Ranjini Haridas: ಹೇಮಾ ಸಮಿತಿ ವರದಿ (Hema committee report) ಮಲೆಯಾಳಂ ಸಿನಿಮಾ ರಂಗವನ್ನು (Mollywood) ಅಲುಗಾಡಿಸಿದೆ, ಮಲೆಯಾಳಂ ಸಿನಿಮಾ ಲೋಕದ ಕತ್ತಲೆ ಕಾಂಡಗಳನ್ನು ಜಗಜ್ಜಾಹೀರು ಮಾಡಿದೆ. ಇದೇ ವೇಳೆ ಹಲವು ನಟಿಯರು ಮಲೆಯಾಳಂ ಸಿನಿಮಾ ರಂಗದಲ್ಲಿ ತಮಗೆ ಎದುರಾದ, ತಾವು ಎದುರಿಸಿದ ಕರಾಳ ಘಟನೆಗಳ ಕುರಿತಾಗಿ ಮುಕ್ತವಾಗಿ ಮಾತನಾಡುತ್ತಿದ್ದಾರೆ. ನಟಿಯರ ಮೇಲೆ ನಡೆದ ಲೈಂ ಗಿ ಕ ದೌರ್ಜನ್ಯಗಳು ಒಂದೊಂದಾಗಿ ಹೊರ ಬರುತ್ತಿವೆ.
ಈ ವೇಳೆ ನಿರೂಪಕಿ ಹಾಗೂ ಕಿರುತೆರೆಯ ಖ್ಯಾತ ನಟಿ ರಂಜಿನಿ ಹರಿದಾಸ್ (Ranjini Haridas) ಲೈಂ ಗಿ ಕ ದೌರ್ಜನ್ಯ ಪ್ರಕರಣಗಳ ಬಗ್ಗೆ ಮಾದ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿದ್ದು, ಈಗ ಹೊರ ಬಂದಿರುವುದು ಇಂಡಸ್ಟ್ರಿಯಲ್ಲಿ ಹಗರಣವಾಗಿದ್ದು, ದೊಡ್ಡ ಶಾರ್ಕ್ ಗಳು ತಪ್ಪಿಸಿಕೊಳ್ಳುತ್ತಿವೆ ಎನ್ನುವ ಶಾಕಿಂಗ್ ಮಾತುಗಳನ್ನು ಹೇಳಿದ್ದಾರೆ.
ರಂಜಿನಿ ಅವರು ತನಗೆ ಖ್ಯಾತ ನಟನೊಬ್ಬ ನಗ್ನ ಫೋಟೋ ಅಂದರೆ ಅಂಗಿಯನ್ನು ಧರಿಸದೇ ಒಂದು ಫೋಟೋವನ್ನ ಕಳುಹಿಸಿದ್ದ. ನಂತರ ನನಗೆ ನನ್ನ ಅಂತದೊಂದು ಫೋಟೋ ಕಳುಹಿಸಲು ಕೇಳಿದ. ನಾನು ರಾಂಗ್ ವಿಂಡೋ ಎಂದು ಉತ್ತರವನ್ನು ಕೊಟ್ಟೆ, ಆ ಫೋಟೋ ಈಗ ನನ್ನ ಬಳಿ ಇಲ್ಲ ಅದಕ್ಕೆ ಅವರ ಹೆಸರನ್ನು ಹೇಳಲಿಲ್ಲವೆಂದು ಹೇಳಿದ್ದಾರೆ.
ಚಿಕ್ಕ ವಯಸ್ಸಿನ ಹುಡುಗಿಯರು ಸಹಾ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗುತ್ತಾರೆ. ಉದ್ಘಾಟನಾ ಸಮಾರಂಭಗಳಲ್ಲಿ ಹಾಗೂ ಮಾಡೆಲಿಂಗ್ ಉದ್ಯಮದಲ್ಲಿ ಲೈಂ ಗಿಕ ಶೋಷಣೆ ಹೆಚ್ಚಾಗಿದೆ. ಕಣ್ಣೂರಿನಲ್ಲಿ ಜಾಹೀರಾತು ಚಿತ್ರೀಕರಣದ ವೇಳೆ ತಮಗೂ ಅಂತಹ ಕೆಟ್ಟ ಅನುಭವ ಆಗಿದೆ ಎಂದು ಸಹಾ ನಟಿ ಹೇಳಿಕೊಂಡಿದ್ದಾರೆ.
Telugu Cinema: ಬಾಲಯ್ಯನ ಬ್ಲಾಕ್ ಬಸ್ಟರ್ ಸಿನಿಮಾ ಆಫರ್ ಅನ್ನೇ ರಿಜೆಕ್ಟ್ ಮಾಡಿದ್ರು ಟಾಲಿವುಡ್ ಸ್ಟಾರ್ ನಟಿಯರು