Shruti Haasan: ಕಾಲಿವುಡ್ ಬೆಡಗಿ, ಹಿರಿಯ ನಟ ಕಮಲ ಹಾಸನ್ ಅವರ ಪುತ್ರಿ ಶೃತಿ ಹಾಸನ್ (Shruti Haasan) ಈಗಾಗಲೇ ಬಹುಭಾಷಾ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ನಟಿ ಸಿನಿಮಾ ವಿಚಾರವಾಗಿ ಮಾತ್ರವೇ ಅಲ್ಲದೇ ಹೆಚ್ಚಾಗಿ ತಮ್ಮ ವೈಯಕ್ತಿಕ ಜೀವನದ ಬಗ್ಗೆಯೇ ಹೆಚ್ಚು ಸುದ್ದಿಯಾಗುತ್ತಾರೆ. ಈಗಾಗಲೇ ಲವ್, ಡೇಟಿಂಗ್ ಮತ್ತು ಬ್ರೇಕಪ್ ಗಳಿಂದ ಸಾಕಷ್ಟು ಗಮನ ಸೆಳೆದಿದ್ದಾರೆ.
ಶಾಂತನು (Shantanu) ಜೊತೆಗೆ ಕೆಲವು ವರ್ಷಗಳಿಂದ ಡೇಟಿಂಗ್ ಮಾಡ್ತಿದ್ದ ನಟಿ ಇತ್ತೀಚಿಗೆ ಅವರ ಜೊತೆಗೂ ಬ್ರೇಕಪ್ ಮಾಡಿಕೊಂಡಿದ್ದಾರೆ ಶೃತಿ ಹಾಸನ್. ಇವೆಲ್ಲವುಗಳ ನಡುವೆ ನಟಿ ತನ್ನನ್ನ ಎಲ್ಲರೂ ಬಳಸಿಕೊಂಡು ಮೋಸ ಮಾಡಿದ್ದಾರೆಂದು ಹೇಳಿರುವ ವಿಚಾರಗಳು ವೈರಲ್ ಆಗಿದೆ.
ಶೃತಿ ಹಾಸನ್ ಮಾತನಾಡುತ್ತಾ, ನನ್ನ ಜೊತೆಗೆ ಆಗಾಗ ಮಧ್ಯಾಹ್ನ, ರಾತ್ರಿ ಊಟ, ಉಪಹಾರ ಅಂತ ನನ್ನ ಜೊತೆಗೆ ಹಲವರು ಬರ್ತಾ ಇದ್ದರು. ಆಗೆಲ್ಲಾ ಒಟ್ಟಿಗೆ ಹೋಟೆಲ್ ಗೆ ಹೋದಾಗ ನಾನೇ ಬಿಲ್ ಅನ್ನ ಕಟ್ತಿದ್ದೆ. ಹೀಗಾಗಿ ನಾನು ಬಹಳಷ್ಟು ಹಣವನ್ನು ಕಳೆದುಕೊಂಡೆ.
ಅದರಲ್ಲೂ ಹೆಚ್ಚಾಗಿ ಹುಡುಗರಿಗೆ ಬಿಲ್ ಕಟ್ಟುತ್ತಿದ್ದೆ. ಹೀಗಾಗಿ ನಾನು ಹಲವರನ್ನು ನಂಬಿ ಹಣದ ವಿಚಾರದಲ್ಲಿ ತುಂಬಾ ಮೋಸ ಹೋಗಿದ್ದೆ ಎನ್ನುವ ಮಾತುಗಳನ್ನು ಹೇಳಿಕೊಂಡಿದ್ದಾರೆ. ಸದ್ಯ ನಟಿ ರಜನೀಕಾಂತ್ ನಾಯಕನಾಗಿರುವ ಕೂಲಿ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.
ಐಶ್ವರ್ಯ ರೈ ನನಗೆ I Love you ಅಂತ ಮೆಸೆಜ್ ಮಾಡಿದ್ರು, ಆಕೆ ಪ್ರೆಗ್ನೆಂಟ್ ಆದಾಗ ಸಹಿಸೋಕಾಗ್ಲಿಲ್ಲ: Ram Gopal Varma