Bigg Boss Kannada: ಬಿಗ್ ಬಾಸ್ ನ ಒಂದು ಹೊಸ ಸೀಸನ್ ಆರಂಭ ಆಗ್ತಿದೆ ಅಂದಾಗಲೇ ಈ ಸಲ ಯಾರೆಲ್ಲಾ ಸ್ಪರ್ಧಿಗಳಿಗೆ ಬಿಗ್ ಬಾಸ್ (Bigg Boss Kannada) ಮನೆಗೆ ಎಂಟ್ರಿ ಕೊಡ್ತಾರೆ ಅನ್ನೋ ವಿಚಾರವಾಗಿ ಸಂಭಾವ್ಯ ಸ್ಪರ್ಧಿಗಳು ಅಂತ ಒಂದಷ್ಟು ಜನರ ಹೆಸರುಗಳು ಹರಿದಾಡಲು ಆರಂಭವಾಗುತ್ತದೆ. ಅಂತಹ ಹೆಸರುಗಳಲ್ಲಿ ಒಂದು ವರ್ಷಾ ಕಾವೇರಿ (Varsha Kaveri) ಅವರು ಹೆಸರಾಗಿದೆ.
ಸೋಶಿಯಲ್ ಮೀಡಿಯಾ ಮೂಲಕ ಹೆಸರನ್ನು ಮಾಡಿರುವ ವರ್ಷಾ ಕಾವೇರಿ ಅವರು ಬಿಗ್ ಬಾಸ್ ಮನೆಗೆ ಸ್ಪರ್ಧಿಯಾಗಿ ಬರ್ತಾರೆ ಅನ್ನೋ ಸುದ್ದಿಗಳು ಹರಿದಾಡುತ್ತಲೇ ಇದೆ. ಈ ವಿಚಾರವನ್ನು ಗಮನಿಸಿರುವ ವರ್ಷಾ ಅವರು ಇದಕ್ಕೆ ತಾವೇ ಸ್ಪಷ್ಟನೆಯನ್ನು ನೀಡುತ್ತಾ ಪೋಸ್ಟ್ ಒಂದನ್ನು ಶೇರ್ ಮಾಡಿಕೊಂಡಿದ್ದಾರೆ.
ವರ್ಷಾ ಅವರು ತಮ್ಮ ಪೋಸ್ಟ್ ನಲ್ಲಿ ನಮಸ್ಕಾರ, ಎಲ್ಲರಿಗೂ. ನೀವು ನೋಡುತ್ತಿರುವ, ಕೇಳುತ್ತಿರುವ ಸುದ್ದಿ ಕೇವಲ ಸುದ್ದಿ ಮಾತ್ರ. ನಾನು ಯಾವುದೇ ರಿಯಾಲಿಟಿ ಶೋಗೆ ಹೋಗುತ್ತಿಲ್ಲ. ಭಾಗಿ ಆಗುತ್ತಿಲ್ಲ. ನನ್ನ ಪ್ರೊಫೈಲ್ ಮತ್ತು ಚಾನೆಲ್‌ಗಳಲ್ಲಿ ಜನ ಕಮೆಂಟ್ ಮಾಡುತ್ತಿರುವುದು ನೋಡುತ್ತಿರುವೆ. ನನ್ನಿಂದ ಮಾಹಿತಿ ಬಂದರೆ ಮಾತ್ರ ನಂಬಿ. ಹೋಗುವುದಿದ್ದರೆ ನಾನು ಕ್ಲ್ಯೂ ಕೊಡುತ್ತೇನೆ.
ಸದ್ಯಕ್ಕೆ ನನಗೆ ಜವಾಬ್ದಾರಿಗಳಿವೆ, ಮಾಡುವುದಕ್ಕೆ ಹಲವು ಕೆಲಸಗಳಿವೆ. ಟಿಆರ್‌ಪಿ ಗೋಸ್ಕರ ಕಥೆ ಕಟ್ಟುತ್ತಿದ್ದಾರೆ. ಸಾಧನೆ ಮಾಡಿರುವ ಅದೆಷ್ಟೋ ಜನರು ಮುಂದೆ ನಾನು ಏನೂ ಅಲ್ಲ.. ನಾನು ಈಗಷ್ಟೇ ಬೆಳೆಯುತ್ತಿರುವ ವ್ಯಕ್ತಿ ನಾನು ಸಾಧನೆ ಮಾಡಲು ಸಾಕಷ್ಟಿದೆ ಎಂದು ಹೇಳಿ ತಾನು ಬಿಗ್ ಬಾಸ್ ಗೆ ಹೋಗುತ್ತಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.