Sonakshi Sinha: ಬಾಲಿವುಡ್ ಬೆಡಗಿ ಸೋನಾಕ್ಷಿ ಸಿನ್ಹಾ (Sonakshi Sinha) ಮತ್ತು ಜಹೀರ್ ಇಕ್ಬಾಲ್ (Zaheer Iqbal) ಜೂನ್ 23 ರಂದು ದಾಂಪತ್ಯ ಜೀವನಕ್ಕೆ ಅಡಿಯಿಟ್ಟರು. ಆದರೆ ಇವರ ಮದುವೆ ವಿಚಾರ ಹೊರ ಬಂದಾಗಿನಿಂದಲೂ ಇದು ಸಾಕಷ್ಟು ಚರ್ಚೆಗಳಿಗೆ ಕಾರಣವಾಗಿದೆ ಮತ್ತು ಸೋನಾಕ್ಷಿ ಅವರನ್ನು ಮದುವೆ ವಿಚಾರವಾಗಿ ಬಹಳಷ್ಟು ಟ್ರೋಲ್ ಕೂಡಾ ಮಾಡಲಾಗಿದೆ. ಇವರಿಬ್ಬರ ಧರ್ಮ ಬೇರೆ ಬೇರೆಯಾದ ಕಾರಣದಿಂದಲೇ ಈ ವಿಚಾರ ಹೆಚ್ಚು ಸದ್ದು ಮಾಡಿತ್ತು.
ಅಂತರ್ಧಮೀಯ ಮದುವೆಯಾಗಿದ್ದು ಒಂದಾದರೆ ಮತ್ತೊಂದೆಡೆ ಸೋನಾಕ್ಷಿ ಅವರ ಸಹೋದರ ಈ ಮದುವೆಗೆ ಹಾಜರಾಗದೇ ಇದ್ದಿದ್ದು ಒಂದಷ್ಟು ಚರ್ಚೆಗಳಿಗೆ ಕಾರಣವಾಗಿತ್ತು. ಸೋಶಿಯಲ್ ಮೀಡಿಯಾಗಳಲ್ಲಿ ಸೋನಾಕ್ಷಿ ಅವರ ನಿಂದನೆ ಕಂಡು ಅವರ ತಂದೆ ಶತೃಘ್ನ ಸಿನ್ಹಾ (Shatrughan Sinha) ಪ್ರತಿಕ್ರಿಯೆ ನೀಡಿ ಅಸಮಾಧಾನವನ್ನು ಹೊರ ಹಾಕಿದ್ದಾರೆ.
ಶತೃಘ್ನ ಸಿನ್ಹಾ ಮಾತನಾಡುತ್ತಾ, ಇದು ಮದುವೆಯ ವಿಷಯ, ಎರಡನೆಯದಾಗಿ ಮಕ್ಕಳಿಗೆ ಮದುವೆಯಾಗೋದು ಖಂಡಿತವಾಗಿ ಕಾನೂನುಬಾಹಿರ ಮತ್ತು ಅಸಾಂವಿಧಾನಿಕವಲ್ಲ. ಅವರು ತಮ್ಮ ಸ್ವಂತ ಇಚ್ಛೆಯಿಂದ ಮಾಡಿದ್ದು, ಅದಕ್ಕೆ ನಮ್ಮ ಆಶೀರ್ವಾದವು ಇದ್ದು ನಾನದನ್ನು ಪ್ರಶಂಸೆ ಮಾಡುತ್ತೇನೆ.
ನಾನಲ್ಲದೇ ನನ್ನ ಮಗಳ ಜೊತೆ ಇನ್ಯಾರು ನಿಲ್ತಾರೆ. ನಾನು ನನ್ನ ಪತ್ನಿ ಮಗಳ ಮದುವೆಯನ್ನು ಸಂಭ್ರಮಿಸಲು ಅವಳ ಜೊತೆಗೆ ನಿಂತಿದ್ದೇವೆ. ಮಕ್ಕಳ ಸಂತೋಷ ನಮ್ಮ ಮೊದಲ ಆದ್ಯತೆ ಎಂದು ಹೇಳಿದ್ದಾರೆ ಶತೃಘ್ನ ಸಿನ್ಹಾ. ನಾನು ಅವರನ್ನು ಮೇಡ್ ಫಾರ್ ಈಚ್ ಅದರ್ ಎಂದೇ ಹೇಳುತ್ತೇನೆ. ನಾವು ಸದಾ ಅವರೊಟ್ಟಿಗೆ ಇರುತ್ತೇವೆ ಎಂದಿದ್ದಾರೆ ನಟ.
Jaggesh: ದರ್ಶನ್ ಗೋಸ್ಕರ ಅಂದಿದ್ರೆ ನಾನು ಬರ್ತಾ ಇರ್ಲಿಲ್ಲ; ಕಲಾವಿದರ ಸಂಘದ ಹೋಮ, ನಟ ಜಗ್ಗೇಶ್ ಅವ್ರು ಹೇಳಿದ್ದೇನು?