Actress Jayasudha: ಆ ಕ್ರಿಕೆಟ್ ಆಟಗಾರನ್ನ ಮದುವೆಯಾಗಲು ಇಷ್ಟ ಪಟ್ಟೆ, ಆದ್ರೆ ಸಲಿಂಗಕಾಮಿ ಅಂತ ತಿಳಿದು ಶಾಕ್ ಆದೆ

Written by Soma Shekar

Published on:

---Join Our Channel---

Actress Jayasudha : ದಕ್ಷಿಣ ಸಿನಿಮಾ ರಂಗದ ಹಿರಿಯ ನಟಿಯರಲ್ಲಿ ಜಯಸುಧಾ (Actress Jayasudha) ಅವರು ಸಹಾ ಒಬ್ಬರು. ಟಾಲಿವುಡ್ ನಲ್ಲಿ (Tollywood) ಸಹಜ ನಟಿಯೆಂದೇ ಹೆಸರನ್ನು ಪಡೆದಿರುವ ಈ ನಟಿ ತೆಲುಗು ಸಿನಿಮಾ ರಂಗದಲ್ಲಿ ತಮ್ಮದೇ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಪ್ರಸ್ತುತ ಕೂಡಾ ಸಿನಿಮಾಗಳಲ್ಲಿ ಸಕ್ರಿಯವಾಗಿರುವ ನಟಿ ಪೋಷಕ ಪಾತ್ರಗಳಲ್ಲಿ ನಟಿಸುತ್ತಾ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ.

ನಟಿಯು ಇತ್ತೀಚಿನ ದಿನಗಳಲ್ಲಿ ನೀಡುತ್ತಿರುವ ಸಂದರ್ಶನಗಳಲ್ಲಿ ತಮ್ಮ ಜೀವನದ ಒಂದಷ್ಟು ಆಸಕ್ತಿಕರ ವಿಚಾರಗಳನ್ನು ಹಂಚಿಕೊಂಡು ಗಮನವನ್ನು ಸೆಳೆಯುತ್ತಿದ್ದಾರೆ.‌ ಖಾಸಗಿ ಜೀವನದ ವಿಚಾರಕ್ಕೆ ಬಂದರೆ ನಟಿ ಜಯಸುಧಾ ಅವರಿಗೆ ಎರಡು ಮದುವೆಯಾಗಿದೆ. ಅವರ ಎರಡನೇ ಪತಿ ಆ ತ್ಮ ಹ ತ್ಯೆ ಮಾಡಿಕೊಂಡು ಇಹಲೋಕವನ್ನು ತ್ಯಜಿಸಿದ್ದಾರೆ.

ಇವೆಲ್ಲವುಗಳ ನಡುವೆ ನಟಿ ಮದುವೆಗೆ ಮುಂಚಿನ ತಮ್ಮ ಭಾವನೆಗಳ ಕುರಿತಾಗಿ ಒಂದಷ್ಟು ವಿಚಾರಗಳನ್ನು ಮಾತನಾಡಿದ್ದು, ಆರಂಭದಲ್ಲಿ ನನಗೆ ತೆಲುಗು ಸಿನಿಮಾಗಳ ಹೀರೋಗಳ ಬಗ್ಗೆ ಸಣ್ಣ ಸೆಳೆತವಿತ್ತು ಎನ್ನುವ ಮಾತನ್ನು ಹೇಳಿದುವ ನಟಿ ತಾನು ಕ್ರಿಕೆಟ್ ಆಟಗಾರರ ಮೇಲೆ ಹೆಚ್ಚು ಒಲವಿತ್ತು. ಆದ್ದರಿಂದಲೇ ನಾನು ಪಾಕಿಸ್ತಾನ ಆಟಗಾರ ಇಮ್ರಾನ್ ಖಾನ್ ಅವರನ್ನು ಇಷ್ಟ ಪಟ್ಟಿದ್ದೆ ಮತ್ತು ಮದುವೆಯಾಗಲು ಬಯಸಿದ್ದೆ.

ಇಮ್ರಾನ್ ಖಾನ್ (Imran Khan) ಅವರನ್ನು ನಾನು ಮದುವೆಯಾಗಬೇಕೆಂದು ಇಷ್ಟ ಪಟ್ಟಿದ್ದೆ. ಆದರೆ ಶಾಕಿಂಗ್ ಎನ್ನುವಂತೆ ಅವರು ಸಲಿಂಗಕಾಮಿ ಎಂದು ತಿಳಿದಾಗ ನನಗೆ ಜೀವನದಲ್ಲಿ ಹೆಚ್ಚಾಗಿ ಏನೂ ಬಯಸಬಾರದು ಎಂದು ಅನಿಸಿತ್ತು ಎನ್ನುವ ಮಾತುಗಳನ್ನು ಜಯಸುಧಾ ಅವರು ಹೇಳಿದ್ದು, ನಟಿ ಹಂಚಿಕೊಂಡ ವಿಚಾರಗಳು ಈಗ ಅನೇಕರಿಗೆ ಅಚ್ಚರಿ ಯನ್ನು ಮೂಡಿಸಿದೆ.

Bigg Boss: ವಿಜಯ್ ಸೇತುಪತಿ VS ನಯನತಾರಾ, ಶುರುವಾಯ್ತು ಜಿದ್ದಾಜಿದ್ದಿ ಪೈಪೋಟಿ, ಇಬ್ಬರಲ್ಲಿ ಗೆಲುವು ಯಾರಿಗೆ?

Leave a Comment