Actress Sithara: ನಟಿ ಸಿತಾರಾ (Actress Sithara) ಕನ್ನಡ ಮಾತ್ರವೇ ಅಲ್ಲದೇ ದಕ್ಷಿಣ ಸಿನಿಮಾಗಳಲ್ಲಿ ಸಾಕಷ್ಟು ಹೆಸರನ್ನು ಪಡೆದುಕೊಂಡಿದ್ದಾರೆ. ತಮ್ಮ ಅಂದ, ಅಭಿನಯ ಮತ್ತು ಮನೋಜ್ಞ ನಟನೆಯಿಂದಲೇ ಅಪಾರ ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ. ಚತುರ್ಭಾಷಾ ನಟಿಯಾಗಿ ಹೆಸರನ್ನ ಮಾಡಿರುವ ಈ ನಟಿ ಅಪಾರವಾದ ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ. ಮೂಲತಃ ಮಲೆಯಾಳಂ ನಟಿಯಾದ ಇವರು ತೊಂಬತ್ತರ ದಶಕದಲ್ಲಿ ಬಹು ಬೇಡಿಕೆಯ ನಟಿಯಾಗಿದ್ದಾರೆ.
ಈಗಲೂ ಪೋಷಕ ಪಾತ್ರಗಳಲ್ಲಿ ಮಿಂಚುತ್ತಿರುವ ನಟಿ ಒಂದಾದ ನಂತರ ಮತ್ತೊಂದು ಸಿನಿಮಾದಲ್ಲಿ ನಟಿಸುತ್ತಲೇ ಇದ್ದಾರೆ. ನಟಿ ಸಿತಾರ ಅವರಿಗೆ ಈಗ ವಯಸ್ಸು 51 ರ ಹತ್ತಿರಕ್ಕೆ ತಲುಪಿದೆ. ಆದರೂ ನಟಿ ಮದುವೆಯಾಗದೇ ಒಂಟಿಯಾಗಿಯೇ ಉಳಿದಿದ್ದಾರೆ ಎನ್ನುವುದು ಸಹಾ ಸತ್ಯ. ನಟಿ ಏಕೆ ಮದುವೆಯಾಗಿಲ್ಲ ಎನ್ನುವ ಪ್ರಶ್ನೆ ಅನೇಕರ ಮನಸ್ಸಿನಲ್ಲಿದೆ.
ಸಿತಾರ ಅವರೇ ಸಂದರ್ಶನವೊಂದರಲ್ಲಿ ತಾನೇಕೆ ಮದುವೆಯಾಗಿಲ್ಲ ಎನ್ನುವುದನ್ನ ಹೇಳಿದ್ದರು. ಮನೆಯವರಿಂದ ಸಾಕಷ್ಟು ಮದುವೆ ಪ್ರಪೋಸಲ್‌ಗಳು ಬಂದವಾದರೂ ನಾನು ಚಿತ್ರರಂಗದಲ್ಲಿ ಒಬ್ಬರನ್ನು ಪ್ರೀತಿಸುತ್ತಿದ್ದೆ, ಆದರೆ ಆ ಪ್ರೀತಿ ಉಳಿಯಲಿಲ್ಲ ಮತ್ತು ನಾನು ಅವನ ಬಗ್ಗೆ ಆಲೋಚನೆ ಮಾಡುತ್ತಿದ್ದ ಕಾರಣ ಮತ್ತೆ ಮದುವೆಯಾಗುವ ಮನಸ್ಸು ಮಾಡಲಿಲ್ಲ ಎಂದಿದ್ದಾರೆ.
ಇದಲ್ಲದೇ ಇನ್ನೊಂದು ವಿಚಾರವನ್ನು ಸಹಾ ನಟಿ ಹೇಳಿಕೊಂಡಿದ್ದಾರೆ. ಮದುವೆ ಆಗದಿರಲು ಇನ್ನೊಂದು ಬಲವಾದ ಕಾರಣವೂ ಇದೆ. ನಾನು ನನ್ನ ತಂದೆ ಪರಮೇಶ್ವರನ್ ನಾಯರ್ ಅವರಿಗೆ ತುಂಬಾ ಹತ್ತಿರವಾಗಿದ್ದೆ, ತಂದೆ ತಾಯಿಯನ್ನು ಬಿಟ್ಟು ಬದುಕೋದು ಸಾಧ್ಯವಿರಲಿಲ್ಲ ಅದಕ್ಕೆ ಮದುವೆಯಾಗಲು ಇಷ್ಟಪಡಲಿಲ್ಲ, ನನ್ನ ತಂದೆ ತೀರಿಕೊಂಡ ನಂತರ, ಮದುವೆಯಾಗುವ ಆಲೋಚನೆಯೇ ಕೊನೆಯಾಯಿತು ಎಂದಿದ್ದಾರೆ.
Samatha: ಮದುವೆ ಆಗಿರೋ ನಿರ್ದೇಶಕನ ಜೊತೆಗೆ ಸಮಂತಾ ಡೇಟಿಂಗ್; ಶುರುವಾಯ್ತಾ ನಟಿಗೆ ಲವ್