನಾಡಿಲ್ಲ.
ಕಾರ್ತಿಕ್ ತಮ್ಮ ಇನ್ಸ್ಟಾಗ್ರಾಂ ಮೂಲಕ ಮಾಜಿ ಪತ್ನಿಯ ಆರೋಪಗಳಿಗೆ ಪರೋಕ್ಷವಾಗಿ ಉತ್ತರವನ್ನು ನೀಡಿದ್ದಾರೆ. ನಾನು ಸಲಿಂಗ ಕಾಮಿ ಆಗಿದ್ದರೆ ಅಥವಾ ಆಗದೇ ಇದ್ದರೂ ನಾನು ಸಲಿಂಗ ಕಾಮಿ ಎನ್ನುವುದಕ್ಕೆ ನಾಚಿಕೆ ಪಡುವುದಿಲ್ಲ. ಯಾವುದೇ ರೀತಿಯ ಲೈಂಗಿಕತೆಯ ವ್ಯಕ್ತಿಯಾದರೂ ನಾನು ಹೆಮ್ಮೆ ಪಡುತ್ತೇನೆ. ನಗರದಲ್ಲಿ ನಡೆಯುವ LGBTQ ರ್ಯಾಲಿಯಲ್ಲಿ ನಾನು ಭಾಗವಹಿಸುತ್ತೇನೆ. ಇದರ ಬಗ್ಗೆ ಅವಮಾನವಿಲ್ಲ, ಹೆಮ್ಮೆಯಿದೆ ಎಂದಿದ್ದಾರೆ.
ಕಾರ್ತಿಕ್ ತಮ್ಮ ಪತ್ನಿಯ ಹೆಸರನ್ನಾಗಲೀ, ಆಕೆಯ ಆರೋಪಗಳನ್ನಾಗಲೀ ಪ್ರಸ್ತಾಪಿಸದೇ ಇದ್ದರೂ ಅನೇಕರು ನಟ ತಮ್ಮನ್ನು ತಾವು LGBTQ+ ಸಮುದಾಯಕ್ಕೆ ಸೇರ್ಪಡೆ ಮಾಡಿಕೊಳ್ಳುವ ಸಂದೇಶ ಕೊಟ್ಟಿದ್ದಾರೆ ಎನ್ನುತ್ತಿದ್ದಾರೆ. ಇದೇ ವೇಳೆ ನೆಟ್ಟಿಗರು ಕಾರ್ತಿಕ್ ಕುರಿತಾಗಿ ವೈಯಕ್ತಿಕ ಧಾಳಿ ಅಥವಾ ಕೆಟ್ಟ ಕಾಮೆಂಟ್ ಗಳನ್ನು ಮಾಡದೇ ಅವರು ಹೇಳಿದಂತಹ ವಿಚಾರಕ್ಕೆ ತಮ್ಮ ಮೆಚ್ಚುಗೆಯನ್ನು ನೀಡಿದ್ದಾರೆ.
ಸುಚಿತ್ರ ಇತ್ತೀಚಿನ ಸಂದರ್ಶನವೊಂದರಲ್ಲಿ ಧನುಷ್ ಮತ್ತು ಐಶ್ವರ್ಯ ವಿಚ್ಛೇದನದ ಕುರಿತಾಗಿ ಮಾತನಾಡುತ್ತಾ, ಅವರಿಬ್ಬರೂ ಕೂಡಾ ವಿವಾಹೇತರ ಸಂಬಂಧ ಹೊಂದಿದ್ದಾರೆ, ತಮ್ಮವರ ಜೊತೆಗೆ ಪಬ್, ಪಾರ್ಟಿ ಎಂದು ಸುತ್ತಿದ್ದಾರೆ. ಒಬ್ಬರು ಮತ್ತೊಬ್ಬರಿಗೆ ಮೋಸವನ್ನು ಮಾಡಿಕೊಂಡಿದ್ದಾರೆ ಎನ್ನುವ ಮಾತುಗಳನ್ನು ಸಹಾ ಹೇಳಿದ್ದಾರೆ.
ನಾನು ಐಶ್ವರ್ಯ ಮತ್ತು ಧನುಷ್ ಜೊತೆ ಬಾರ್ ನಲ್ಲಿ ಕುಳಿತು ಡ್ರಿಂಕ್ಸ್ ಮಾಡಿದ್ದೇನೆ. ಐಶ್ವರ್ಯ ಒಬ್ಬ ಒಳ್ಳೆಯ ತಾಯಿಯಲ್ಲ, ಧನುಷ್ ಒಬ್ಬರೇ ತಂದೆಯ ಜವಾಬ್ದಾರಿಗಳನ್ನು ನಿಭಾಯಿಸಿದ್ದಾರೆ. ಅವರ ಮೇಲೆ ನನಗೂ ಸಹಾ ಸಿಟ್ಟಿದೆ. ಆದರೆ ಒಬ್ಬ ತಂದೆಯಾಗಿ ಅವರು ದಿ ಬೆಸ್ಟ್ ಎನ್ನುವ ಮಾತುಗಳನ್ನು ಸಹಾ ಸುಚಿತ್ರ ಹೇಳಿರುವುದು ಗಮನಾರ್ಹವಾಗಿದೆ.