Bigg Boss Kannada : ಬಿಗ್ ಬಾಸ್ ಕನ್ನಡ (Bigg Boss Kannada) ಸೀಸನ್ ಹನ್ನೊಂದರಲ್ಲಿ ಈ ವಾರದ ಆರಂಭದಲ್ಲಿ ಇಬ್ಬರು ಸ್ಪರ್ಧಿಗಳು ವೈಲ್ಡ್ ಕಾರ್ಡ್ ಗಳಾಗಿ ದೊಡ್ಮೆನೆಗೆ ಎಂಟ್ರಿ ಕೊಟ್ಟಿದ್ದಾರೆ. ನಟಿ ಶೋಭಾ ಶೆಟ್ಟಿ (Shobha Shetty) ಮತ್ತು ರಜತ್ (Rajath) ದೊಡ್ಮನೆಯಲ್ಲಿ (BBK 11) ವೈಲ್ಡ್ ಕಾರ್ಡ್ ಸ್ಪರ್ಧಿಗಳಾಗಿ ಎಂಟ್ರಿಯನ್ನು ಪಡೆದುಕೊಂಡಿದ್ದಾರೆ. ಮನೆಗೆ ಬಂದ ಕೆಲವೇ ದಿನಗಳಲ್ಲಿ ಇಬ್ಬರೂ ಸಹಾ ಮನೆಯಲ್ಲಿ ಇರುವವರಿಗೆ ಗಟ್ಟಿ ಸ್ಪರ್ಧೆ ನೀಡ್ತಾರೆ ಅಂತಾನೇ ನಂಬಿದ್ದಾರೆ ಪ್ರೇಕ್ಷಕರು. ಮೊದಲ ವಾರದಲ್ಲಿ ಇಬ್ಬರೂ ಕೂಡಾ ಉತ್ತಮವಾಗಿ ಆಟವನ್ನು ಆಡಿದ್ದಾರೆ. ಆದರೆ ಮನೆಯಲ್ಲಿ ಮೊದಲಿನಿಂದ ಇರುವ ಸ್ಪರ್ಧಿಗಳಿಗೆ ಇವರ ಬಗ್ಗೆ ಹೊಟ್ಟೆಯುರಿ ಆರಂಭವಾಗಿದೆ.
ರಜತ್ ಗೆ ಈ ವಾರ ಆಟದ ವಿಚಾರದಲ್ಲಿ ಮೆಚ್ಚುಗೆ ಸಿಕ್ಕರೂ ಆಡಿದ ಮಾತುಗಳ ಕಾರಣದಿಂದಾಗಿ ಕಳಪೆ ಸಿಕ್ಕಿದೆ. ಶೋಭಾ ಅವರಿಗೂ ಮೆಚ್ಚುಗೆಗಳು ಸಿಕ್ಕಿದೆ. ಮನೆ ಮಂದಿಗೆ ಇವರ ಬಗ್ಗೆ ಅಸಮಾಧಾನ ಎನ್ನುವುದು ಅವರ ಮಾತುಗಳಿಂದ ತಿಳಿದು ಬಂದಿದೆ. ತ್ರಿವಿಕ್ರಮ್ ಮಂಜು ಮತ್ತು ಗೌತಮಿ (Gauthami) ಹತ್ರ ಈ ವಿಚಾರವನ್ನು ಮಾತನಾಡಿದ್ದಾರೆ. ‘ನಮ್ಮ ತಂಡದ ಒಬ್ಬರೂ ಕ್ಯಾಪ್ಟನ್ಸಿ ರೇಸ್ನಲ್ಲಿ ಇಲ್ಲ. ಅದು ಬೇಸರದ ವಿಚಾರ’ ಅಂತ ತ್ರಿವಿಕ್ರಮ್ ಅವರು ಹೇಳಿದ್ದಾರೆ.
ಆಗ ಗೌತಮಿ, ‘ನಾನು ಶೋಭಾ ತಂಡದಲ್ಲಿ ಇದ್ದ ಹೊರತಾಗಿಯೂ ಕ್ಯಾಪ್ಟನ್ಸಿ ರೇಸ್ ಗೆ ಹೋಗೋಕೆ ಆಗುತ್ತಿಲ್ಲ. ಅದು ನನಗೆಷ್ಟು ಬೇಸರ ಮೂಡಿಸಿರಬಹುದು ಯೋಚನೆ ಮಾಡಿದ್ದೀರಾ ಅಂತ ಕೇಳಿದ್ದಾರೆ. ಆಗ ತ್ರಿವಿಕ್ರಮ್ ಅವರು ಒಂದಷ್ಟು ವಿಚಾರಗಳನ್ನು ನೇರವಾಗಿಯೇ ಮಾತನಾಡಿದ್ದಾರೆ. ತ್ರಿವಿಕ್ರಮ್ (Trivikram) ಮಾತನಾಡ್ತಾ, ಶಿವರಾಜ್ಕುಮಾರ್ ಹಾಗೂ ಸುದೀಪ್ ನಟನೆಯ ‘ದಿ ವಿಲನ್’ ಸಿನಿಮಾದ ಸಾಂಗ್ ನ ಸಾಲುಗಳನ್ನ ಹೇಳಿದ್ದಾರೆ.
‘ನಿನ್ನೆ ಮೊನ್ನೆ ಬಂದವ್ರೆಲ್ಲ ನಂಬರ್ 1 ಅಂತಾರೋ…’ ಎನ್ನುವ ಸಾಲನ್ನ ಹೇಳಿದ್ದಾರೆ ತ್ರಿವಿಕ್ರಮ್. ಏನೇ ಆಗಲಿ ನೀವು ಕ್ಯಾಪ್ಟನ್ ಆಗಬೇಕು. ಅವರಿಗೆ ಅಂದ್ರೆ ರಜತ್ ಮತ್ತು ಶೋಭಾ ಅವರಿಗೆ ಕ್ಯಾಪ್ಟನ್ಸಿ ಬಿಟ್ಟುಕೊಡಬಾರದು ಅಂತ ಹೇಳಿದ್ದಾರೆ ತ್ರಿವಿಕ್ರಮ್. ಈ ತರ ಹೇಳೋ ಮೂಲಕ ಬಿಗ್ ಬಾಸ್ ಮನೇಲಿ ಮೊದಲಿಂದ ಇರೋ ಸ್ಪರ್ಧಿಗಳೇ ಕ್ಯಾಪ್ಟನ್ ಆಗಬೇಕು ಅಂತ ತ್ರಿವಿಕ್ರಮ್ ಇಷ್ಟ ಪಟ್ಟಿದ್ದಾರೆ. ಆ ಮಾತಿಗೆ ಮಂಜು ಸಹಾ ಬೆಂಬಲ ನೀಡಿದ್ದಾರೆ.