Anchor Anasuya: ಇತ್ತೀಚಿನ ದಿನಗಳಲ್ಲಿ ಕಿರುತೆರೆಯಲ್ಲಿ ವಯಸ್ಕರ ವಿಷಯಗಳು ಹೆಚ್ಚಾಗಿಯೇ ಪ್ರಸಾರ ಆಗುತ್ತಿವೆ. ಕೆಲವೊಂದು ಕಾರ್ಯಕ್ರಮಗಳನ್ನು ಕುಟುಂಬ ಸಮೇತ ನೋಡಲು ಸಾಧ್ಯವಾಗುತ್ತಿಲ್ಲ ಎಂಬುದಾಗಿ ಅನೇಕರು ಸಾಮಾಜಿಕ ಜಾಲತಾಣಗಳಲ್ಲಿ ಅಸಮಾಧಾನವನ್ನು ಹೊರ ಹಾಕುತ್ತಿದ್ದಾರೆ. ಕೇವಲ ರೇಟಿಂಗ್ ಗಾಗಿ ಅನವಶ್ಯಕವಾದದ್ದನ್ನೆಲ್ಲ ತೋರಿಸಲಾಗುತ್ತಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.
ತೆಲುಗು ಕಿರುತೆರೆಯಲ್ಲಿ ಸ್ಟಾರ್ ನಿರೂಪಕಿಯಾಗಿ, ತೆಲುಗು ಸಿನಿಮಾ ರಂಗದಲ್ಲಿ ನಟಿಯಾಗಿ ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿರುವ ಅನುಸೂಯ (Anchor Anasuya) ಆಗಾಗ ವಿ ವಾ ದಗಳಲ್ಲಿ ಸಿಲುಕಿಕೊಳ್ಳುವುದು ಸಾಮಾನ್ಯವಾದ ವಿಚಾರವಾಗಿದೆ. ಈಗ ಮತ್ತೊಂದು ವಿವಾದದ ಸುಳಿಯಲ್ಲಿ ನಟಿ ಸಿಲುಕಿಕೊಂಡಿದ್ದಾರೆ.
ಟಿವಿ ಕಾರ್ಯಕ್ರಮ ಒಂದರಲ್ಲಿ ಅನುಸೂಯ ಪುಟ್ಟ ಮಗುವಿನ ಕೆನ್ನೆಗೆ ಮುತ್ತನ್ನು ನೀಡಿದ್ದಾರೆ. ಅನಂತರ ತುಟಿಗಳಿಗೆ ಮುತ್ತು ನೀಡುವಂತೆ ಹೇಳಿದ್ದಾರೆ. ಈ ವಿಡಿಯೋ ವೈರಲ್ ಆಗಿದ್ದು ಅನಸೂಯ ಹೆಸರನ್ನು ಹೇಳದೆಯೇ ಇದರ ಬಗ್ಗೆ ಗಾಯಕಿ ಚಿನ್ಮಯಿ (Chinmayi) ಖಾರವಾಗಿಯೇ ಪ್ರತಿಕ್ರಿಯೆ ನೀಡಿದ್ದಾರೆ.
ಪೋಷಕರು ಮತ್ತು ಪ್ರೇಕ್ಷಕರು ಹುರಿದುಂಬಿಸುವಾಗ ನಿರೂಪಕಿಯೊಬ್ಬರು ಮಗುವಿಗೆ ತುಟಿಗಳಿಗೆ ಮುತ್ತು ನೀಡುವಂತೆ ಕೇಳುತ್ತಿರುವುದನ್ನ ನಾನು ನೋಡಿದೆ. ಅದು ತುಂಬಾ ಭ ಯಾ ನಕವಾಗಿತ್ತು. ಈ ಅಂಶಗಳು ಮಕ್ಕಳ ಮೇಲೆ ಪ್ರಭಾವ ಬೀರುತ್ತದೆ. ಒಳ್ಳೆಯ ಸ್ಪರ್ಶ ಮತ್ತು ಕೆಟ್ಟ ಸ್ಪರ್ಶದ ಬಗ್ಗೆ ಚಿಕ್ಕ ಮಕ್ಕಳಿಗೆ ಕಲಿಸುವುದು ಪೋಷಕರ ಜವಾಬ್ದಾರಿ.
ಆದರೆ ಇಂತಹ ಕೆಲಸಗಳನ್ನು ಮಾಡುವಾಗ ಚಪ್ಪಾಳೆ ತಟ್ಟುತ್ತಿರುವುದು ನಾಚಿಕೆಗೇಡಿನ ಸಂಗತಿ. ಮಕ್ಕಳೊಂದಿಗೆ ಟಿವಿ ಶೋಗಳು ಭ ಯಾ ನಕ ಆಗಿದೆ. ಮಕ್ಕಳಿಗೆ ಸುರಕ್ಷಿತ ಬಾಲ್ಯವನ್ನು ನೀಡಲು ಬಯಸುವ ಸಮಾಜದಲ್ಲಿ ಇವೆಲ್ಲಾ ಉಪಯುಕ್ತವಲ್ಲ ಎಂದಿದ್ದು, ಪ್ರಸ್ತುತ ಆ ಪೋಸ್ಟನ್ನು ಸೋಶಿಯಲ್ ಮೀಡಿಯಾದಿಂದ ಡಿಲೀಟ್ ಮಾಡಲಾಗಿದೆ.
Actor Chethan: ಜೈಲಿನಲ್ಲಿದ್ದಾಗ ಅಲ್ಲಿನ ಊಟ ಇಷ್ಟ ಆಯ್ತು, ಸಮಸ್ಯೆ ಆಗಲಿಲ್ಲ; ನಟ ಚೇತನ್ ಅಹಿಂಸಾ ಮಾತು