Mrunal Thakur: ಬಾಲಿವುಡ್ ಸ್ಟಾರ್ ನಟಿಯರಿಗೆ ನಡುಕ ಹುಟ್ಟಿಸಿದ ಸೀತಾರಾಮಂ ನಟಿ, ಬಂಪರ್ ಆಫರ್ ಪಡೆದ ಮೃಣಾಲ್

Written by Soma Shekar

Published on:

---Join Our Channel---

Mrunal Thakur: ಕಿರುತೆರೆಯಿಂದ ಬಂದು ಸಿನಿಮಾ ರಂಗದಲ್ಲಿ ಸ್ಟಾರ್ ನಟಿಯರಾದವರು ಬೆರಳಣಿಕೆಯಷ್ಟು ಅನ್ನೋದು ವಾಸ್ತವ. ಕೆಲವು ಸೀರಿಯಲ್ ನಟಿಯರು ಒಂದೆರಡು ಸಿನಿಮಾ ಮಾಡಿ ನಂತರ ಮತ್ತೆ ಸೀರಿಯಲ್ ಕಡೆಗೆ ಬಂದರೆ ಇನ್ನೂ ಕೆಲವರು ಸಿನಿಮಾ ರಂಗದಲ್ಲಿ ಛಾಪು ಮೂಡಿಸುತ್ತಾರೆ. ಅಂತಹ ನಟಿಯರಲ್ಲಿ ಒಬ್ಬರು ಬಾಲಿವುಡ್ ಬೆಡಗಿ ಮೃಣಾಲ್ ಠಾಕೂರ್ (Mrunal Thakur).‌

ಸೀತಾ ರಾಮಂ (Sita Ramam) ಸಿನಿಮಾ ಮೂಲಕ ತೆಲುಗು ಪ್ರೇಕ್ಷಕರ ಮುಂದೆ ಬಂದ ಮೃಣಾಲ್ ಮೊದಲ ಸಿನಿಮಾ ಮೂಲಕವೇ ಅಪಾರ ಜನ ಮೆಚ್ಚುಗೆ ಪಡೆದರು. ಆದರೆ ಈ ಸಿನಿಮಾ ನಂತರ ನಿರೀಕ್ಷಿತ ಗೆಲುವು ಟಾಲಿವುಡ್ ನಲ್ಲಿ ಸಿಗದೇ ಹೋದರೂ ನಟಿಯ ಕ್ರೇಜ್ ಮಾತ್ರ ಕಡಿಮೆಯಾಗಿಲ್ಲ. ಈಗ ನಟಿಗೆ ಬಾಲಿವುಡ್ ನಲ್ಲಿ ಅದೃಷ್ಟ ಒಲಿದು ಬಂದಿದೆ.

ಬಾಲಿವುಡ್ ನಲ್ಲಿ ಈಗಾಗಲೇ ಗುರುತಿಸಿಕೊಂಡಿರುವ ಮೃಣಾಲ್‌ ಅವರಿಗೆ ಇದೀಗ ಸಂಜಯ್ ಲೀಲಾ ಬನ್ಸಾಲಿ (Sanjay Leela Bansali) ಅವರ ಸಿನಿಮಾದಲ್ಲಿ ನಟಿಸುವ ಅವಕಾಶ ದೊರೆತಿದೆ. ಈ ಬಾರಿ ಸಂಜಯ್ ಲೀಲಾ ಬನ್ಸಾಲಿ ಹೊಸ ಜೋಡಿಯ ಕಡೆಗೆ ಗಮನ ನೀಡಿದ್ದು, ಸಿದ್ಧಾಂತ್ ಚತುರ್ವೇದಿ (Siddhant Chaturvedi) ಮತ್ತು ಮೃಣಾಲ್ ಜೋಡಿಯನ್ನು ಪ್ರೇಕ್ಷಕರ ಮುಂದೆ ತರುತ್ತಿದ್ದಾರೆ.‌

ಸಂಜಯ್ ಲೀಲಾ ಬನ್ಸಾಲಿ ಸಿನಿಮಾದಲ್ಲಿ ನಟಿಸುವುದೇ ಒಂದು ಸಕ್ಸಸ್ ಎನ್ನುವ ಮಾತಿದೆ. ಅಂತಹುದರಲ್ಲಿ ಈಗ ಮೃಣಾಲ್ ಗೆ ಈ ನಿರ್ದೇಶಕನ ಸಿನಿಮಾ ಆಫರ್ ದಕ್ಕಿರುವುದನ್ನು ಕೇಳಿ ನಟಿಯ ಅಭಿಮಾನಿಗಳಂತೂ ಸಿಕ್ಕಾಪಟ್ಟೆ ಥ್ರಿಲ್ ಆಗಿದ್ದಾರೆ. ಈ ಸಿನಿಮಾ ನಟಿಗೆ ಬಾಲಿವುಡ್ ನಲ್ಲಿ ಮತ್ತೊಂದು ಎತ್ತರಕ್ಕೆ ಏರಲು ನೆರವಾಗುವ ಸಾಧ್ಯತೆಗಳು ದಟ್ಟವಾಗಿದೆ.

Puttakkana Makkalu: ಕಂಠಿ ಕಣ್ಣೆದುರು ಬಂದೇ ಬಿಡ್ತಾ ಸಿಂಗಾರಿ ಸತ್ಯ; ಕಂಠಿ ದನಿ ಕೇಳಿ ಬೆಚ್ಚಿ ಬಿದ್ದ ಸಿಂಗಾರಮ್ಮ

Leave a Comment